More

    ಕಾರ್ಮಿಕರಿಗೆ ಕೋವಿಡ್ ಪರಿಹಾರ ನೀಡಲು ಮನವಿ

    ದಾವಣಗೆರೆ: ಅಸಂಘಟಿತ ಕಾರ್ಮಿಕರಿಗೆ ಕೋವಿಡ್-19ರ ಪರಿಹಾರ ವಿತರಿಸಲು ಹಾಗೂ ಘೋಷಿತ ಮೊತ್ತ ಪಾವತಿಸಲು ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿತು.
    ಕಟ್ಟಡ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ, ಗ್ರಾಪಂ ನೌಕರರು, ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನ, ಹಮಾಲಿ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂ. ಕೋವಿಡ್ ಪರಿಹಾರ ವಿತರಿಸಲು ಮನವಿ ಮಾಡಿದರು.

    ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಗೆ 25 ಸಾವಿರ ರೂ. ಮಾಸಿಕ ವಿಶೇಷ ಭತ್ಯೆ, ನರೇಗಾ ಕಾರ್ಮಿಕರಿಗೆ 200 ದಿನ ಉದ್ಯೋಗ, ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ಅಂಗನವಾಡಿ ತೆರೆಯಬೇಕು. ಕಾರ್ಮಿಕ ಕಾನೂನುಗಳ ತಿದ್ದುಪಡಿ ನಿಲ್ಲಿಸಲು ಡಿಸಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.

    ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ, ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜು, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ತಿಮ್ಮಣ್ಣ, ಕಾರ್ಯದರ್ಶಿ ಎ.ಗುಡ್ಡಪ್ಪ, ಆಟೋ ಚಾಲಕರ ಸಂಘದ ಶ್ರೀನಿವಾಸಮೂರ್ತಿ, ಅಣ್ಣಪ್ಪ, ರುದ್ರಸ್ವಾಮಿ, ಹಮಾಲಿ ಕಾರ್ಮಿಕರ ಸಂಘದ ವೆಂಕಟೇಶ್, ಶ್ರೀನಿವಾಸ್, ಹನುಮಂತನಾಯ್ಕ, ಗ್ರಾಪಂ ನೌಕರರ ಸಂಘದ ಬೇತೂರು ಬಸವರಾಜ್, ಹಾಸ್ಟೆಲ್ ಗುತ್ತಿಗೆ ನೌಕರರ ಸಂಘದ ಏಕಾಂತಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts