More

    ದಸರಾ ಉದ್ಘಾಟಕರಾಗಿ ಡಾ. ಮಂಜುನಾಥ್​ ಆಯ್ಕೆ ಅಂತಿಮ, ಆರು ಮಂದಿ ವಾರಿಯರ್ಸ್​ಗೆ ಸನ್ಮಾನ: ಸಚಿವ ಸೋಮಶೇಖರ್

    ಮೈಸೂರು: ಈ ಬಾರಿಯ ದಸರಾ ಉದ್ಘಾಟಕರಾಗಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್​ ಆಯ್ಕೆ ಅಂತಿಮವಾಗಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

    ಮೈಸೂರಿನ ಸುತ್ತೂರು ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪರವರೇ ಡಾ. ಮಂಜುನಾಥ್ ಹೆಸರು ಅಂತಿಮಗೊಳಿಸಿದ್ದಾರೆ ಎಂದರು.

    ಆರು ಮಂದಿ ಕರೊನಾ ವಾರಿಯರ್ಸ್​ಗೆ ಸನ್ಮಾನ ಮಾಡಿ ಒಬ್ಬರಿಂದ ದಸರಾ ಉದ್ಘಾಟನೆ ಆಗಲಿದೆ. ಪೌರಕಾರ್ಮಿಕ ಮರಗಮ್ಮ, ಆರೋಗ್ಯ ಇಲಾಖೆ ಮೇಡಿಕಲ್‌ ಆಫಿಸರ್​ ಡಾ.ನವೀನ್, ಸ್ಟಾಫ್​ ನರ್ಸ್​ ರುಕ್ಮಿಣಿ, ಆಶಾ ಕಾರ್ಯಕರ್ತೆ ನೂರ್ ಜಾನ್, ಮೈಸೂರು ನಗರ ಪೊಲೀಸ್​ ಪೇದೆ ಕುಮಾರ್​ ಮತ್ತು ಸಾಮಾಜಿಕ ಕಾರ್ಯಕರ್ತ ಅಯೂಬ್​ ಅಹಮದ್​ರಿಗೆ ಸನ್ಮಾನ ಮಾಡಲಾಗುವುದು ಎಂದು ಸೋಮಶೇಖರ್​ ಹೇಳಿದರು.

    ಟಕ್ನಿಕಲ್ ಕಮಿಟಿ ವರದಿಯಂತೆ ದಸರಾ ಮಾಡ್ತಿವಿ
    ಟೆಕ್ನಿಕಲ್ ಕಮಿಟಿ ನೀಡಿರುವ ವರದಿಯಂತೆ ದಸರಾ ಸಿದ್ಧತೆ ಮಾಡುತ್ತೇವೆ. ಉದ್ಘಾಟನಾ ಕಾರ್ಯಕ್ರಮಕ್ಕೆ 200 ಮಂದಿ, ಜಂಬೂಸವಾರಿಗೆ 300 ಮಂದಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಮಂದಿಗೆ ಅವಕಾಶ ನೀಡಿದ್ದಾರೆ. ನಾವು ಇಷ್ಟೆ ಜನಕ್ಕೆ ಮಾತ್ರ ಅವಕಾಶ ಮಾಡಿಕೊಡ್ತಿವಿ ಎಂದು ತಿಳಿಸಿದರು.

    ಟೆಕ್ನಿಕಲ್ ಕಮಿಟಿ ಸಲಹೆ ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡುವುದಿಲ್ಲ. ಮಾಧ್ಯಮದವರು 350 ಮಂದಿ ಇದ್ದಾರೆ, ಅವರಿಗೆ 50 ಮಂದಿಗೆ ಅವಕಾಶ ಕೊಡ್ತಿವಿ‌. ಜನಪ್ರತಿನಿಧಿಗಳು 50 ಮಂದಿ ಇದ್ದಾರೆ, ಅವರನ್ನ 25ಕ್ಕೆ‌ ಇಳಿಸುತ್ತೇವೆ. ಪೊಲೀಸರು 100 ಮಂದಿ ಇದ್ದಾರೆ, ಅವರನ್ನು ಅರ್ಧಕ್ಕೆ ಇಳಿಸುತ್ತೇವೆ. ಬೆಟ್ಟದಲ್ಲಿ 200 ಮಂದಿಯ ಒಳಗೆ ಕಾರ್ಯಕ್ರಮ ಮಾಡ್ತಿವಿ. ನಗರದಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇರೋದಿಲ್ಲ. ಜನ ಗುಂಪು ಸೇರಬಾರದು. ಎಲ್ಲಿಯೂ ಬಹಿರಂಗವಾಗಿ ಕಾರ್ಯಕ್ರಮ ನಡೆಸಬಾರದು ಎಂದು ಹೇಳಿದರು.

    ಹೆಚ್ಚಿನ ಪರಿಹಾರ ಕೊಡಲು ಸಾಧ್ಯವಿಲ್ಲ, ಆರ್ಥಿಕ ನೀತಿಯಲ್ಲಿ ಹಸ್ತಕ್ಷೇಪ ಮಾಡಬಾರದು: ಸುಪ್ರೀಂಗೆ ಕೇಂದ್ರದ ಅಫಿಡವಿಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts