ಟೊರಾಂಟೊ: ಕರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕ್ರೀಡಾಪಟುಗಳು ಈಗಾಗಲೆ ಸಾಕಷ್ಟು ದೇಣಿಗೆಗಳನ್ನು ನೀಡಿದ್ದಾರೆ. ಹೆಚ್ಚಿನವರು ತಮ್ಮ ಕಿಸೆಯಿಂದಲೇ ಹಣವನ್ನು ನೀಡಿದ್ದರೆ, ಕೆಲವರು ಇತರರಿಂದ ಸಂಗ್ರಹಿಸಿ ನೀಡಿದ್ದಾರೆ. ಇನ್ನು ಕೆಲವರು ತಮ್ಮ ಕ್ರೀಡಾ ಪರಿಕರ, ಸಮವಸಗಳನ್ನು ಹರಾಜಿಗೆ ಇಡುವ ಮೂಲಕ ಅದರಿಂದ ಬಂದ ಹಣವನ್ನು ದೇಣಿಗೆ ನೀಡಿದ್ದಾರೆ. ಆದರೆ ಕೆನಡದ ಟೆನಿಸ್ ತಾರೆ ಎಗುನಿ ಬೌಚಾರ್ಡ್ ವಿಶೇಷವಾದ ರೀತಿಯಲ್ಲಿ ದೇಣಿಗೆ ಸಂಗ್ರಹಿಸಿ ಕರೊನಾ ವಿರುದ್ಧದ ಹೋರಾಟಕ್ಕೆ ನೆರವಾಗಿದ್ದಾರೆ.
ಗರಿಷ್ಠ ಮೊತ್ತದ ಬಿಡ್ ಸಲ್ಲಿಸುವವರಿಗೆ ತಮ್ಮೊಂದಿಗೆ ಡಿನ್ನರ್ ಡೇಟ್ ನಡೆಸುವ ಅವಕಾಶ ನೀಡುವುದಾಗಿ 26 ವರ್ಷದ ಬೌಚಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಬೌಚಾರ್ಡ್ ಜತೆಗೆ ಡೇಟಿಂಗ್ ನಡೆಸಲು ಪೈಪೋಟಿ ನಡೆಸಿದ್ದು, ಒಟ್ಟಾರೆ 37 ಮಂದಿ ಬಿಡ್ ಸಲ್ಲಿಸಿದ್ದಾರೆ. ಅಂತಿಮವಾಗಿ ಗರಿಷ್ಠ 64.35 ಲಕ್ಷ ರೂಪಾಯಿ (85 ಸಾವಿರ ಡಾಲರ್) ಮೊತ್ತದ ಬಿಡ್ ಸಲ್ಲಿಸಿದ ಅಭಿಮಾನಿಗೆ ಬೌಚಾರ್ಡ್ ಜತೆಗೆ ಡೇಟಿಂಗ್‌ಗೆ ಹೋಗುವ ಅವಕಾಶ ಲಭಿಸಿದೆ. ಇದಲ್ಲದೆ ಆತನನ್ನು ಯಾವುದಾದರು ಒಂದು ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಗೆ ಉಚಿತ ಪ್ರವಾಸಕ್ಕೆ ಅತಿಥಿಯಾಗಿ ಕರೆದುಕೊಂಡು ಹೋಗುತ್ತೇನೆ. ನನ್ನ ಪಂದ್ಯದ ವೇಳೆ ಪ್ಲೇಯರ್ಸ್ ಬಾಕ್ಸ್‌ನಲ್ಲಿ ಆತ ಕುಳಿತುಕೊಳ್ಳಬಹುದು ಎಂದು ಮಾಜಿ ವಿಶ್ವ ನಂ. 5 ಆಟಗಾರ್ತಿ ಬೌಚಾರ್ಡ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಗನಿಗೆ ಹೇರ್‌ಕಟ್ ಮಾಡಿದ ಸಚಿನ್ ತೆಂಡುಲ್ಕರ್
‘ಅಭಿಮಾನಿಗಳೇ ನಿಮ್ಮ ಸ್ಪಂದನೆ ಅಮೋಘವಾದುದು. ಬಿಡ್ ಸಲ್ಲಿಸಿದ ಎಲ್ಲರಿಗೂ ಧನ್ಯವಾದಗಳು. ವಿಜೇತರನ್ನು ಭೇಟಿಯಾಗಲು ಕಾತರದಿಂದಿದ್ದೇನೆ. ಅಗತ್ಯವಿರುವವರಿಗೆ ಇದು ಸಾಕಷ್ಟು ನೆರವಾಗಲಿದೆ’ ಎಂದು ಬೌಚಾರ್ಡ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 2014ರ ವಿಂಬಲ್ಡನ್‌ನಲ್ಲಿ ೈನಲ್ ಪ್ರವೇಶಿಸಿ ಗಮನ ಸೆಳೆದಿದ್ದ ಬೌಚಾರ್ಡ್, ಜೆಕ್ ತಾರೆ ಪೆಟ್ರಾ ಕ್ವಿಟೋವಾ ವಿರುದ್ಧ ಸೋತು ರನ್ನರ್‌ಅಪ್ ಆಗಿದ್ದರು.
ಇದನ್ನೂ ಓದಿ: ಚೆಂಡಿಗೆ ಬೆವರು ಹಚ್ಚಿ, ಎಂಜಲು ಬೇಡ!
ಅಭಿಮಾನಿ ಜತೆ ಡೇಟಿಂಗ್ ಮೊದಲಲ್ಲ!
ಬೌಚಾರ್ಡ್ ಅಭಿಮಾನಿಗಳ ಜತೆಗೆ ಡೇಟಿಂಗ್‌ಗೆ ಮುಂದಾಗಿರುವುದು ಇದೇ ಮೊದಲಲ್ಲ. 2017ರಲ್ಲಿ ಸೂಪರ್ ಬೌಲ್ ಪಂದ್ಯವೊಂದರ ಬೆಟ್‌ನಲ್ಲಿ ಟ್ವಿಟರ್ ಹಿಂಬಾಲಕನಿಗೆ ಸೋತಿದ್ದ ಬೌಚಾರ್ಡ್, ಕೊನೆಗೆ ಆತನೊಂದಿಗೆ ಡೇಟಿಂಗ್‌ಗೆ ಹೋಗಿದ್ದರು. ಅಟ್ಲಾಂಟಾ ಲ್ಕಾನ್ಸ್ ತಂಡ ನಿಶ್ಚಿತವಾಗಿ ಗೆಲ್ಲುತ್ತದೆ ಎಂದು ಬೌಚಾರ್ಡ್ ಆಗ ಟ್ವೀಟ್ ಮಾಡಿದ ಬೆನ್ನಲ್ಲೇ ಅವರ ಟ್ವಿಟರ್ ಹಿಂಬಾಲಕನೊಬ್ಬ, ಎದುರಾಳಿ ನ್ಯೂ ಇಂಗ್ಲೆಂಡ್ ಪ್ಯಾಟ್ರಿಯಾಟ್ಸ್ ಗೆದ್ದರೆ ನನ್ನೊಂದಿಗೆ ಡೇಟಿಂಗ್‌ಗೆ ಬರುವಿರಾ ಎಂದು ಸವಾಲೆಸೆದಿದ್ದ. ಬೌಚಾರ್ಡ್ ಇದಕ್ಕೆ ಒಪ್ಪಿಕೊಂಡಿದ್ದರು. ಅಂತಿಮವಾಗಿ ಲ್ಕಾನ್ಸ್ ತಂಡ ಸೋಲು ಕಂಡಿತ್ತು. ಇದರಿಂದ ಆತನ ಜತೆಗೆ ಡೇಟಿಂಗ್‌ಗೆ ಹೋಗಿದ್ದ ಬೌಚಾರ್ಡ್, ‘ಇನ್ನೆಂದು ಬೆಟ್ ಮಾಡಬಾರದೆಂದು ಪಾಠ ಕಲಿತೆ’ ಎಂದೂ ಟ್ವೀಟಿಸಿದ್ದರು.
https://www.instagram.com/p/CAQTCyQpyEI/?utm_source=ig_web_copy_link