More

    ಬೈಕ್ ರ‌್ಯಾಲಿಯಲ್ಲಿ ರಾಯರ ಭಕ್ತರ ಸಂಭ್ರಮ

    ದಾವಣಗೆರೆ: ಮಾ. 11 ರಿಂದ 17ರ ವರೆಗೆ ನಡೆಯಲಿರುವ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಅಂಗವಾಗಿ ನಗರದಲ್ಲಿ ಶನಿವಾರ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು.
     ಮಹೋತ್ಸವ ಸಮಿತಿ ಅಧ್ಯಕ್ಷ ಸಂಪನ್ನ ಮುತಾಲಿಕ್, ರಾಂ ಆ್ಯಂಡ್ ಕೋ ವೃತ್ತದಲ್ಲಿ ರ‌್ಯಾಲಿಗೆ ಚಾಲನೆ ನೀಡಿದರು. ನಗರದಲ್ಲಿ ಸಂಚರಿಸಿ ದ ರಾಯರ ಭಕ್ತರು, ರಾಘವೇಂದ್ರ ಸ್ವಾಮಿಗಳ ಸ್ಮರಣೆ, ಜೈ ಶ್ರೀರಾಮ್ ಘೋಷಣೆ ಕೂಗುವ ಮೂಲಕ ಸಪ್ತಾಹ ಮಹೋತ್ಸವ ಕುರಿತು ಜಾಗೃತಿ ಮೂಡಿಸಿದರು. ಬೈಕ್‌ಗಳಿಗೆ ರಾಯರ ಭಾವಚಿತ್ರವಿರುವ ಧ್ವಜಗಳನ್ನು ಕಟ್ಟಲಾಗಿತ್ತು.
     ರ‌್ಯಾಲಿಯು ನಿಜಲಿಂಗಪ್ಪ ಬಡಾವಣೆ, ರಿಂಗ್ ರಸ್ತೆ ಮೂಲಕ ಪಿಬಿ ರಸ್ತೆಯಲ್ಲಿ ಸಾಗಿ, ಅರುಣಾ ಟಾಕೀಸ್ ವೃತ್ತ, ಪಿಜೆ ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದ ಮಾರ್ಗವಾಗಿ ಎವಿಕೆ ಕಾಲೇಜು ರಸ್ತೆಯಿಂದ ಕೆಇಬಿ ವೃತ್ತ, ಶಿವಪ್ಪಯ್ಯ ಸರ್ಕಲ್, ಕೆಬಿ ಬಡಾವಣೆಯಲ್ಲಿ ಹಾದು ಹೋಗಿ, ಮಹಾತ್ಮ ಗಾಂಧಿ ಸರ್ಕಲ್ ಮೂಲಕ ತೆರಳಿ ರಾಘವೇಂದ್ರ ಸ್ವಾಮಿಗಳ ಮಠದ ಬಳಿ ಮುಕ್ತಾಯವಾಯಿತು.
     ನಂತರ ಕೆಬಿ ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾತನಾಡಿದ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್, ಸೋಮವಾರದಿಂದ 7 ದಿನಗಳ ಕಾಲ ನಗರದಲ್ಲಿ ನಡೆಯಲಿರುವ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
     ದಾವಣಗೆರೆಯ ಜನರಿಗೆ ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. 7 ದಿನಗಳ ಕಾಲ ನಿತ್ಯವೂ ಪೂಜೆ, ಪ್ರವಚನ, ದಾಸವಾಣಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಂಗಳವಾರ ಶ್ರೀ ಗುರುರಾಜರ ಶೋಭಾಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
     ಮಹೋತ್ಸವ ಸಮಿತಿಯ ಅಧ್ಯಕ್ಷ ಸಂಪನ್ನ ಮುತಾಲಿಕ್, ಕೋಶಾಧ್ಯಕ್ಷ ಡಾ.ಎಂ.ಸಿ. ಶಶಿಕಾಂತ್, ಸಹ ಕಾರ್ಯದರ್ಶಿಗಳಾದ ಎನ್.ಆರ್. ನಾಗಭೂಷಣರಾವ್, ಸತ್ಯಬೋಧ ಕುಲಕರ್ಣಿ, ಪಲ್ಲಕ್ಕಿ ವಾಸುದೇವಾಚಾರ್, ಕೆ. ರಘುನಾಥರಾವ್, ನಾಗರಾಜರಾವ್, ವಾಚಸ್ಪತಿ, ರಾಜಣ್ಣ, ಪ್ರಾಣೇಶಾಚಾರ್ ಕಡೂರು, ಮಣ್ಣೂರ್ ಗುರುರಾಜಾಚಾರ್, ಸರಯೂ ಮುತಾಲಿಕ್, ಗೀತಾ ಗುರುರಾಜಾಚಾರ್, ರೂಪಶ್ರೀ ಶಶಿಕಾಂತ್ ಭಾಗವಹಿಸಿದ್ದರು.
     ಪಿ.ಸಿ. ರಾಮನಾಥ್, ಅನಿಲ್ ಬಾರಂಗಳ್, ಮಾಧವ ಪದಕಿ, ಶೇಷಾಚಲ, ಎಂ.ಜಿ. ಶ್ರೀಕಾಂತ್, ರಮೇಶ ಜಹಗೀರದಾರ್, ಅನಂತ ಪದ್ಮನಾಭ, ಪಿ.ಸಿ. ಶ್ರೀನಿವಾಸ್, ಗುರುರಾಜ ಕಡ್ಲೇಬಾಳ್, ರಾಮಚಂದ್ರರಾವ್, ಶಾನುಭೋಗ ರಾಮರಾವ್ ಪಾಲ್ಗೊಂಡಿದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts