More

    ಅಂಬೇಡ್ಕರ್ ಸಂದೇಶ ಪಾಲನೆ ಅಗತ್ಯ

    ದಾವಣಗೆರೆ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ನಾವೆಲ್ಲ ಪಾಲಿಸಬೇಕು ಎಂದು ನಗರದ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯ ಎಂ.ಡಿ. ಅಣ್ಣಯ್ಯ ಹೇಳಿದರು.
     ಕಾಲೇಜಿನ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಅಂಬೇಡ್ಕರ್ ಅವರು ಜೀವನದ ಕೊನೆಯ ಸಂದೇಶದಲ್ಲಿ ‘ನಾನು ಇದುವರೆಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನ ಪರ್ಯಂತ ನನ್ನ ಶತ್ರುಗಳ ಜತೆ ಕಾದಾಡುತ್ತ ಅನಿಯಮಿತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ಈ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬಂದರೂ ರಥ ಮುನ್ನೆಡಯಲೇಬೇಕು‘ ಎಂದು ತಿಳಿಸಿದ್ದಾಗಿ ನೆನಪಿಸಿದರು.
     ‘ಒಂದು ವೇಳೆ ಈ ರಥವನ್ನು ನನ್ನ ಜನ ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅಲ್ಲಿಯೇ ಇರಲು ಬಿಡಬೇಕು. ಯಾವುದೇ ಸಂದರ್ಭದಲ್ಲಿಯೂ ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು’ ಎಂದಿದ್ದಾಗಿ ಹೇಳಿದರು.
     ಐಕ್ಯೂಎಸಿ ಸಂಚಾಲಕ ಡಿ. ಅಂಜಿನಪ್ಪ ಮಾತನಾಡಿ ಅಂಬೇಡ್ಕರ್ ಅವರ ಜ್ಞಾನಕ್ಕೆ ಇಡೀ ಜಗತ್ತೇ ಶರಣಾಗಿದೆ. ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟರು. ಇಡೀ ದೇಶದ ಜನರು ಅದರ ನೆರಳಲ್ಲೇ ಬದುಕುತ್ತಿದ್ದಾರೆ. ಇದನ್ನು ಮರೆತು ಸುಟ್ಟು ಹಾಕುವ, ತಿದ್ದುಪಡಿ ಮಾಡುವ ವಿಕೃತ ಘಟನೆಗಳು ನಡೆಯುತ್ತಿವೆ ಎಂದು ವಿಷಾದಿಸಿದರು.
     ನಾಗರಾಜು, ಕಾಡಜ್ಜಿ ಶಿವಪ್ಪ, ಎಸ್.ಬಿ. ಮನೋಹರ, ಟಿ.ಎನ್. ಮೌನೇಶ್ವರ, ಬಸವರಾಜ ವಿ. ದಮ್ಮಳ್ಳಿ, ಮಹಮ್ಮದ್ ರಿಯಾಜ್, ಡಾ. ಜಿ.ಎಸ್. ಮಧುಮಾಲತಿ, ಸಿ.ಡಿ. ತ್ರಿವೇಣಿ, ಎಂ.ಎಸ್. ಮಂಜುಳಾ, ಜಿ. ಸುಮಾ, ಗೀತಾ ಪಟೇಲ್, ಕಾರ್ತಿಕ್, ಗಣೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts