More

    40ನೇ ವಯಸ್ಸಿಗೆ 2ನೇ ಮದುವೆಯಾದ ಕಿರುತೆರೆ ನಟಿ!

    ಮುಂಬೈ: ಹಿಂದಿ ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ, ಕಿರುತೆರೆಯ ನಟಿ ದಲ್ಜೀತ್ ಕೌರ್ 40ನೇ ವಯಸ್ಸಿಗೆ ಎರಡನೇ ಮದುವೆಯಾಗಿದ್ದಾರೆ.

    ಈ ಹಿಂದೆ ನಟಿ ದಲ್ಜೀತ್ ಕೌರ್ ಹಿಂದಿ ನಟ ಶಾಲಿನ್ ಭಾನೋಟ್ ಜೊತೆ 2019ರಲ್ಲಿ ಹಸೆಮಣೆ ಏರಿದ್ದರು. ನಂತರ ಈ ಜೋಡಿ ಡಿವೋರ್ಸ್ ಪಡೆದು ದೂರಾವಾದರು. ಇದೀಗ ಉದ್ಯಮಿ ನಿಖಿಲ್ ಪಟೇಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಇದನ್ನೂ ಓದಿ:  ಡಿವೋರ್ಸ್ ಕೊಟ್ಟ ಪತಿ; ಮೀಸೆ, ಗಡ್ಡ ಬಿಟ್ಟು ಪುರುಷನಾದ ಮಹಿಳೆ!

    ನಿಖಿಲ್ ಪಟೇಲ್ ಮತ್ತು ದಲ್ಜೀತ್ ಕೌರ್ ಇಬ್ಬರಿಗೂ ಇದು 2ನೇ ಮದುವೆಯಾಗಿದ್ದು,ನಿಖಿಲ್‌ಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಲ್ಜೀತ್ ಕೌರ್‌ಗೆ ಈಗಾಗಲೇ ಒಬ್ಬ ಮಗನಿದ್ದು, ಪೋಷಕರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

    ಇದನ್ನೂ ಓದಿ: ಏಷ್ಯಾದಲ್ಲೇ ಮೊದಲು; ಎರಡೂ ತೋಳುಗಳ ಯಶಸ್ವಿ ಶಸ್ತ್ರ ಚಿಕಿತ್ಸೆ!

    ಗುರುಹಿರಿಯರ ಸಮ್ಮುಖದಲ್ಲಿ ಇಂದು ಈ ಜೋಡಿ ಮದುವೆಯಾಗಿದ್ದಾರೆ. ಸದ್ಯ ಹಳದಿ ಶಾಸ್ತ್ರ, ಮತ್ತು ವಿವಾಹದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿವೆ.

    ಅದ್ಧೂರಿ ಮದುವೆ; ರಾತ್ರಿ ಇಡೀ 28 ಕಿ.ಮೀ​ ನಡೆದು ಮಂಟಪಕ್ಕೆ ಬಂದ ವರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts