More

    ಆನೆಗಳ ದಾಳಿಗೆ ತೋಟಕ್ಕೆ ಹಾನಿ

    ಬಾಳೆಹೊನ್ನೂರು: ದೇವದಾನ ಗ್ರಾಮದ ಖಾಂಡ್ಯದಲ್ಲಿ ಸೋಮವಾರ ರಾತ್ರಿ ಕಾಡಾನೆಗಳು ತೋಟಕ್ಕೆ ನುಗ್ಗಿ ಅಪಾರ ನಷ್ಟವನ್ನುಂಟು ಮಾಡಿವೆ.

    ಖಾಂಡ್ಯದ ಕೃಷಿಕ ಅನಂತ ಭಟ್ ಎಂಬುವರ ತೋಟಕ್ಕೆ ನುಗ್ಗಿದ ಕಾಡಾನೆಗಳು 50ಕ್ಕೂ ಅಧಿಕ ಅಡಕೆ ಮರಗಳನ್ನು ಹಾಗೂ 30ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ಬುಡ ಸಮೇತ ಉರುಳಿಸಿವೆ. ಸಲು ಭರಿತ ಅಡಕೆ, ಕಾಫಿ ಗಿಡಗಳನ್ನು ನಾಶಗೊಳಿಸಿರುವುದರಿಂದ ಅಪಾರ ನಷ್ಟವುಂಟಾಗಿದೆ. ಹಲವು ದಿನಗಳಿಂದ ಕಾಡಾನೆಗಳು ಈ ಭಾಗದ ಜಮೀನುಗಳಿಗೆ ದಾಳಿ ಮಾಡಿ ಹಾನಿ ಉಂಟುಮಾಡುತ್ತಿವೆ.
    ಖಾಂಡ್ಯ, ದೇವದಾನ, ಕರಗಣೆ, ಹುಯಿಗೆರೆ, ಬಿದರೆ, ಅರಿಗೆ, ಕಡಬಗೆರೆ, ಮಸೀಗದ್ದೆ, ಹೊನ್ನೇಕೊಪ್ಪ ಮುಂತಾದ ಕಡೆಗಳಲ್ಲಿ ಹಲವಾರು ದಿನಗಳಿಂದ ಆನೆ ದಾಳಿ ನಿರಂತರವಾಗಿದ್ದು, ಅರಣ್ಯ ಇಲಾಖೆಗೆ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಆನೆಗಳನ್ನು ಬೇರೆಡೆಗೆ ಓಡಿಸಬೇಕು ಅಥವಾ ಸ್ಥಳಾಂತರ ಮಾಡಬೇಕು. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ವಿತರಿಸಬೇಕು. ಇಲ್ಲದಿದ್ದಲ್ಲಿ ಶೀಘ್ರದಲ್ಲಿ ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆಯಿಂದ ಅರಣ್ಯ ಇಲಾಖೆ ವಿರುದ್ಧ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಸದಸ್ಯ ಚಂದ್ರಶೇಖರ್ ರೈ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts