More

    ದರ್ಬಾರ್ ಗಣಪತಿ ವಿಸರ್ಜನೆ ಮಹೋತ್ಸವ

    ಚನ್ನರಾಯಪಟ್ಟಣ: ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ದರ್ಬಾರ್ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು.

    72 ವರ್ಷಗಳ ಹಿನ್ನೆಲೆಯಿರುವ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿರುವ ಶ್ರೀ ದರ್ಬಾರ್ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು.

    ವಿಸರ್ಜನಾ ಪೂಜೆ ನಂತರ ಪಟ್ಟಣದ ಗಣಪತಿ ಪೆಂಡಾಲಿನಿಂದ ವಿಸರ್ಜನಾ ಮೆರವಣಿಗೆ ಆರಂಭವಾಯಿತು. ಕಲಾವಿದ ರವೀಂದ್ರ ನಿರ್ಮಿಸರುವ ಕ್ರಿಕೆಟ್ ವಿಶ್ವಕಪ್‌ನ ಮಾದರಿ ಪುಷ್ಪ ಮಂಟಪದಲ್ಲಿ ಮೂರ್ತಿಯನ್ನು ಇರಿಸಲಾಗಿತ್ತು. ಮೆರಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನ ಗಮನ ಸೆಳೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

    ಕಲಾ ವೈಭವ: ಮಹಿಳಾ ತಂಡದಿಂದ ಮಂಗಳವಾದ್ಯ, ಕಾಡು ಸಿದ್ದೇಶ್ವರ ಮಠದ ಆನೆ, ಚಾಮುಂಡೇಶ್ವರಿ ರಥ, ಕೇರಳದ ಚಂಡೆ ವಾದ್ಯ, ಕೇರಳದ ನರ್ತಕಿಯರು, ಕೇರಳದ ಯಕ್ಷಗಾನ, ಕೇರಳದ ಹುಲಿ, ಪೂಜಾ ಕುಣಿತ, ವೀರಭದ್ರನ ಕುಣಿತ, ಭದ್ರಕಾಳಿ ನರ್ತನ, ನಂದಿಧ್ವಜ, ಸಾಗರದ ಡೊಳ್ಳು ಕುಣಿತ, ಓಂ ಶಾಂತಿ ಶಿವನ ದರ್ಶನ, ಕೋಟೆ ಮಾರಮ್ಮ, ಶ್ರೀ ಕೋಟೆ ಚಂದ್ರಮೌಳೇಶ್ವರ, ಶ್ರೀ ಮೇಗಲಗೇರಿ ಕಾಡು ಆಂಜನೇಯ ಉತ್ಸವ ಮೂರ್ತಿಗಳು, ರೋಡ್ ಆರ್ಕೆಸ್ಟ್ರಾ, ತಮಟೆ ವಾದ್ಯ, ತಾಲೂಕಿನ ಭಜನಾ ತಂಡವರಿಂದ ಭಜನೆ ಮತ್ತು 30ನೇ ನಂಬರಿನ ಬಿಡಿಯವರಿಂದ ಕರಾವಳಿ ಕುಣಿತ, ಸೃಷ್ಟಿ ಆರ್ಟ್ಸ್ ತಂಡದಿಂದ ಗೊಂಬೆ ಕುಣಿತ, ಕೀಲು ಕುದುರೆ ಹಾಗೂ ಮತ್ತಿತರ ಕಲಾ ಪ್ರದರ್ಶನ ಮೆರವಣಿಗೆಯನ್ನು ಅದ್ದೂರಿಗೊಳಿಸಿದವು.

    ಕಿವಿಗಡಚ್ಚಿಕ್ಕುವ ಸ್ಪೀಕರ್‌ಗಳಿಂದ ಕೆ.ಆರ್.ಸರ್ಕಲ್ ರಂಗೇರಿತ್ತು. ಇಡೀ ಸರ್ಕಲ್‌ನಲ್ಲಿ ಸಾವಿರಾರು ಯುವಕರು ಜಮಾಯಿಸಿದ್ದರು. ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು. ಸ್ಥಳೀಯ ಕಲಾವಿದರು ವಿವಿಧ ಹಾಡುಗಳ ಸಂಗೀತ ನುಡಿಸಿ ಯುವಕರನ್ನು ಪ್ರೇರೇಪಿಸಿದರು. ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಸಹಸ್ರ ಸಂಖ್ಯೆಯಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯನ್ನು ವೀಕ್ಷಿಸಿದರು. ಹೂಗಳನ್ನು ಮತ್ತು ನೀರನ್ನು ರಸ್ತೆಗೆ ಹಾಕಿ ಗಣೇಶನನ್ನು ಕಲಾತಂಡಗಳ ಮೂಲಕ ಬೀಳ್ಕೊಡಲಾಯಿತು. ರಾತ್ರಿ ಊರಿನ ಶ್ರೀ ರಾಮವೃತ್ತ ಅಮಾನಿಕೆರೆಯಲ್ಲಿ ದರ್ಬಾರ್ ಗಣಪತಿ ಮೂರ್ತಿನ್ನು ವಿಸರ್ಜಿಸಲಾಯಿತು.

    ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್.ಅಶೋಕ್, ಉಪಾಧ್ಯಕ್ಷ ನಂಜುಂಡ ಮೈಮ್, ಕಾರ್ಯದರ್ಶಿ ಸಿ.ವೈ.ಸತ್ಯನಾರಾಯಣ, ಖಜಾಂಚಿ ಸಿ.ಎಸ್.ಮನೋಹರ್, ಸಹ ಕಾರ್ಯದರ್ಶಿ ಮಹದೇವ್, ಸಹ ಖಜಾಂಚಿ ಲಕ್ಷ್ಮೀ ನಾರಾಯಣ ಗುಪ್ತ ಹಾಗೂ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.


    ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ಪ್ರತಿ ವರ್ಷವೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಸರ್ಜನಾ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸುತ್ತಿದೆ. ಅಲ್ಲದೆ ಹಲಲಿನಲ್ಲೆ ಮೆರವಣಿಗೆ ಹೊರಡುವುದರಿಂದ ಸಹಸ್ರಾರು ಜನ ಕಲಾ ವೈಭವವನ್ನು ಕಣ್ತುಂಬಿಕೊಳ್ಳಲು ಅನುಕೂಲ ಎನ್ನುತ್ತಾರೆ ಸ್ಥಳೀಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts