More

    ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ವರ್ಣರಂಜಿತ ಫ್ರೀ ಸ್ಟೈಲ್ ರೌಂಡ್…

    ಬೆಂಗಳೂರು: ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಡಾನ್ಸ್ ಕರ್ನಾಟಕ ಡಾನ್ಸ್’ ಶೋನ ಫ್ರೀ ಸ್ಟೈಲ್​ ರೌಂಡ್ ಇತ್ತೀಚೆಗೆ ನಡೆದಿದ್ದು, ಮನಸೆಳೆಯುವ ಸಾಕಷ್ಟು ಪ್ರದರ್ಶನಗಳನ್ನು ಇದರಲ್ಲಿ ಪ್ರಸ್ತುತಿ ಪಡಿಸಲಾಯಿತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಿಗಳಲ್ಲಿ ಪ್ರತಿಯೊಬ್ಬರೂ ವಿಭಿನ್ನವಾಗಿದ್ದು, ಎಲ್ಲರೂ ಅತ್ಯುತ್ತಮ ಎನ್ನುವಂಥ ಪ್ರದರ್ಶನ ನೀಡಿದರು. ಫ್ರೀ ಸ್ಟೈಲ್ ರೌಂಡ್​ನಲ್ಲಿ ಅವರು ನೀಡಿದ್ದ ಪ್ರದರ್ಶನಗಳ ಕುರಿತ ಒಂದು ಝಲಕ್ ಇಲ್ಲಿದೆ.

    ಡಾನ್ಸ್ ಕರ್ನಾಟಕ ಡಾನ್ಸ್​ ಶೋನ ತೀರ್ಪುಗಾರರ ತಂಡದಲ್ಲಿ ‘ಕ್ರೇಜಿ ಕ್ವೀನ್​’ ರಕ್ಷಿತಾ ಪ್ರೇಮ್​, ನಟ ವಿಜಯ್ ರಾಘವೇಂದ್ರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿದ್ದು, ಅವರ ಜತೆಗೆ ಭಾರತೀಯ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್​ ಕೂಡ ಹೊಸದಾಗಿ ಸೇರಿಕೊಂಡಿದ್ದಾರೆ.

    ಫ್ರೀ ಸ್ಟೈಲ್ ರೌಂಡ್​

    1. ಸ್ವಾತಿ ಮುತ್ತಿನ ಮಳೆ ಹನಿಯೇ…

    ರವಿಚಂದ್ರನ್ ಅಭಿನಯದ ‘ಬಣ್ಣದ ಗೆಜ್ಜೆ’ ಸಿನಿಮಾದಲ್ಲಿ ಚಿನ್ನಿಪ್ರಕಾಶ್ ಅವರಿಂದಲೇ ನೃತ್ಯ ಸಂಯೋಜನೆ ಆಗಿರುವಂಥ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಹಾಡಿಗೆ ವಿಕ್ರಮ್​ ಹಾಗೂ ಶೆಫಾಲಿ ಹೆಜ್ಜೆ ಹಾಕಿದರು. ‘ಡಾನ್ಸ್​ ಕರ್ನಾಟಕ ಡಾನ್ಸ್’ ವೇದಿಕೆಯಲ್ಲಿ ಈ ಜೋಡಿ ನೀಡಿದ ಪ್ರದರ್ಶನಕ್ಕೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಲ್ಲದೆ, ಇವರು ಗೋಲ್ಡನ್ ಹ್ಯಾಟ್​ ಗೌರವಕ್ಕೂ ಪಾತ್ರರಾದರು.

    2. ಬೃಂದಾ-ರಾಹುಲ್​ ಕಣ್ಣಾಮುಚ್ಚಾಲೆ…

    ಸ್ಪರ್ಧಿಗಳ ಪೈಕಿ ಬೃಂದಾ-ರಾಹುಲ್ ಅವರ ಕಣ್ಣಾಮುಚ್ಚಾಲೆ ಕೂಡ ಫ್ರೀ ಸ್ಟೈಲ್​ ರೌಂಡ್​ನಲ್ಲಿ ಗಮನ ಸೆಳೆಯಿತು. ‘ರ‍್ಯಾಂಬೋ’ ಸಿನಿಮಾದ ‘ಕಣ್ಣಾ ಮುಚ್ಚೆ ಕಾಡೇ..’ ಹಾಡಿಗೆ ಬೃಂದಾ-ರಾಹುಲ್ ನೀಡಿದ್ದ ಪ್ರದರ್ಶನ ಭಾವುಕತೆಯಿಂದ ಕೂಡಿತ್ತು. ಬಡ ಕುಟುಂಬವನ್ನು ಕೋವಿಡ್​-19 ಹೇಗೆ ಸಂಕಷ್ಟಕ್ಕೆ ತಳ್ಳಿತು, ಲಾಕ್​ಡೌನ್​ ಸಂದರ್ಭದಲ್ಲಿ ಆ ಕುಟುಂಬ ಎದುರಿಸಿದ ಸಮಸ್ಯೆ ಎಂಥದ್ದು ಎಂಬ ಥೀಮ್​ನಲ್ಲಿ ಅವರು ಈ ಪ್ರದರ್ಶನ ನೀಡಿದರು.

    3. ನೆನಪಿರಲಿ.. ಇಂದು ಬಾನಿಗೆಲ್ಲ ಹಬ್ಬ…

    ಈ ಶೋನ ವಿಶೇಷ ಸ್ಪರ್ಧಿ ಅಂದರೆ ವಾಕ್​-ಶ್ರವಣ ದೋಷವಿರುವ ಚೈತ್ರಾಲಿ ‘ನೆನಪಿರಲಿ’ ಸಿನಿಮಾದ ‘ಇಂದು ಬಾನಿಗೆಲ್ಲ ಹಬ್ಬ..’ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದರು. ಅಲ್ಲದೆ ಮಾತು ಬರದ, ಕಿವಿ ಕೇಳದ ಇವರು ಹೇಗೆ ಅಭ್ಯಾಸ ಮಾಡುತ್ತಾರೆ, ಹೆಜ್ಜೆಗಳನ್ನು ಹೇಗೆ ನೆನಪಿನಲ್ಲ ಇಟ್ಟುಕೊಳ್ಳುತ್ತಾರೆ ಎಂಬ ಕುರಿತ ಒಂದು ಆಡಿಯೋ-ವಿಡಿಯೋ ತುಣುಕೊಂದನ್ನೂ ಇಲ್ಲಿ ಪ್ರದರ್ಶಿಸಲಾಯಿತು.

    5. ಅನ್ನಪೂರ್ಣ ಅಜ್ಜಿಯ ತಂ ನಂ ತಂ ನಂ..

    ಡಾ.ರಾಜ್​ಕುಮಾರ್-ಕಲ್ಪನಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ ‘ಎರಡು ಕನಸು’ ಸಿನಿಮಾದ ‘ತಂ ನಂ ತಂ ನಂ..’ ಎಂಬ ಹಾಡಿಗೆ ಶೋನ ವಿಶೇಷ ಸ್ಪರ್ಧಿ ಅನ್ನಪೂರ್ಣ ಅಜ್ಜಿ ಹೆಜ್ಜೆ ಹಾಕಿದ್ದೇ ವಿಶೇಷ ಆಕರ್ಷಣೆಯಂತಿತ್ತು. ಗೌಡ್ರೇ ಎಂದೇ ಹೆಸರಾಗಿರುವ ಆರವ್ ಗೌಡ ಜೊತೆ ಅನ್ನಪೂರ್ಣ ಅಜ್ಜಿ ನರ್ತಿಸಿ ಮನರಂಜಿಸಿದರು. ಬಳಿಕ ಅಜ್ಜಿಯ ಬಾಲ್ಯದ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರ ಹಳೆಯ ನೆನಪುಗಳ ಕುರಿತು ಮಾತನಾಡಿಸಲಾಯಿತು. ತಾವು ರಂಗಭೂಮಿ ಕಲಾವಿದೆಯಾಗಿದ್ದು, ಯವ್ವನದ ದಿನಗಳಲ್ಲಿ ಮನೆಯ ಖರ್ಚಿಗೆ ನೆರವಾಗಲು ನಾಟಕಗಳಲ್ಲಿ ಬಣ್ಣ ಹಚ್ಚಿದ್ದನ್ನೂ ಅನ್ನಪೂರ್ಣ ಅಜ್ಜಿ ನೆನಪಿಸಿಕೊಂಡರು.

    5. ಹೇಳಿಲ್ಲ ಯಾರಲ್ಲೂ ನಾನು…

    ‘ಡಾನ್ಸ್ ಕರ್ನಾಟಕ ಡಾನ್ಸ್’ ಶೋನ ಮತ್ತೊಂದು ಜೋಡಿ ವಿಜಯ್​ ಸಿಂಗ್ ಶೆಟ್ಟಿ ಮತ್ತು ರಿತಿಕಾ ಆ್ಯಕ್ರೋಬ್ಯಾಟಿಕ್ ಸ್ಟೈಲ್​ನಲ್ಲಿ ಪ್ರದರ್ಶನ ನೀಡಿದರು. ಇವರು ‘ಕೃಷ್ಣ ರುಕ್ಕು’ ಸಿನಿಮಾದ ‘ಹೇಳಿಲ್ಲ ಯಾರಲ್ಲೂ ನಾನು..’ ಎಂಬ ಗೀತೆಗೆ ನರ್ತಿಸಿ, ಮೆಚ್ಚುಗೆ ಗಳಿಸಿದ್ದಲ್ಲದೆ ಗೋಲ್ಡನ್​ ಹ್ಯಾಟ್​ಗೂ ಪಾತ್ರರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts