More

    ದ.ಕ, ಉಡುಪಿ ಪ್ರಥಮ ಪಿಯು ಶೇ.91 ಪಾಸ್, ಹುಡುಗಿಯರೇ ಮೇಲುಗೈ

    ಮಂಗಳೂರು/ಉಡುಪಿ: ಫೆಬ್ರವರಿ ತಿಂಗಳಲ್ಲಿ ನಡೆದ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಯ ಫಲಿತಾಂಶ ಕರೊನಾ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಮಂಗಳವಾರ ಪ್ರಕಟಗೊಂಡಿದ್ದು, ಉಭಯ ಜಿಲ್ಲೆಗಳಲ್ಲಿ ಶೇ.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

    ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಅವಕಾಶ ಇಲ್ಲದ ಕಾರಣ ಕಾಲೇಜಿನಿಂದಲೇ ವಿದ್ಯಾರ್ಥಿಗಳ ಹೆತ್ತವರ ಮೊಬೈಲ್ ಮತ್ತು ಇಮೇಲ್‌ಗೆ ಫಲಿತಾಂಶ ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ದ.ಕ ಜಿಲ್ಲಾ ಪಪೂ ಕಾಲೇಜು ಪ್ರಾಂಶುಪಾಲರ ಸಂಘದ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಲಾಯಿತು.

     ಹುಡುಗಿಯರೇ ಮೇಲುಗೈ: ದ.ಕ ಜಿಲ್ಲೆಯಲ್ಲಿ ಶೇ.91.36 ಫಲಿತಾಂಶ ದಾಖಲಾಗಿದೆ. 33,498 ವಿದ್ಯಾರ್ಥಿಗಳ ಪೈಕಿ 30,603 ಮಂದಿ ಉತ್ತೀರ್ಣರಾದರೆ, 2509 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 17,004 ಹುಡುಗರಲ್ಲಿ 14941 ಮಂದಿ (ಶೇ.87.87) ಉತ್ತೀರ್ಣರಾಗಿದ್ದಾರೆ. 16,494 ವಿದ್ಯಾರ್ಥಿನಿಯರಲ್ಲಿ ಉತ್ತೀರ್ಣರಾದವರು 15,662 (ಶೇ.94.96) ಮಂದಿ.

    ಟಾಪರ್ಸ್: ಶಾರದಾ ವಿದ್ಯಾನಿಕೇತನ ಕಾಲೇಜಿನ ಇಂಚರಾ ಕೆ.ವಿ. ಹಾಗೂ ಮ್ಯಾಪ್ಸ್ ಕಾಲೇಜಿನ ನೇಹಾ 598 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಯೇನೆಪೊಯ ಕಾಲೇಜಿನ ಮರಿಯಂ ಶೈಬಾ ನಝ್ಲಿ, ಶಾರದಾ ಕಾಲೇಜಿನ ಕೃಪಾ ಕೆ.ಆರ್ 596 ಅಂಕಗಳೊಂದಿಗೆ ದ್ವಿತೀಯ, ನೆಲ್ಲಿಕಟ್ಟೆ ಅಂಬಿಕಾ ವಿದ್ಯಾಲಯದ ಸ್ವರ್ಣಾ ಶೆಣೈ ವೈ., ಮೂಲ್ಕಿ ವಿಜಯಾ ಕಾಲೇಜಿನ ಬಿ.ಅನಘಾ ಕಾಮತ್ 595 ಅಂಕ ಪಡೆದು ತೃತೀಯ ಸ್ಥಾನಿಗಳಾಗಿದ್ದಾರೆ.

    ವಿಭಾಗವಾರು ಸಾಧಕರು: ಕಲಾ ವಿಭಾಗದಲ್ಲಿ ವಾಣಿ ಸ್ವತಂತ್ರ ಪಪೂ ಕಾಲೇಜಿನ ನಮೃತಾ(588), ವಿಠಲ ಪಪೂ ಕಾಲೇಜಿನ ಖದೀಜರಸ್ಮಿ ಎನ್.(586) ಮತ್ತು ಸಂತ ಆಗ್ನೆಸ್ ಪಪೂ ಕಾಲೇಜಿನ ನಿಷ್ಕಲಾ ಶೆಟ್ಟಿ(579) ಮೊದಲ ಮೂರು ಸ್ಥಾನಿಗಳು. ವಾಣಿಜ್ಯ ವಿಭಾಗದಲ್ಲಿ ಮ್ಯಾಪ್ಸ್ ಕಾಲೇಜಿನ ನೇಹಾ(598), ಶಾರದಾ ಪಪೂ ಕಾಲೇಜಿನ ಕೃಪಾ ಕೆ.ಆರ್, ಯೇನೆಪೋಯ ಪಪೂ ಕಾಲೇಜಿನ ಮರಿಯಂ ಶೈಬಾ ನಝ್ಲಿ(596), ನೆಲ್ಲಿಕಟ್ಟೆ ಅಂಬಿಕಾ ಪಪೂ ವಿದ್ಯಾಲಯದ ಸ್ವರ್ಣಾ ಶೆಣೈ ವೈ., ಮೂಲ್ಕಿ ವಿಜಯಾ ಪಿ.ಯು.ಕಾಲೇಜಿನ ಬಿ.ಅನಘಾ ಕಾಮತ್(595) ಮೊದಲ ಮೂರು ಸ್ಥಾನ ಪಡೆದಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಶಾರದಾ ವಿದ್ಯಾನಿಕೇತನ ಪಪೂ ಕಾಲೇಜಿನ ಇಂಚರಾ ಕೆ.ವಿ(598), ಎಕ್ಸ್‌ಪರ್ಟ್ ಪಪೂ ಕಾಲೇಜಿನ ಹೊಳೆಬಸವ ಬಸವರಾಜ್ ಮೋದಿ, ಎ.ಸಹಜ್ ಆಳ್ವ, ಆಳ್ವಾಸ್ ಪಪೂ ಕಾಲೇಜಿನ ಸಿದ್ಧಾರ್ಥ್ ಶೆಟ್ಟಿ(594), ಶ್ರೀ ಚೈತನ್ಯ ಪಪೂ ಕಾಲೇಜಿನ ಶಶಾಂಕ್, ಬಿ.ಸ್ವಾತಿ ಬಾಳಿಗ, ಶಾರದಾ ವಿದ್ಯಾನಿಕೇತನ ಪಪೂ ಕಾಲೇಜಿನ ಅಂಕಿತಾ ಎ.ಜಿ., ಪವನ್ ಕುಮಾರ್ ಜೆ., ಎಕ್ಸ್‌ಪರ್ಟ್ ಪಪೂ ಕಾಲೇಜಿನ ಸುಶಾಂತ್ ನಾಯಕ್ವಾಡಿ, ಸ್ಫೂರ್ತಿ ಹೊಂಬಾಳಿ, ಆಳ್ವಾಸ್ ಪಪೂ ಕಾಲೇಜಿನ ವಿನಯ್ ಸಿ.ಹುಕ್ಕೇರಿ, ಬಂಟ್ವಾಳ ಎಸ್‌ವಿಎಸ್ ಪಪೂ ಕಾಲೇಜಿನ ಪ್ರೇರಣಾ(593) ಟಾಪರ್ಸ್ ಆಗಿದ್ದಾರೆ.

    ಉಡುಪಿ 13,770 ವಿದ್ಯಾರ್ಥಿಗಳು ಉತ್ತೀರ್ಣ: ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 15,210 ವಿದ್ಯಾರ್ಥಿಗಳಲ್ಲಿ 13,770 ಮಂದಿ ಉತ್ತೀರ್ಣರಾಗಿದ್ದು, ಶೇ.90.53 ಫಲಿತಾಂಶ ದಾಖಲಾಗಿದೆ.
    ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಅಭಯ ಕಾಮತ್, ಪ್ರಾಪ್ತಿ ಶೆಟ್ಟಿ, ದರ್ಶನ್ ಬಿ. ಹಾಗೂ ನಂದಳಿಕೆ ಎಸ್‌ಎಲ್‌ಜೆ ಪಿಯು ಕಾಲೇಜಿನ ಜೋಶ್ವಾ ಇಲಿಯಾಸ್ ಆಳ್ವ 597 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕುಂದಾಪುರ ವೆಂಕಟರಮಣ ಕಾಲೇಜಿನ ಅಫ್ರಿದಿ ಎಸ್. (594) ದ್ವಿತೀಯ ಸ್ಥಾನ ಪಡೆದಿದ್ದಾರೆ.
    ವಾಣಿಜ್ಯ ವಿಭಾಗದಲ್ಲಿ ಹೆಬ್ರಿ ಅಮೃತ ಭಾರತಿ ಪಿಯು ಕಾಲೇಜಿನ ಶಶಾಂಕ್ (599) ಪ್ರಥಮ, ಕಾರ್ಕಳ ಭುವನೇಂದ್ರ ಕಾಲೇಜಿನ ಪಿ. ಶರಣ್ಯ (597) ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ದಂಡತೀರ್ಥ ಪಿಯು ಕಾಲೇಜಿನ ಮಹಮ್ಮದ್ ಇಕ್ಬಾಲ್ (584) ಪ್ರಥಮ, ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಮಿಥುನ್ (582) ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts