More

    ಸಶಕ್ತ ವಿಚಾರಗಳ ಚಿಂತನೆ ಬೇಕು

    ದಾವಣಗೆರೆ : ಜೀವನದಲ್ಲಿ ಸಶಕ್ತ ವಿಚಾರಗಳ ಚಿಂತನೆಯಿಂದ ಸಕಾರಾತ್ಮಕವಾಗಿ ಮುನ್ನಡೆಯಬೇಕು ಎಂದು ಬ್ರಹ್ಮಕುಮಾರಿ ಸಂಸ್ಥೆಯ ಪ್ರಧಾನ ಕೇಂದ್ರ ಅಬು ಪರ್ವತದ ಆಡಳಿತ ಮಂಡಳಿ ಸದಸ್ಯರು, ದೆಹಲಿಯ ಓಂ ಶಾಂತಿ ರಿಟ್ರೀಟ್ ಸೆಂಟರ್ ಸಂಚಾಲಕರಾದ ಆಶಾ ದೀದೀಜಿ ಹೇಳಿದರು.
     ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ನಗರದ ದೇವರಾಜ ಅರಸು ಬಡಾವಣೆಯ ಈಶ್ವರೀಯ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಬುಧವಾರ ‘ಒತ್ತಡ ಮುಕ್ತ ಆಡಳಿತ’ ವಿಷಯ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಮನುಷ್ಯನ ಮನಸ್ಸಿನಲ್ಲಿ ಪ್ರತಿನಿತ್ಯ 35 ಸಾವಿರಕ್ಕೂ ಅಧಿಕ ವಿಚಾರಗಳು ಬರುತ್ತವೆಯೆಂದು ಎಂಬತ್ತರ ದಶಕದಲ್ಲಿ ಅಧ್ಯಯನವೊಂದು ತಿಳಿಸಿತ್ತು. ಈಗ ವಿಚಾರಗಳ ಸಂಖ್ಯೆ ದುಪ್ಪಟ್ಟಾಗಿರಬಹುದು. ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಧ್ಯಾನದಿಂದ ನಿಯಂತ್ರಿಸುವ ಜತೆಗೆ ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂದು ತಿಳಿಸಿದರು.
     ಯಾವುದೇ ಹುದ್ದೆಗೆ ಅಹಂಕಾರ ಅಂಟಿಕೊಳ್ಳಬಾರದು. ನಾನೇ ಎಲ್ಲ ಎಂಬ ಭಾವ ಸಲ್ಲದು. ಅಧಿಕಾರ ಶಾಶ್ವತವಲ್ಲ ಎಂಬುದರ ಜತೆಗೆ ಸೇವಾ ಭಾವನೆಯಿಂದ ಕಾರ್ಯ ನಿರ್ವಹಿಸಬೇಕು, ಪ್ರಾಮಾಣಿಕತೆ, ಪಾರದರ್ಶಕತೆ ಇರಬೇಕು. ಬದುಕನ್ನು ಆನಂದಿಸುತ್ತಾ ಹೋದಾಗ ನಮ್ಮ ಕಾರ್ಯಕ್ಷೇತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದರು.
     ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ ತಾರ್ಕಿಕ ಯೋಚನೆಗಳ ಮೂಲಕ ಸಕಾರಾತ್ಮಕವಾಗಿ ನಡೆಯುವುದೇ ನಮ್ಮ ಬದುಕಾಗಿದೆ. ಒತ್ತಡ ಮುಕ್ತ ಆಡಳಿತದ ಬಗ್ಗೆ ಉಪನ್ಯಾಸವು ಬಹಳ ಪರಿಣಾಮ ಬೀರಿದೆ ಎಂದು ಹೇಳಿದರು.
     ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ನಿರ್ದೇಶಕ ರಾಜಯೋಗಿ ಬ್ರಹ್ಮಕುಮಾರ ಡಾ. ಬಸವರಾಜ ರಾಜಋಷಿ ಸಾನ್ನಿಧ್ಯ ಮತ್ತು ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾಜೀ ಅಧ್ಯಕ್ಷತೆ ವಹಿಸಿದ್ದರು.
     ರಾಜಯೋಗಿನಿ ಬ್ರಹ್ಮಕುಮಾರಿ ವೀಣಾಜಿ, ಬ್ರಹ್ಮಕುಮಾರಿ ಲೀಲಾಜಿ, ದಾವಣಗೆರೆ ವಿವಿ ಉಪ ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅಥಣಿ ಎಸ್. ವೀರಣ್ಣ, ಜಿ.ಎಂ ವಿಶ್ವವಿದ್ಯಾನಿಲಯದ ಡೀನ್ ಪ್ರೊ. ಜಿ.ಎಂ. ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts