More

    ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ‘ವಿಜನ್-5’ ಯೋಜನೆ

    ರಮೇಶ ಜಹಗೀರದಾರ್ ದಾವಣಗೆರೆ : ಪ್ರೌಢ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಫಲಿತಾಂಶಮುಖಿ ಕಾರ್ಯತಂತ್ರಗಳನ್ನು ಶಿಕ್ಷಣ ಇಲಾಖೆಯು ರೂಪಿಸಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಮೂಲಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ರಾಜ್ಯಮಟ್ಟದಲ್ಲಿ 5ನೇ ಸ್ಥಾನದೊಳಗೆ ತರುವ ‘ವಿಜನ್-5’ ಯೋಜನೆ ಸಿದ್ಧವಾಗಿದೆ.
     ರಾಜ್ಯಮಟ್ಟದಿಂದ ಬಂದಿರುವ 15 ಅಂಶಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ಈಗಾಗಲೇ ಆರಂಭವಾಗಿವೆ. ಅಧಿಕಾರಿಗಳ ಸಭೆ ಕರೆದು, ಕಾರ್ಯತಂತ್ರದ ಬಗ್ಗೆ ವಿವರಿಸಿ ಟಾಸ್ಕ್ ವಹಿಸಲಾಗಿದೆ.
     ಈಗಿರುವ ವ್ಯವಸ್ಥೆಯಲ್ಲಿನ ಕೊರತೆಗಳನ್ನು ನೀಗಿಸಿ, ಗುಣಮಟ್ಟವನ್ನು ಉತ್ತಮಪಡಿಸಲು ಕಲಿಕಾ ಹೊಂದಾಣಿಕೆಯೊಂದಿಗೆ ರಚನಾತ್ಮಕವಾಗಿ ತೊಡಗಿಕೊಳ್ಳುವ ಪ್ರಯತ್ನ ಇದಾಗಿದೆ. ಶಾಲಾ ಮುಖ್ಯಸ್ಥರು ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಅನುಷ್ಠಾನಕ್ಕೆ ತರಲು ಸೂಚಿಸಲಾಗಿದೆ.
     ರಾಜ್ಯದ ಹಲವು ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗಾಗಿ ವಿಶೇಷ ಕಾರ್ಯತಂತ್ರಗಳನ್ನು ಹೆಣೆದು, ಹಾರ್ಡ್‌ವರ್ಕ್ ಮಾಡುವುದಕ್ಕಿಂತ ಸ್ಮಾರ್ಟ್ ವರ್ಕ್‌ಗೆ ಗಮನ ಹರಿಸಲಾಗಿದೆ. ಇದನ್ನು ಮನಗಂಡು ಇಲಾಖೆಯು ಕಾರ್ಯಯೋಜನೆಯನ್ನು ಸಿದ್ಧಪಡಿಸಿಕೊಂಡಿದೆ.
     ಪಾಲಕರ ಸಭೆ ಕರೆದು ಮನವರಿಕೆ ಮಾಡುವುದು, ಅನುಭವ ಹಂಚಿಕೆ ಕಾರ್ಯಾಗಾರದ ಮೂಲಕ ವಿಷಯ ಬಲವರ್ಧನೆಗೊಳಿಸುವುದು. ಸಂದರ್ಶನ ಸಪ್ತಾಹ ಆಯೋಜಿಸಿ ಅಧಿಕಾರಿಗಳ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಮಾಡುವುದು. ಪ್ರಾಜೆಕ್ಟ್ ವರ್ಕ್‌ಗಳನ್ನು ಮಾಡಿಸಿ ಪರೀಕ್ಷೆಗೆ ಪೂರಕವಾಗಿ ಮಕ್ಕಳನ್ನು ಸಜ್ಜುಗೊಳಿಸುವುದು. ಸಮಗ್ರ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸುವುದು. ಭಾಷಾವಾರು ಕ್ಲಬ್‌ಗಳನ್ನು ಕ್ರಿಯಾಶೀಲಗೊಳಿಸುವುದು ಹೀಗೆ ಹಲವು ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
     …
     * ಶಾಲೆ ದತ್ತು ಪಡೆಯುವುದು
     ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಸಾಧನೆ ಮಾಡಿರುವ 40 ಶಾಲೆಗಳ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಶಾಲೆಗಳನ್ನು ದತ್ತು ನೀಡುವ ಪದ್ಧತಿ ಪಾಲಿಸಲಾಗುತ್ತಿದೆ.
     ಡಿಡಿಪಿಐ, ಇಒ, ಡಿವೈಪಿಸಿ, ಬಿಇಒಗಳು, ಪ್ರಾಚಾರ್ಯರು, ಡಯಟ್ ಹಿರಿಯ ಉಪನ್ಯಾಸಕರು, ಬಿಆರ್‌ಸಿಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಒಂದೊಂದು ಶಾಲೆಯನ್ನು ದತ್ತು ನೀಡಲಾಗಿದೆ. ಅವರು ಆ ಶಾಲೆಗಳಿಗೆ ಆಗಾಗ ಭೇಟಿ ನೀಡಿ, ಗುಣಮಟ್ಟ ಸುಧಾರಣೆಗೆ ಪ್ರಯತ್ನಿಸಬೇಕು.
     …
     * ವಿದ್ಯಾರ್ಥಿಗಳ ಶ್ರೇಣೀಕರಣ
     ತರಗತಿಯ ಒಟ್ಟು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಆಧರಿಸಿ 6 ಗುಂಪುಗಳನ್ನಾಗಿ ವಿಂಗಡಿಸುವುದು. ಪ್ರತಿ ಗುಂಪಿನಲ್ಲಿ 2 ಒಳ ಗುಂಪುಗಳನ್ನು ರಚಿಸಿಕೊಳ್ಳುವುದು. ವರ್ಷ ಪೂರ್ತಿ ಚಟುವಟಿಕೆಗಳನ್ನು ಹಮ್ಮಿಕೊಂಡು, ಆರೂ ವಿಷಯ ಶಿಕ್ಷಕರಿಗೆ ತಲಾ ಒಂದು ಗುಂಪನ್ನು ದತ್ತು ನೀಡಿ, ಉಸ್ತುವಾರಿ ವಹಿಸುವುದು.
     …
     * ಆಪ್ತ ಸಮಾಲೋಚನೆ, ಮನೆ-ಮನೆ ಭೇಟಿ
     ಮನೆಯಲ್ಲಿನ ಕಲಿಕಾ ವಾತಾವರಣದ ಬಗ್ಗೆ ಆಪ್ತ ಸಮಾಲೋಚನೆ ನಡೆಸಿ ಸಮಸ್ಯಾತ್ಮಕ, ಪ್ರತಿಭಾವಂತ ವಿದ್ಯಾರ್ಥಿಗಳ ಮನೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪಾಲಕರಿಗೆ ಕಲಿಕೆ ಪ್ರಗತಿ ಕುರಿತು ಮನವರಿಕೆ ಮಾಡುವುದು.
     …

     (ಕೋಟ್)
     ಇಲಾಖೆಯಿಂದ ನೀಡಿರುವ ಶೈಕ್ಷಣಿಕ ಮಾರ್ಗದರ್ಶಿಯನ್ನು ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ. ಮುಖ್ಯ ಶಿಕ್ಷಕರ ಸಭೆಗಳಾಗಿವೆ. ಗುಣಮಟ್ಟವನ್ನು ಸುಧಾರಿಸಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವ ಗುರಿ ಹೊಂದಲಾಗಿದೆ.
      ಸುರೇಶ್ ಇಟ್ನಾಳ್, ಜಿ.ಪಂ. ಸಿಇಒ
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts