More

    ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಒದಗಿಸುವ ಹಸಿರು ಸೊಪ್ಪುಗಳು

    ರಕಾರಿಗಳನ್ನು ಮುಖ್ಯವಾಗಿ ಹಸಿರು ಸೊಪ್ಪುಗಳು, ಬೇರು ಮತ್ತು ಗಡ್ಡೆಗಳು, ಇನ್ನಿತರ ತರಕಾರಿಗಳು ಎಂಬುದಾಗಿ ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಹರಿವೆ ಸೊಪ್ಪು, ಪಾಲಕ್, ಪುದೀನ, ಕ್ಯಾಬೆಜ್, ಮೆಂತ್ಯ, ಸಾಸಿವೆ, ಅಗಸೆ, ಸಬ್ಬಸಿಗೆ, ಕೊತ್ತಂಬರಿ, ಬಸಳೆ, ಕರಿಬೇವು ಇತ್ಯಾದಿಗಳು ಹಸಿರು ಸೊಪ್ಪುಗಳ ವಿಂಗಡಣೆಯಲ್ಲಿ ಬರುತ್ತವೆ.

    ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಒದಗಿಸುವ ಹಸಿರು ಸೊಪ್ಪುಗಳುಇವು ಕಡಿಮೆ ಖರ್ಚಿನ ತರಕಾರಿಗಳಾದರೂ ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಒದಗಿಸುತ್ತವೆ. ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಇನ್ನೂ ಹಲವಾರು ಪ್ರಮುಖ ಖನಿಜ ಪದಾರ್ಥಗಳು ಮತ್ತು ವಿಟಮಿನ್​ಗಳನ್ನು ಇದು ಹೊಂದಿದೆ. ಕ್ಯಾಲ್ಸಿಯಂ ಮೂಳೆಗಳು, ಹಲ್ಲುಗಳಿಗೆ ಬೇಕಾಗಿರುವ ಮುಖ್ಯ ಪೋಷಕಾಂಶವಾಗಿದೆ. ಕಬ್ಬಿಣವು ರಕ್ತ ಉತ್ಪತ್ತಿಗೆ ಕಾರಣವಾಗಿರುವಂತದ್ದು. ವಿಟಮಿನ್​ಗಳು ನಮ್ಮನ್ನು ಅನೇಕ ರೋಗಗಳಿಂದ, ತೊಂದರೆಗಳಿಂದ ರಕ್ಷಿಸುತ್ತವೆ. ಕಣ್ಣಿನ ಆರೋಗ್ಯಕ್ಕೆ, ವಸಡಿನ ಆರೋಗ್ಯಕ್ಕೆ, ಚರ್ಮದ ಆರೋಗ್ಯಕ್ಕೆ ಹಾಗೂ ದೇಹದ ಹಲವಾರು ಕಾರ್ಯಗಳಿಗೆ ವಿಟಮಿನ್​ಗಳು ಅಗತ್ಯವಾಗಿವೆ.

    ಹೈದರಾಬಾದ್​ನ ನ್ಯಾಶನಲ್ ಇನ್​ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ 112 ರೀತಿಯ ಹಸಿರು ತರಕಾರಿಗಳನ್ನು ಪಟ್ಟಿ ಮಾಡಿದೆ. ಸಾಮಾನ್ಯವಾಗಿ ಹಸಿರು ಸೊಪ್ಪುಗಳು ರುಚಿ ಮತ್ತು ಗಾಢ ಬಣ್ಣದ್ದಾಗಿದ್ದು, ಹೆಚ್ಚಾಗಿ ವಿಟಮಿನ್ ಎ ಮತ್ತು ವಿಟಮಿನ್ ಸಿಯ ಮುಖ್ಯ ಆಕರಗಳಾಗಿವೆ. ಎಳೆ ಸೊಪ್ಪುಗಳು ಬೆಳೆದ ಸೊಪ್ಪುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಯನ್ನು ಹೊಂದಿರುತ್ತವೆ. ರೈಬೋಪ್ಲೇವಿನ್ (ವಿಟಮಿನ್ ಬಿ2) ಅಂಶವು ಹೆಚ್ಚಿನ ಪ್ರಮಾಣದಲ್ಲಿ ಹಸಿರು ಸೊಪ್ಪುಗಳಿಂದ ದೊರೆಯುತ್ತದೆ. ನೀರಿನಂಶವನ್ನೂ ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ. ಆದ್ದರಿಂದ ಹಸಿರು ಸೊಪ್ಪುಗಳ ಸೇವನೆಯು ಅರೋಗ್ಯಕ್ಕೆ ಉತ್ತಮವಾದುದು.

    ಆದರೆ ಸೊಪ್ಪುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದಿರುವುದು ಅಗತ್ಯ. ಕೀಟಗಳಿಂದ ಹೊರತಾಗಿರುವ ತಾಜಾ ಸೊಪ್ಪುಗಳನ್ನು ನೋಡಿಕೊಳ್ಳಬೇಕು. ಮನೆಯಲ್ಲಿಯೂ ಹಸಿರು ಸೊಪ್ಪುಗಳನ್ನು ಸುಲಭವಾಗಿ ಬೆಳೆಸಬಹುದು. ಕೊಂಡು ತಂದ ಸೊಪ್ಪುಗಳನ್ನು ಉಪ್ಪು ಬೆರೆಸಿದ ಬಿಸಿನೀರಿನಲ್ಲಿ ತೊಳೆದು ಬಳಸುವುದು ಅವಶ್ಯ. ಸೊಪ್ಪುಗಳ ಹಿಂಭಾಗದಲ್ಲಿ ಕೀಟಗಳು ಸಣ್ಣ ಸಣ್ಣ ಮೊಟ್ಟೆಗಳನ್ನಿರಿಸಿವೆಯೇ ಎಂದು ಪರೀಕ್ಷಿಸಿ ಬಳಸುವುದು ಅಗತ್ಯ.

    ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಯಾವುದಾದರೊಂದು ರೀತಿಯ ಹಸಿರು ಸೊಪ್ಪನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಎಳ್ಳು, ಒಂದು ಚಮಚ ಅಗಸೆಬೀಜ ಮತ್ತು ಜೋನಿ ಬೆಲ್ಲ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ಮಂಡಿನೋವು, ಕುತ್ತಿಗೆ ನೋವು, ಸಂದುನೋವುಗಳು ಕಡಿಮೆ ಆಗುತ್ತವೆ. ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳು ಇದರಿಂದ ಲಭ್ಯವಾಗುತ್ತದೆ. ಅನ್ನದ ಜೊತೆಗೆ, ರೊಟ್ಟಿ-ಚಪಾತಿಯ ಜೊತೆಗೆ, ಪಲ್ಯ ಮಾಡುವುದರಿಂದ ಸಹ ಹಸಿರು ಸೊಪ್ಪನ್ನು ಸೇವಿಸಲು ಸಾಧ್ಯವಾಗುತ್ತದೆ.

    ಅನೇಕರು ಹಸಿರು ಸೊಪ್ಪುಗಳನ್ನು ತೆಗೆದುಕೊಳ್ಳಲು ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಅವು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದನ್ನರಿತು ಸೇವಿಸಿದಾಗ ಅದು ಸ್ವಾಸ್ಥ್ಯನ್ನು ತಂದುಕೊಡುವಲ್ಲಿ ನೆರವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts