More

    ಗುಲಾಬಿ ನೀಡಿ ಚಪ್ಪಾಳೆ ತಟ್ಟಿ ವೈದ್ಯರ ಸಂಭ್ರಮ

    ಮಂಗಳೂರು: ಕರೊನಾ ಸೋಂಕು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ದೃಷ್ಟಿಹೀನ ವೃದ್ಧೆ ಸಹಿತ ಐವರು ಗುಣಮುಖರಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಶನಿವಾರ ಬಿಡುಗಡೆಯಾಗಿದ್ದಾರೆ.
    ಜಿಲ್ಲಾಡಳಿತ ವತಿಯಿಂದ ಎಲ್ಲರಿಗೂ ಗುಲಾಬಿ ಹೂ ನೀಡಿ, ಚಪ್ಪಾಳೆ ತಟ್ಟಿ ಅಭಿನಂದಿಸಿದ ಬಳಿಕ ಆಸ್ಪತ್ರೆ ಮುಂಭಾಗ ವೈದ್ಯರು, ಸಿಬ್ಬಂದಿ ಬೀಳ್ಕೊಟ್ಟರು. ಜಿಲ್ಲೆಯಲ್ಲಿ ಈವರೆಗೆ 65 ಕರೊನಾ ಸೋಂಕಿತರು ಪತ್ತೆಯಾಗಿದ್ದು, ಶನಿವಾರ ಬಿಡುಗಡೆಯಾದ ಐವರು ಸೇರಿ ಒಟ್ಟು 26 ಮಂದಿ ಬಿಡುಗಡೆಯಾದಂತಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಕರೊನಾ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಸದಾಶಿವ ಶಾನುಭೋಗ್ ತಿಳಿಸಿದ್ದಾರೆ.

    ಬಿಡುಗಡೆಯಾದವರ ವಿವರ: ಬಿಡುಗಡೆಯಾದವರಲ್ಲಿ ಮೂವರು ಬಂಟ್ವಾಳ ಮತ್ತು ಇಬ್ಬರು ಮಂಗಳೂರಿನ ಬೋಳೂರಿನವರು. ಬೋಳೂರು ನಿವಾಸಿಗಳಾದ 51 ವರ್ಷದ (ರೋಗಿ 658) ವ್ಯಕ್ತಿಗೆ ಮೇ 4ರಂದು, ಅವರ ಪತ್ನಿ 37 ವರ್ಷದ (ರೋಗಿ 675) ಮಹಿಳೆಗೆ ಮೇ 5ರಂದು ಕರೊನಾ ಪಾಸಿಟಿವ್ ಬಂದಿತ್ತು. ಬಂಟ್ವಾಳ ನಿವಾಸಿ 30 ವರ್ಷದ ಯುವಕ(ರೋಗಿ 777), 60 ವರ್ಷದ ಪುರುಷ(ರೋಗಿ 778) ಮತ್ತು 70 ವರ್ಷದ ಅಂಧ ವೃದ್ಧೆ (ರೋಗಿ 779)ಗೆ ಮೇ 8ರಂದು ಕರೊನಾ ಸೋಂಕು ದೃಢಪಟ್ಟಿತ್ತು. ಮೇ 20 ಮತ್ತು 21ರಂದು ಪಡೆದ ಗಂಟಲು ದ್ರವ ಪರೀಕ್ಷೆಯ ವರದಿ ನೆಗೆಟಿವ್ ಎಂದು ಬಂದಿದೆ. ಎಲ್ಲರೂ 14 ದಿನ ಹೋಂ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

    ಬಂಟ್ವಾಳ ಪೇಟೆ, ಬೋಳೂರು ಕರೊನಾ ಮುಕ್ತ: ಜಿಲ್ಲೆಯಲ್ಲಿ ಕರೊನಾ ಹಾಟ್‌ಸ್ಪಾಟ್ ಆಗಿದ್ದ ಬಂಟ್ವಾಳ ಕಸ್ಬಾ ಈಗ ಕರೊನಾ ಮುಕ್ತವಾಗಿದೆ. ಒಟ್ಟು 9 ಕರೊನಾ ಪ್ರಕರಣಗಳು ಇಲ್ಲಿ ಪತ್ತೆಯಾಗಿದ್ದು, ಈ ಪೈಕಿ ಆರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರು ಮೃತಪಟ್ಟಿದ್ದರು. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 13 ಪ್ರಕರಣಗಳು ದೃಢಪಟ್ಟಿತ್ತು. ಈ ಪೈಕಿ ಸಕ್ರಿಯ ಪ್ರಕರಣ ಇರುವುದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಂಬೈನಿಂದ ಬಂದಿದ್ದ ವಿಟ್ಲ ಕರೋಪಾಡಿ ಯುವಕನದ್ದು ಮಾತ್ರ. ಮಂಗಳೂರು ನಗರದ ಬೋಳೂರು ಪ್ರದೇಶವೂ ಕರೊನಾ ಮುಕ್ತವಾಗಿದೆ. ಇಲ್ಲಿ ದೃಢಪಟ್ಟ ಐದು ಪ್ರಕರಣಗಳ ಪೈಕಿ 58 ವರ್ಷದ ಮಹಿಳೆ ಮೃತಪಟ್ಟಿದ್ದರು. ಮೃತ ಮಹಿಳೆಯ ಪತಿ, ಮಗಳು, ಅಳಿಯ ಮತ್ತು ಮೊಮ್ಮಗಳು ಗುಣಮುಖರಾಗಿ ಮನೆ ಸೇರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts