More

    ಪಾಕ್ ಎದುರು ಮೊದಲ ಟಿ20 ಗೆದ್ದ ಕಿವೀಸ್: ಡೆರಿಲ್ ಮಿಚೆಲ್,ಕೇನ್ ವಿಲಿಯಮ್ಸನ್ ಅರ್ಧಶತಕ

    ಆಕ್ಲೆಂಡ್: ಡೆರಿಲ್ ಮಿಚೆಲ್ (61 ರನ್, 27 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕ ಕೇನ್ ವಿಲಿಯಮ್ಸನ್ (57 ರನ್, 42 ಎಸೆತ, 9 ಬೌಂಡರಿ) ಅರ್ಧಶತಕಗಳ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ಮೊದಲ ಟಿ20ಯಲ್ಲಿ ಪ್ರವಾಸಿ ಪಾಕಿಸ್ತಾನ ಎದುರು 46 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಕಿವೀಸ್ ತಂಡ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ.

    ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್, 8 ವಿಕೆಟ್‌ಗೆ 226 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪಾಕ್ ಎದುರು ಟಿ20ಯಲ್ಲಿ ಕಿವೀಸ್‌ನ ಗರಿಷ್ಠ ಮೊತ್ತ ಇದಾಗಿದೆ. ಪ್ರತಿಯಾಗಿ ಬಾಬರ್ ಅಜಮ್ (57 ರನ್, 35 ಎಸೆತ, 6 ಬೌಂಡರಿ, 2 ಸಿಕ್ಸರ್) ಹೋರಾಟದ ನಡುವೆಯೂ ಪಾಕ್, 18 ಓವರ್‌ಗಳಲ್ಲಿ 180 ರನ್‌ಗಳಿಗೆ ಸರ್ವಪತನ ಕಂಡಿತು. 4 ವಿಕೆಟ್ ಉರುಳಿಸಿದ ಕಿವೀಸ್ ವೇಗಿ ಟಿಮ್ ಸೌಥಿ ಟಿ20ಯಲ್ಲಿ 150 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದರು.

    ನ್ಯೂಜಿಲೆಂಡ್: 8 ವಿಕೆಟ್‌ಗೆ 226 (ಫಿನ್ ಆಲೆನ್ 34, ವಿಲಿಯಮ್ಸನ್ 57, ಡೆರಿಲ್ 61, ಫಿಲಿಪ್ಸ್ 19, ಚಾಪ್‌ಮನ್ 26, ಶಹೀನ್ ಷಾ ಅಫ್ರಿದಿ 46ಕ್ಕೆ 3, ಅಬ್ಬಾಸ್ ಅಫ್ರಿದಿ 34ಕ್ಕೆ 3). ಪಾಕ್: 18 ಓವರ್‌ಗಳಲ್ಲಿ 180 (ಅಯೂಬ್ 27, ರಿಜ್ವಾನ್ 27, ಬಾಬರ್ 57, ಇಫ್ತಿಕರ್ 24, ಜಮಾಲ್ 14*, ಸೌಥಿ 25ಕ್ಕೆ4, ಬೆನ್ ಸಿರ್ಸ್‌ 42ಕ್ಕೆ2). ಪಂದ್ಯಶ್ರೇಷ್ಠ: ಡೆರಿಲ್ ಮಿಚೆಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts