More

    ದಲಿತ ಸಂಘರ್ಷ ಸಮಿತಿ ದಲಿತರಿಗೆ ಮಾತ್ರ ಸೀಮಿತವಾಗಿಲ್ಲ

    ಸರಗೂರು: ದಲಿತ ಸಂಘರ್ಷ ಸಮಿತಿ ದಲಿತರಿಗೆ ಸೀಮಿತವಾಗಿಲ್ಲ. ಶೋಷಣೆಗೆ ಒಳಗಾದ ಎಲ್ಲ ಸಮುದಾಯದವರ ರಕ್ಷಣೆಗೆ ನಿಲ್ಲುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೋಟೆ ಬೆಟ್ಟಯ್ಯ ಹೇಳಿದರು.

    ತಾಲೂಕಿನ ಮುಳ್ಳೂರು ಗ್ರಾಪಂ ವ್ಯಾಪ್ತಿಯ ನುಗು ಬೀರ್ವಾಳು ಪ್ರವಾಸಿ ಮಂದಿರದಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ದಲಿತರ ಬಲಪಡಿಸಲು ಹಾಗೂ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

    ದಲಿತ ಸಂಘರ್ಷ ಸಮಿತಿ 1974ರಲ್ಲಿ ಪ್ರಾರಂಭವಾಗಿ ಶೋಷಿತರ ಪರವಾಗಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದೆ. ಜನರ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವುದೇ ದಸಂಸ ಗುರಿಯಾಗಿದೆ ಎಂದರು.

    ತಾಲೂಕು ಸಮಿತಿ ಪ್ರತಿ ತಿಂಗಳು ಪದಾಧಿಕಾರಿಗಳ ಸಭೆ ಕರೆದು ತಾಲೂಕಿನಲ್ಲಿರುವ ಸಮಸ್ಯೆಗಳನ್ನು ಪಟ್ಟಿಮಾಡಿ ಜಿಲ್ಲಾ ಸಮಿತಿಗೆ ಕಳುಹಿಸಿಕೊಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದಲಿತ ಸಂಘರ್ಷ ಸಮಿತಿ ಆರಂಭಿಸುವ ಮೂಲಕ ಗ್ರಾಮಗಳಲ್ಲಿರುವ ಸಮಸ್ಯೆ ನಿವಾರಿಸಲು ಪದಾಧಿಕಾರಿಗಳು ಶ್ರಮವಹಿಸಬೇಕು ಎಂದು ಹೇಳಿದರು.

    ಜಿಲ್ಲಾ ಸಂಘಟನಾ ಸಂಚಾಲಕ ಹೆಗ್ಗನೂರು ನಿಂಗರಾಜು, ತಾಲೂಕು ಸಂಚಾಲಕ ಉಯ್ಯಂಬಳ್ಳಿ ಮುತ್ತು, ಎಂ.ಡಿ.ಶಿವಶಂಕರ್, ಹೋಬಳಿ ಸಂಚಾಲಕ ನಾಗಣ್ಣ ಹಳಿಯೂರು, ಗ್ರಾ.ಪಂ. ಸದಸ್ಯ ಕಾಳಸ್ವಾಮಿ, ಚಕ್ಕೂರು ಕಾಳಸ್ವಾಮಿ, ಕಲ್ಲೇಶ್, ಕಾಂತಯ್ಯ, ಮಹೇಶ್ ಮಲಾರ, ಶಿವಚನ್ನ, ರಾಮಲಿಂಗಪ್ಪ, ಲೋಕೇಶ್, ಸಿದ್ದರಾಜು, ದಾಸಯ್ಯ, ಸುರೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts