More

    ಸಹೋದ್ಯೋಗಿಯನ್ನು ಕೊಂದು ತನ್ನನ್ನು ತಾನು ಶೂಟ್​ ಮಾಡಿಕೊಂಡ ಕಾನ್ಸ್​ಟೇಬಲ್​ ಹಿಂದಿದೆ ಕರಾಳ ಕಥೆ!

    ಪಂಜಾಬ್​: ಕೆಲವು ದಿನಗಳ ಹಿಂದೆ ಗುರ್​ಸೇವಕ್​ ಸಿಂಗ್​ ಎನ್ನುವ ಕಾನ್ಸ್​ಟೇಬಲ್​, ಅಮನ್​ಪ್ರೀತ್​ ಕೌರ್​ಳ ಎಂಬ ಮಹಿಳಾ ಕಾನ್ಸ್​ಟೇಬಲ್​ಳನ್ನು ಹಿಂಬಾಲಿಸಿ ಆಕೆಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ. ಅಲ್ಲಿಂದ ವಾಹನದಲ್ಲಿ ಹೋಗುವಾಗ ತನ್ನನ್ನು ತಾನೇ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಕಳೆದ 11 ದಿನಗಳ ಹಿಂದೆ, ಅಮನ್‌ಪ್ರೀತ್ ಕೌರ್ ಮತ್ತು ಗುರ್ಸೇವಕ್ ಸಿಂಗ್ ಅವರ ನಡುವೆ ಯಾವ ಸಂಬಂಧವಿತ್ತು ಎನ್ನುವ ವಿಚಾರ ಅವರ ಕುಟುಂಬಗಳಿಗೆ ತಿಳಿದಿರಲಿಲ್ಲ. ಆದರೆ ಅವರಿಬ್ಬರೂ ಪೊಲೀಸ್​ ವೃತ್ತಿ ಮೂಲಕ ಪರಿಚಿತರು ಎಂದಷ್ಟೇ ತಿಳಿದಿತ್ತು.

    ಅಮನ್‌ಪ್ರೀತ್(26) ಆರು ವರ್ಷದ ಮಗಳನ್ನು ಹೊಂದಿದ್ದು ವಿಚ್ಛೇದಿತೆಯಾಗಿದ್ದರು. ಗುರುಸೇವಕ್ (33) ಐದು ವರ್ಷದ ಮಗಳನ್ನು ಹೊಂದಿದ್ದು ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ.

    ಯುವತಿ ಅಮನ್‌ಪ್ರೀತ್ ಯಾವಾಗಲೂ ಪೊಲೀಸ್ ಪಡೆಗೆ ಸೇರಲು ಬಯಸುತ್ತಿದ್ದರು. ಅವರು ಉತ್ಸಾಹದಿಂದ 2014 ರಲ್ಲಿ ಮದುವೆಯಾದ ನಂತರವೂ ತನ್ನ ಅಧ್ಯಯನವನ್ನು ಮುಂದುವರೆಸಿದ್ದರು. 12 ನೇ ತರಗತಿಯನ್ನು ತೇರ್ಗಡೆಗೊಳಿಸಿದ ಅಮರ್​ಪ್ರೀತ್​ ಕೌರ್​ ನಂತರ 2016 ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಇಲಾಖೆ ಸೇರಿಕೊಂಡಿದ್ದರು ಎಂದು ಆಕೆಯ ಸಹೋದರ ಗುರುಪ್ರೀತ್ ಸಿಂಗ್ ಮಾಹಿತಿ ನೀಡಿದರು.

    ಆಕೆ ಫಿರೋಜ್‌ಪುರದ ಚುಚಕ್ ವಿಂಡ್ ಗ್ರಾಮದ ಮೂಲದವಳು. ಮಗಳಿಗೆ ಜನ್ಮ ನೀಡಿದ ನಂತರ ಅಮನ್‌ಪ್ರೀತ್ ಕೌರ್​ ತನ್ನ ಪತಿಯಿಂದ ವಿಚ್ಛೇದನವನ್ನು ತೆಗೆದುಕೊಂಡು ಫಿರೋಜ್‌ಪುರ ಪೊಲೀಸ್ ಕ್ವಾಟರ್ಸ್​ನಲ್ಲಿ ವಾಸಿಸಲು ಪ್ರಾರಂಭಿಸಿದ್ದಳು.

    ನೌರಂಗ್ ಕೆ ಸಿಯಾಲ್ ಗ್ರಾಮದ ಗುರ್​ಸೇವಕ್ ಅವರು ತಮ್ಮ ಕೃಷಿಕ ತಂದೆಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ 2011 ರಲ್ಲಿ ಪೊಲೀಸ್​ ಪಡೆಗೆ ಸೇರಿದ್ದರು. ಅವರು ಕೂಡ 2014 ರಲ್ಲಿ ವಿವಾಹವಾಗಿದ್ದು ಅವರ ಕುಟುಂಬದ ಪ್ರಕಾರ, ಗುರುಸೇವಕ್​ ತನ್ನ ಪತ್ನಿಯೊಂದಿಗೆ ಸಂತೋಷದಿಂದ ಇದ್ದರು.

    ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಪ್ರಕಾರ, ಗುರ್​ಸೇವಕ್ ಅಮನ್‌ಪ್ರೀತ್ ಜೊತೆ ಸಂಬಂಧ ಹೊಂದಿದ್ದಳು. ಆದರೆ ಆಕೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಶಂಕಿಸಲಾಗಿದೆ.

    ಪೊಲೀಸರ ಪ್ರಕಾರ, ಫಿರೋಜ್‌ಪುರ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ಅಮನ್‌ಪ್ರೀತ್ ಕೌರ್​, ಜನವರಿ 28 ರಂದು ಬೆಳಿಗ್ಗೆ ಕರ್ತವ್ಯಕ್ಕೆ ವರದಿ ಮಾಡಿದ್ದರೆ. ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯೂಆರ್‌ಟಿ)ಯಲ್ಲಿ ನಿಯೋಜಿಸಲ್ಪಟ್ಟ ಗುರ್​ಸೇವಕ್ ವಿಶೇಷ ಶಸ್ತ್ರಾಸ್ತ್ರಗಳು ಮತ್ತು ತಂತ್ರಗಳಲ್ಲಿ ತರಬೇತಿ ಪಡೆದಿದ್ದರು (SWAT).

    ಅಮನ್‌ಪ್ರೀತ್ ಕೌರ್​, ತನ್ನ ತಾಯಿ ರಾಜಿಂದರ್ ಕೌರ್ ಮತ್ತು ಪ್ರಕರಣದ ಪ್ರತ್ಯಕ್ಷದರ್ಶಿಯಾಗಿರುವ ಸೋದರ ಸೊಸೆ ನವದೀಪ್ ಕೌರ್ (ಸಹೋದರನ ಮಗಳು) ಜೊತೆಗೆ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ವಾಸವಿದ್ದರು. ನವದೀಪ್ ಕೌರ್​, ತನ್ನ ಹೇಳಿಕೆಯಲ್ಲಿ, ಅಮನ್‌ಪ್ರೀತ್ ಮತ್ತು ಗುರುಸೇವಕ್ ಸಂಬಂಧದಲ್ಲಿದ್ದರು. ಗುರ್​ಸೇವಕ್​ ಅಮನ್​​ಪ್ರೀತ್​ಳನ್ನು ಮದುವೆಗೆ ಒತ್ತಾಯಿಸುತ್ತಿದ್ದನು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಜನವರಿ 28 ರಂದು, ಅಮನ್‌ಪ್ರೀತ್ ಮತ್ತು ನವದೀಪ್ ಪೊಲೀಸ್ ಠಾಣೆಯಲ್ಲಿ ಒಟ್ಟಿಗೆ ಇದ್ದಾಗ ರಾತ್ರಿ 8.30 ರ ಸುಮಾರಿಗೆ, ಗುರುಸೇವಕ್ ಕರೆ ಮಾಡಿ ಹೊರಗೆ ಬರುವಂತೆ ಹೇಳಿದ್ದಾನೆ. ಹೊರಗಡೆ ಗುರ್​ಸೇವಕ್​, ತನ್ನ ಕಾರಿನಲ್ಲಿ ಕಾಯುತ್ತಿದ್ದ. ಅಮನ್‌ಪ್ರೀತ್ ಮುಂಭಾಗದ ಸೀಟಿನಲ್ಲಿ ಕುಳಿತುಕೊಂಡಿದ್ದಳು. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ವಾಗ್ಆದ ನಡೆದಿದ್ದು ಅದಕ್ಕೆ ನವದೀಪ್​ ಕೌರ್​ ಸಾಕ್ಷಿಯಾಗಿದ್ದರು.

    ಇದಾದ ಮೇಲೆ ಮಧ್ಯರಾತ್ರಿ 12.15 ರ ಸುಮಾರಿಗೆ, ಇಬ್ಬರೂ ಅಮನ್‌ಪ್ರೀತ್​ರ ದ್ವಿಚಕ್ರ ವಾಹನದಲ್ಲಿ ವಾಪಸ್​ ಮನೆಗೆ ಹೋಗುತ್ತಿದ್ದರು. ನವದೀಪ್ ಪ್ರಕಾರ, ಗುರುಸೇವಕ್ ಹಿಂದಿನಿಂದ ವೇಗವಾಗಿ ಕಾರಿನಲ್ಲಿ ಬಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ. ಇಬ್ಬರು ಮಹಿಳೆಯರು ರಸ್ತೆಗೆ ಬಿದ್ದಾಗ ಆತ ಹೊರಬಂದು ಅಮನ್‌ಪ್ರೀತ್ ಮೇಲೆ ತನ್ನ ರೈಫಲ್‌ನಿಂದ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದ. ಈ ಸಂದರ್ಭದಲ್ಲಿ ಅಮನ್​ಪ್ರೀತ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇದಾದ ಮೇಲೆ ಸುಮಾರು 30 ನಿಮಿಷಗಳ ಕಾಲ ಕಾರು ಚಾಲನೆ ಮಾಡಿದ ಗುರ್​ಸೇವಕ್ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಫಿರೋಜ್‌ಪುರದ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್ ಅವರು ಪ್ರಕರಣವು ಇನ್ನೂ ತನಿಖೆ ಹಂತದಲ್ಲಿದೆ ಆದರೆ ಘಟನೆಯ ಸಮಯದಲ್ಲಿ ಅಮನ್‌ಪ್ರೀತ್ ಅವರ ಬಳಿ ಶಸ್ತ್ರಾಸ್ತ್ರ ಇರಲಿಲ್ಲ ಎಂದು ಹೇಳುತ್ತಾರೆ. “ಅವಳು ಪೊಲೀಸ್ ಠಾಣೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದಳು” ಎಂದು ಎಸ್‌ಎಸ್‌ಪಿ ಹೇಳಿದರು. “ಅವರಿಬ್ಬರೂ ಅತಿಯಾದ ಕೆಲಸ ಅಥವಾ ಕೆಲಸದ ಒತ್ತಡವನ್ನು ಹೊಂದಿರಲಿಲ್ಲ. ಏಕೆಂದರೆ ಅವರು ಸೀಮಿತ ಗಂಟೆಗಳ ಕರ್ತವ್ಯವನ್ನು ಹೊಂದಿದ್ದರು. ಮೇಲ್ನೋಟಕ್ಕೆ, ಇದು ವೈಯಕ್ತಿಕ ಸಂಬಂಧದ ಕಾರಣದಿಂದ ಪ್ರಚೋದಿಸಲ್ಪಟ್ಟ ಘಟನೆಯಾಗಿದೆ, ”ಎಂದು ಅವರು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts