More

    ರೈಲು ಸಂಚಾರ ವಿಸ್ತರಣೆ

    ಹುಬ್ಬಳ್ಳಿ : ದಸರಾ ಹಬ್ಬದ ಅಂಗವಾಗಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ಮೈಸೂರು-ಧಾರವಾಡ-ಮೈಸೂರು ಮಧ್ಯೆ ಸಂಚರಿಸುತ್ತಿದ್ದ ವಿಶೇಷ ರೈಲು ಸಂಚಾರವನ್ನು ಬೆಳಗಾವಿವರೆಗೆ ವಿಸ್ತರಿಸಲಾಗಿದೆ.

    ಅ. 22 ಮತ್ತು 24ರಂದು ರಾತ್ರಿ 10.35ಕ್ಕೆ ಮೈಸೂರಿನಿಂದ ಹೊರಡುವ ಈ ರೈಲು, ಮಾರನೇ ದಿನ ಬೆಳಗ್ಗೆ 10.45ಕ್ಕೆ ಬೆಳಗಾವಿ ತಲುಪುವುದು. ಅ. 23 ಮತ್ತು 25ರಂದು ಮಧ್ಯಾಹ್ನ 2.30ಕ್ಕೆ ಬೆಳಗಾವಿಯಿಂದ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 3 ಗಂಟೆಗೆ ಮೈಸೂರು ತಲುಪುವುದು ಎಂದು ನೈಋತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts