More

  ಹುಬ್ಬಳ್ಳಿಯ ಕಿಮ್ಸ್, ದಾವಣಗೆರೆಯ ಜೆಜೆಎಂ ತಂಡಗಳಿಗೆ ಪ್ರಶಸ್ತಿ

  ದಾವಣಗೆರೆ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಳಗಾವಿ ವಲಯದಿಂದ ಆಯೋಜಿಸಿದ್ದ 2023-24ನೇ ಸಾಲಿನ ಚೆಸ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಹುಬ್ಬಳ್ಳಿಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಮಹಿಳೆಯರ ವಿಭಾಗದಲ್ಲಿ ನಗರದ ಜೆಜೆಎಂ ಮೆಡಿಕಲ್ ಕಾಲೇಜು ಪ್ರಶಸ್ತಿ ಪಡೆದಿವೆ.
   ಇಲ್ಲಿನ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪಂದ್ಯಾವಳಿಯಲ್ಲಿ, ಪುರುಷರ ವಿಭಾಗದಲ್ಲಿ ಬಳ್ಳಾರಿಯ ಸರ್ಕಾರಿ ದಂತ ವೈದ್ಯಕೀಯ ಕಾಲೇಜು, ಮಹಿಳೆಯರ ವಿಭಾಗದಲ್ಲಿ ಕಾರವಾರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ದ್ವಿತೀಯ ಸ್ಥಾನ ಪಡೆದುಕೊಂಡವು.
   ಜೆಜೆಎಂ ಕಾಲೇಜು ಪ್ರಾಚಾರ್ಯ ಡಾ.ಎಸ್.ಬಿ. ಮುರುಗೇಶ್ ಬಹುಮಾನ ವಿತರಿಸಿದರು.
   ಪ್ರಾಧ್ಯಾಪಕರಾದ ಡಾ.ನರೇಂದ್ರನಾಥ್, ಡಾ.ಸಂತೋಷಕುಮಾರ, ಡಾ.ಅಶ್ವಿನಿ, ಡಾ.ನೀತು, ಆರ್ಬಿಟರ್ ನವೀನ್, ರಾಜೀವ್ ಗಾಂಧಿ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ಜೋಸೆಫ್ ಅನಿಲ್, ಬೆಳಗಾವಿ ವಲಯದ ಸಂಯೋಜಕ ಸಿ.ಪಿ. ಮಹೇಶ್, ಜಿ.ಎಂ. ಫಾರ್ಮಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಪ್ಪ, ಜೆಜೆಎಂ ಮೆಡಿಕಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎನ್. ಗೋಪಾಲಕೃಷ್ಣ, ಶಾಂತಕುಮಾರ್ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 29

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts