More

    ಐದನೂರು ವರ್ಷದ ಕನಸಿನ ಹಬ್ಬ

    lದಾವಣಗೆರೆ : ಇಂದು 500 ವರ್ಷದ ಕನಸು ಸಾಕಾರಗೊಂಡಿದ್ದು, ದೇಶವೇ ಸಂತೋಷದಲ್ಲಿ ತೇಲುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಹರ್ಷವ್ಯಕ್ತಪಡಿಸಿದರು.
     ನಗರದ ಎಂ.ಸಿ.ಸಿ ‘ಎ ಬ್ಲಾಕ್‌ನ ಭೂದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸೋಮವಾರ ಅಯೋಧ್ಯೆಯ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ  ರಾಮ, ಲಕ್ಷ್ಮಣ, ಆಂಜನೇಯ, ಜಟಾಯು ಎಂದು ಹೆಸರು ಸೂಚಿಸಿದ ನಾಲ್ಕು ಎತ್ತುಗಳಿಗೆ ಅಕ್ಕಿ, ಬೆಲ್ಲ ತಿನ್ನಿಸಿ ವಿಶೇಷ ಪೂಜೆ ಸಲ್ಲಿಸಿದರು.
     ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯು ಪವಿತ್ರ ದಿನವಾಗಿದ್ದು, ದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಮ, ಲಕ್ಷ್ಮಣ, ಆಂಜನೇಯ, ಜಟಾಯು ಎಂಬ ಎತ್ತುಗಳನ್ನು ಪೂಜಿಸಿದ ಅವರು ರಾಮನ ಗುಣ, ಲಕ್ಷ್ಮಣನಂತಹ ಭ್ರಾತೃತ್ವ, ಆಂಜನೇಯನ ಭಕ್ತಿ, ಜಟಾಯುನಂತಹ ಬಲಿದಾನದ ಪ್ರೇರಣೆ ನಮಗೆ ಬರಬೇಕು ಎಂದು ಪ್ರಾರ್ಥಿಸಿದರು.  
     ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಮತ್ತೆ ಗತವೈಭವದತ್ತ ಮರಳುತ್ತಿದ್ದು, ಮುಂದಿನ ಪೀಳಿಗೆಗೆ ಪ್ರೇರಣೆಯಾಗುವಂತಿದೆ ಎಂದರು.
     ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್, ಮಾಜಿ ಮೇಯರ್ ಸುಧಾ ಜಯರುದ್ರೇಶ್, ವಾರ್ಡಿನ ಪ್ರಮುಖರು ಸೇರಿದಂತೆ ನೂರಾರು ಭಕ್ತರು ಎಲ್‌ಇಡಿ ಸ್ಕ್ರೀನ್ ಮೂಲಕ ಮೂರ್ತಿ ಪ್ರತಿಷ್ಠಾಪನೆಯನ್ನು ನೇರ ಪ್ರಸಾರದಲ್ಲಿ ವಿಕ್ಷಿಸಿದರು.
     ಈ ಸಂದರ್ಭದಲ್ಲಿ ಜಯರುದ್ರೇಶ್, ಡಾ. ಶಿವಯೋಗ ಸ್ವಾಮಿ, ಪದ್ಮನಾಭ ಶೆಟ್ರು, ಕಿರಣ್, ಸಚಿನ್ ವರ್ಣೆಕರ್, ಶಂಕರ್, ಸುನೀಲ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts