More

    ದ.ಕ.ದಲ್ಲಿ 204 ಸೋಂಕು, 5 ಸಾವು, 70 ಮಂದಿ ಗುಣವಾಗಿ ಬಿಡುಗಡೆ, 2929 ಸಕ್ರಿಯ ಪ್ರಕರಣ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಕರೊನಾ ಪಾಸಿಟಿವ್ 204 ಹೊಸ ಪ್ರಕರಣ ದಾಖಲಾಗಿದ್ದು, ಐವರು ಮೃತಪಟ್ಟಿದ್ದಾರೆ. ಹೊಸ ಸೋಂಕಿತರಲ್ಲಿ ಪ್ರಾಥಮಿಕ ಸಂಪರ್ಕದಿಂದ 75, ಐಎಲ್‌ಐ 63, ಸಾರಿ 14 ಪ್ರಕರಣಗಳು. 52 ಪ್ರಕರಣಗಳಲ್ಲಿ ಮೂಲ ಪತ್ತೆಯಾಗಿಲ್ಲ.

    ಮಂಗಳೂರು ನಿವಾಸಿ 47 ವರ್ಷದ ಪುರುಷ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಬಂಟ್ವಾಳ ನಿವಾಸಿ 75 ವರ್ಷದ ಪುರುಷ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರು ಮಧುಮೇಹ, ಹೈಪರ್‌ಟೆನ್ಶನ್, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಮೃತಪಟ್ಟಿದ್ದಾರೆ.

    ಜುಲೈ 18ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಮಂಗಳೂರು ನಿವಾಸಿ 63 ವರ್ಷದ ಪುರುಷ, ಜುಲೈ 9ರಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ದಾವಣಗೆರೆ ನಿವಾಸಿ 88 ವರ್ಷದ ಮಹಿಳೆ, ಜುಲೈ 15ರಂದು ಆಸ್ಪತ್ರೆಯಲ್ಲಿ ದಾಖಲಾದ 75 ವರ್ಷದ ಮಂಗಳೂರಿನ ಮಹಿಳೆ ಮೃತಪಟ್ಟಿದ್ದಾರೆ. ಇವರಿಗೆ ಸೋಂಕು ದೃಢವಾಗಿದೆ.

    ಪ್ರಸ್ತಾವಿತ ಪ್ರಕರಣಗಳಲ್ಲಿ ಮರಣದ ನಿಖರ ಕಾರಣ ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ವರದಿ ಸ್ವೀಕೃತವಾಗಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 5713 ಕರೊನಾ ಸೋಂಕು ಪ್ರಕರಣ ದಾಖಲಾಗಿದ್ದು, ಚಿಕಿತ್ಸೆ ಬಳಿಕ 2613 ಮಂದಿ ಗುಣವಾಗಿ ಬಿಡುಗಡೆಯಾಗಿದ್ದಾರೆ. ಶುಕ್ರವಾರ 70 ಮಂದಿ ಗುಣವಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 2929 ಸಕ್ರಿಯ ಪ್ರಕರಣಗಳಿವೆ.

    ಕಾಸರಗೋಡಲ್ಲಿ 52 ಕೇಸ್
    ಕಾಸರಗೋಡು: ಜಿಲ್ಲೆಯಲ್ಲಿ 52 ಮಂದಿ ಒಳಗೊಂಡಂತೆ ಕೇರಳದಲ್ಲಿ ಹೊಸದಾಗಿ 1,310 ಮಂದಿಯಲ್ಲಿ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಇವರಲ್ಲಿ 48 ಮಂದಿ ವಿದೇಶದಿಂದ, 56 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 1,162 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಚಿಕಿತ್ಸೆಯಲ್ಲಿದ್ದವರಲ್ಲಿ ಕಾಸರಗೋಡು ಜಿಲ್ಲೆಯ 129 ಮಂದಿ ಒಳಗೊಂಡಂತೆ ಕೇರಳದಲ್ಲಿ 864 ಮಂದಿ ಗುಣಮುಖರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts