More

    ದಲಿತ ವರ್ಗವನ್ನು ನಿರ್ಲಕ್ಷಿಸಿದ ಕಾಂಗ್ರೆಸ್: ಎಂ.ಬಸವರಾಜ ನಾಯ್ಕ ಆರೋಪ

    ದಾವಣಗೆರೆ: 65 ವರ್ಷ ಕಾಲ ಆಳಿದ ಕಾಂಗ್ರೆಸ್, ದಲಿತರನ್ನು ಹಾಗೂ ಅವರ ಕಾಲನಿಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಎಂ.ಬಸವರಾಜನಾಯ್ಕ ದೂರಿದರು.

    ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಎಸ್‌ಸಿ ಮೋರ್ಚಾ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

    ಬಿಜೆಪಿ ಸರ್ಕಾರದಲ್ಲಿ ದಲಿತರ ಕಾಲನಿಗಳಲ್ಲಿ ಸಿಮೆಂಟ್ ರಸ್ತೆ, ಅಂಬೇಡ್ಕರ್ ಭವನಗಳು ಮೇಲೆದ್ದಿವೆ. ಕಾಂಗ್ರೆಸ್, ಮಾರ್ಚ್ ಬಂದಾಗ ಮಾತ್ರವೇ ದಲಿತರ ಕಾಲನಿಗಳಿಗೆ ಗ್ರಾವೆಲ್ ಹಾಕಿದೆ. ನಿಜವಾದ ಅಭಿವೃದ್ಧಿ ಮಾಡಲೇ ಇಲ್ಲ ಎಂದು ಆಕ್ಷೇಪಿಸಿದರು.

    ಕೇಂದ್ರದ ಬಿಜೆಪಿ ಸರ್ಕಾರ ಬಡವರಿಗೆ ಗ್ಯಾಸ್ ಸಿಲಿಂಡರ್ ಒದಗಿಸಿದೆ. ಇದರೊಂದಿಗೆ ಜನಧನ್ ಸೌಲಭ್ಯ ಪಡೆದವರು ಪರಿಶಿಷ್ಟರೇ ಹೆಚ್ಚಿದ್ದಾರೆ. ಗ್ರಾಪಂ, ಪದವೀಧರ ಹಾಗೂ ಇತರೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸಬೇಕು. ಈ ದಿಸೆಯಲ್ಲಿ ಕಾರ್ಯರ್ತರು ಶ್ರಮಿಸಬೇಕು ಎಂದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಂಜಾನಾಯ್ಕ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ಕಿತ್ತುಕೊಳ್ಳಲಿದೆ ಎಂದು ಬಿಂಬಿಸಲಾಯಿತು. ಕೇಂದ್ರ ಸರ್ಕಾರ ಎಲ್ಲಾ ಜಾತಿಯವರಿಗೂ ಅನುಕೂಲಕರ ಯೋಜನೆಗಳನ್ನು ನೀಡಿದೆ. ಕಾಂಗ್ರೆಸ್ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಟೀಕಿಸಿದರು.

    ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್.ಹನುಮಂತನಾಯ್ಕ ಮಾತನಾಡಿ, ಬಿಎಸ್‌ವೈ ಸರ್ಕಾರ ಸಣ್ಣ ಸಮುದಾಯದವರಿಗೂ ನಿಗಮಗಳನ್ನು ಸ್ಥಾಪಿಸಿತು. ದಲಿತ ಸಮುದಾಯದವರು ಆಯಾ ಸರ್ಕಾರದ ಕಾರ್ಯಕ್ರಮಗಳ ವ್ಯತ್ಯಾಸ ಅರಿಯಬೇಕು ಎಂದು ಹೇಳಿದರು.

    ಬಿಜೆಪಿ ಮುಖಂಡ ಕೆ.ಎನ್.ಓಂಕಾರಪ್ಪ ಮಾತನಾಡಿದರು.

    ಉತ್ತರ ವಿಧಾನಸಭಾ ಕ್ಷೇತ್ರದ ಎಸ್‌ಸಿ ಮೋರ್ಚಾ ಅಧ್ಯಕ್ಷ ಎಂ.ರವಿನಾಯ್ಕ, ಪ್ರ. ಕಾರ್ಯದರ್ಶಿಗಳಾದ ಕೆ.ಮಂಜು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್.ಶಿವಪ್ರಕಾಶ್, ಎಂ.ಕೊಟ್ರೇಶ್, ಉತ್ತರ ವಿಧಾನಸಭಾ ಅಧ್ಯಕ್ಷ ಬಿ.ಜಿ.ಸಂಗಜ್ಜಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts