More

    ಡ್ರೈವರ್‌ಗಳಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ

    ದಾವಣಗೆರೆ: ರಾಜ್ಯ ಸರ್ಕಾರ ಆಟೋ- ಟ್ಯಾಕ್ಸಿ ಚಾಲಕರಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಒತ್ತಾಯಿಸಿದರು.

    ನಗರದ ಪಂಪಾವತಿ ಭವನದಲ್ಲಿ ಶುಕ್ರವಾರ, ದಾವಣಗೆರೆ ಜಿಲ್ಲಾ ಚಾಲಕರ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಆಟೋಮೊಬೈಲ್ ಬಿಡಿ ಭಾಗಗಳ ಮೇಲೆ ಸೆಸ್ ಸಂಗ್ರಹಿಸಿ ಕಲ್ಯಾಣ ಮಂಡಳಿಗೆ ನೀಡಿ, ಚಾಲಕರ ಹಿತ ಕಾಯಬೇಕೆಂದು ಆಗ್ರಹಿಸಿದರು.

    ನಿತ್ಯ ಉತ್ಪಾದನೆಯಾಗುತ್ತಿರುವ ಸಾವಿರಾರು ವಾಹನಗಳು ಹಾಗೂ ಅವುಗಳ ಬಿಡಿ ಭಾಗಗಳ ಮೇಲೆ ಸರ್ಕಾರ ಸೆಸ್ ಸಂಗ್ರಹಿಸಿದರೆ ಕಲ್ಯಾಣ ಮಂಡಳಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತದೆ. ಆ ಮೂಲಕ ಚಾಲಕರಿಗೆ ಸಾಮಾಜಿಕ ಭದ್ರತೆ, ಅಪಘಾತವಾದರೆ ಅವರ ಕುಟುಂಬಕ್ಕೆ ಹಲವು ಸೌಲಭ್ಯಗಳನ್ನು ಒದಗಿಸಬಹುದು ಎಂದು ತಿಳಿಸಿದರು.

    ಅರಣ್ಯ ಇಲಾಖೆಯ ಕಾರ್ಮಿಕರಿಗಿರುವ ಕನಿಷ್ಠ ಕೂಲಿ, ಅಲ್ಲಿನ ಚಾಲಕರಿಗೆ ಇಲ್ಲವಾಗಿದೆ. ರಾಜ್ಯದಲ್ಲಿ 8 ರಿಂದ 10 ಲಕ್ಷ ಚಾಲಕರು ಕೋವಿಡ್-19 ಕಾರಣ ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಸಂಘಟನೆ ಇಲ್ಲವಾದರೆ ಹೋರಾಟ ಅಸಾಧ್ಯ ಎಂದ ಅವರು, ಟ್ಯಾಕ್ಸಿ -ಆಟೋ ಚಾಲಕರಿಗೆ ಸರ್ಕಾರ ಘೋಷಿಸಿದ 5 ಸಾವಿರ ರೂ. ಪರಿಹಾರ ಕೆಲವೆಡೆ ತಲುಪಿಲ್ಲ ಎಂದು ದೂರಿದರು.

    ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ದೇಶದ ಬೆನ್ನುಲುಬಾದ ರೈತರು, ಕಾರ್ಮಿಕರ ಪ್ರಗತಿಯತ್ತ ದೇಶ ಆಳುವವರು ಗಮನಿಸಬೇಕು ಎಂದರು.

    ಜಿಲ್ಲಾ ಗೌರವಾಧ್ಯಕ್ಷ ಎಚ್.ಜಿ. ಉಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಐಟಿಯುಸಿ ಜಿಲ್ಲಾ ಖಜಾಂಚಿ ಆನಂದರಾಜ್, ಸಂಘದ ಜಿಲ್ಲಾಧ್ಯಕ್ಷ ಎಚ್. ಪರಮೇಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಸುಭಾಷ್, ಖಜಾಂಚಿ ಕೆ.ಎಂ. ರಮೇಶ್, ಸಂಘಟನೆ ಪೋಷಕರಾದ ಕೆ.ಡಿ. ದೀಕ್ಷಿತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts