More

    ಡೆವಿಲ್ – ದಿ ಹೀರೋ ; ತಾರಕ್ ಬಳಿಕ ಒಂದಾದ ದರ್ಶನ್ ಮತ್ತು ಮಿಲನ ಪ್ರಕಾಶ್

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ‘ಖುಷಿ’, ‘ರಿಷಿ’, ‘ಮಿಲನ’, ‘ವಂಶಿ’, ‘ಗೋಕುಲ’, ‘ಸಿದ್ಧಾರ್ಥ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರಕಾಶ್ ಇದೀಗ ಮತ್ತೆ ವಾಪಸ್ಸಾಗಿದ್ದಾರೆ. 2017ರಲ್ಲಿ ರಿಲೀಸ್ ಆದ ‘ತಾರಕ್’ ಬಳಿಕ ಹೊಸ ಕಥೆಯ ಸಿದ್ದತೆಯಲ್ಲಿದ್ದ ಅವರು, ಇದೀಗ ಮತ್ತೆ ನಟ ದರ್ಶನ್‌ಗೆ ಆ್ಯಕ್ಷನ್-ಕಟ್ ಹೇಳಲು ರೆಡಿಯಾಗಿದ್ದಾರೆ. ಅ. 2ರ ಗಾಂಧಿ ಜಯಂತಿಯಂದು ಚಿತ್ರತಂಡ ಸರಳವಾಗಿ ಪೂಜೆ ನೆರವೇರಿಸಿದ್ದು, ‘ಕಾಟೇರ’ ಸಿನಿಮಾ ಬಿಡುಗಡೆಯಾದ ಬಳಿಕ ಈ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ತರುಣ್ ಸುಧೀರ್ ನಿರ್ದೇಶಿಸುತ್ತಿರುವ ‘ಕಾಟೇರ’ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು, 2024ರ ಗಣರಾಜ್ಯೋತ್ಸವದಂದು ಸಿನಿಮಾ ರಿಲೀಸ್ ಮಾಡುವ ಆಲೋಚನೆಯಿದೆ ಎನ್ನಲಾಗಿದೆ. ಬಳಿಕ ದರ್ಶನ್ ಅವರ 57ನೇ ಸಿನಿಮಾ ಸೆಟ್ಟೇರಲಿದ್ದು, ಚಿತ್ರಕ್ಕೆ ‘ಡೆವಿಲ್ : ದಿ ಹೀರೋ’ ಎಂದು ಟೈಟಲ್ ಇಡಲಾಗಿದೆ.

    ಇದನ್ನೂ ಓದಿ : ಗ್ಲಾಮರಸ್​ ಬ್ಯೂಟಿಯ ಕನ್ನಡ ಪ್ರೇಮ; ‘ಜಯಭೇರಿ ಕನ್ನಡ’ ಹಾಡಿನಲ್ಲಿ ನಿಶ್ವಿಕಾ ಮಿಂಚು

    ಡೆವಿಲ್ - ದಿ ಹೀರೋ ; ತಾರಕ್ ಬಳಿಕ ಒಂದಾದ ದರ್ಶನ್ ಮತ್ತು ಮಿಲನ ಪ್ರಕಾಶ್

    ಚಿತ್ರದ ಬಗ್ಗೆ ‘‘ತಾರಕ್’ ಸಿನಿಮಾ ಸಮಯದಲ್ಲಿಯೇ ಈ ಚಿತ್ರದ ಬಗ್ಗೆ ದರ್ಶನ್ ಅವರ ಜತೆ ಚರ್ಚಿಸಿದ್ದೆ. ಆಗಲೇ ಸಿನಿಮಾ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೆವು. ನಂತರ ಕರೊನಾ ಲಾಕ್‌ಡೌನ್ ಮತ್ತು ನನ್ನ ತಂದೆಯ ಆರೋಗ್ಯ ಸರಿಯಿಲ್ಲದ ಕಾರಣ ನಾನು ಸ್ವಲ್ಪ ತಡ ಮಾಡಿದೆ. ದರ್ಶನ್ ಸರ್ ‘ರಾಬರ್ಟ್’, ‘ಯಜಮಾನ’, ‘ಕಾಟೇರ’ ಚಿತ್ರಗಳಲ್ಲಿ ಬಿಜಿಯಾದರು. ಈಗ ಸಿನಿಮಾ ಸ್ಕ್ರಿಪ್ಟ್ ರೆಡಿಯಿದೆ. ತಂತ್ರಜ್ಞರು ಹಾಗೂ ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಮಿಲನ ಪ್ರಕಾಶ್. ಅಂದಹಾಗೆ ಈ ಚಿತ್ರದಿಂದ ಪ್ರಕಾಶ್ ತಮ್ಮ ಹೆಸರನ್ನು ಪ್ರಕಾಶ್ ವೀರ್ ಎಂದು ಬದಲಿಸಿಕೊಂಡಿದ್ದಾರೆ.

    ಇದನ್ನೂ ಓದಿ : ಲಕ್ಷ..ಲಕ್ಷ ಬೆಲೆ ಬಾಳುತ್ತದೆ ಮಹೇಶ್ ಬಾಬು ತೊಟ್ಟಿರುವ ಈ ಸ್ವೆಟ್‌ಶರ್ಟ್; ಬೆಲೆ ತಿಳಿದರೆ ಆಶ್ಚರ್ಯವಾಗುತ್ತೀರ…

    ಡೆವಿಲ್ - ದಿ ಹೀರೋ ; ತಾರಕ್ ಬಳಿಕ ಒಂದಾದ ದರ್ಶನ್ ಮತ್ತು ಮಿಲನ ಪ್ರಕಾಶ್

    ‘‘ಕಾಟೇರ’ ಚಿತ್ರದ ಕೆಲಸಗಳು ಅಂತಿಮ ಹಂತದಲ್ಲಿವೆ. ಅದು ರಿಲೀಸ್ ಆಗುತ್ತಲೇ ‘ಡೆವಿಲ್ – ದಿ ಹೀರೋ’ ಸಿನಿಮಾ ಪ್ರಾರಂಭಿಸಲಿದ್ದೇವೆ. ಒಳ್ಳೆಯ ದಿನ ನೋಡಿ ಸರಳ ಪೂಜೆ ಮಾಡಿದ್ದೇವೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ತಂತ್ರಜ್ಞರು ಹಾಗೂ ತಾರಾಗಣದ ಆಯ್ಕೆ ನಡೆಯುತ್ತಿದೆ. ಶೂಟಿಂಗ್ ಬ್ಗಗೆ ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ನೀಡಲಿದ್ದೇವೆ.’ ಪ್ರಕಾಶ್ ವೀರ್, ನಿರ್ದೇಶಕ

    ಡೆವಿಲ್ - ದಿ ಹೀರೋ ; ತಾರಕ್ ಬಳಿಕ ಒಂದಾದ ದರ್ಶನ್ ಮತ್ತು ಮಿಲನ ಪ್ರಕಾಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts