More

    ಗಾಳಿ, ಮಳೆಗೆ ಅಡಕೆ, ಬಾಳೆ ತೋಟಕ್ಕೆ ಹಾನಿ

    ಎನ್.ಆರ್.ಪುರ: ತಾಲೂಕಿನಲ್ಲಿ ಶನಿವಾರ ಭಾರಿ ಗಾಳಿ, ಮಳೆಗೆ ಅಡಕೆ ಮರಗಳು, ಬಾಳೆ ಗಿಡಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

    ಹೊನ್ನೇಕೊಡಿಗೆ ಗ್ರಾಪಂ ವರ್ಕಾಟೆ ಗ್ರಾಮದಲ್ಲಿ ಭಾರಿ ಗಾಳಿ, ಮಳೆಗೆ ನೇಂದ್ರ ಬಾಳೆ, ಅಡಕೆ ಮರಗಳು ಮುರಿದು ಬಿದ್ದಿವೆ. ವರ್ಕಾಟೆ ಗ್ರಾಮದ ಶಿವಣ್ಣ ಎಂಬುವರು 1.50 ಎಕರೆ ಜಾಗವನ್ನು ಗುತ್ತಿಗೆ ಪಡೆದು 1 ಸಾವಿರ ನೇಂದ್ರ ಬಾಳೆ ಬೆಳೆದಿದ್ದರು. ಇನ್ನು ಒಂದು ತಿಂಗಳಲ್ಲಿ ನೇಂದ್ರ ಬಾಳೆ ಕಟಾವಿಗೆ ಬರುತ್ತಿತ್ತು. ಆದರೆ ಭಾರಿ ಗಾಳಿಗೆ 350 ನೇಂದ್ರ ಬಾಳೆ ಗಿಡಗಳು ಮುರಿದು ಬಿದ್ದಿವೆ. ಗ್ರಾಮದ ಕಂಪ್ಲಿ ಹರೀಶ್ ಎಂಬುವರ ತೋಟದಲ್ಲಿ ಗಾಳಿಗೆ 40 ಅಡಕೆ ಮರಗಳು ಮುರಿದು ಬಿದ್ದಿವೆ.
    ಸೀತೂರು ಗ್ರಾಪಂ ಬೆಳ್ಳೂರು ಗ್ರಾಮದಲ್ಲಿ ಬಿ.ಆರ್.ಸತೀಶ್ ಎಂಬುವರ ಮನೆ ಮೇಲೆ ಮರ ಬಿದ್ದು ಛಾವಣಿ ಶೀಟುಗಳು ಪುಡಿಯಾಗಿವೆ. ಪಕ್ಕದಲ್ಲಿದ್ದ ಬಿಎಸ್‌ಎನ್‌ಎಲ್ ಕಟ್ಟಡದ 50 ಹೆಂಚುಗಳು ಪುಡಿಯಾಗಿವೆ. ಜತೆಗೆ 6 ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಬಿದ್ದಿವೆ. ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಸ್ಥಳ ಪರಿಶೀಲಿಸಿದರು. ಬೆಮ್ಮನೆಯಲ್ಲಿ ಒಂದು ವಿದ್ಯುತ್ ಕಂಬ ಬಿದ್ದಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಳಿಯಿಂದಾಗಿ ನೂರಾರು ಅಡಕೆ ಮರಗಳು ಬುಡಮೇಲಾಗಿವೆ. ಕಣಿವೆಯಲ್ಲಿ 15 ವಿದ್ಯುತ್ ಕಂಬಗಳು ನೆಲಕಚ್ಚಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts