More

    ದಕ್ಷಿಣ ಕನ್ನಡದಲ್ಲಿ 361 ಕರೊನಾ ಪಾಸಿಟಿವ್ ಪ್ರಕರಣ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಸಾವು ಸೇರಿದಂತೆ 316 ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
    ಗುರುವಾರದ ವರದಿಯಂತೆ 182 ಮಂದಿಯಲ್ಲಿ ಸೋಂಕಿನ ಲಕ್ಷಣಗಳಿದ್ದರೆ 134 ಮಂದಿಯಲ್ಲಿ ಯಾವುದೇ ಲಕ್ಷಣಗಳಿಲ್ಲ. ಮಂಗಳೂರು ತಾಲೂಕೊಂದರಲ್ಲೇ 190 ಮಂದಿಗೆ ಪಾಸಿಟಿವ್ ಆಗಿದ್ದರೆ ಬಂಟ್ವಾಳದ 40, ಪುತ್ತೂರಿನ 21, ಸುಳ್ಯದ 16, ಇತರ ಜಿಲ್ಲೆಯ 33 ಮಂದಿಗೂ ಸೋಂಕು ಕಂಡುಬಂದಿದೆ.
    ಗುರುವಾರ ಒಟ್ಟು 208 ಮಂದಿ ಸೋಂಕು ಮುಕ್ತರಾಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 10,706ಕ್ಕೇರಿದೆ.ಒಟ್ಟು ಪಾಸಿಟಿವ್ ಸಂಖ್ಯೆ 13795 ತಲುಪಿದ್ದರೆ ಸಕ್ರಿಯ ಪ್ರಕರಣಗಳು 2705 ಇವೆ. ಒಟ್ಟು ಸಾವಿನ ಸಂಖ್ಯೆ 384ಕ್ಕೇರಿದೆ.

    ಕಾಸರಗೋಡಲ್ಲಿ 133
    ಕಾಸರಗೋಡು: ಜಿಲ್ಲೆಯ 133 ಮಂದಿಗೆ ಗುರುವಾರ ಕರೊನಾ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ 1,553 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ರಾಜ್ಯದಲ್ಲಿ 10 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 315ಕ್ಕೇರಿದೆ. ಕಾಸರಗೋಡು ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,378 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

    12 ಸಾವಿರ ಗಡಿ ದಾಟಿದ ಉಡುಪಿ
    ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 12 ಸಾವಿರ ಗಡಿ ದಾಟಿದೆ. ಗುರುವಾರ 226 ಮಂದಿಗೆ ಕರೊನಾ ಪಾಸಿಟಿವ್ ವರದಿಯಾಗಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಇಬ್ಬರು ಹಿರಿಯ ನಾಗರಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸಾವಿನ ಸಂಖ್ಯೆ 106ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 12,150ಕ್ಕೆೆ ಏರಿಕೆಯಾಗಿದೆ. 1028 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 266 ಮಂದಿಯ ವರದಿ ಬರಲು ಬಾಕಿ ಇದೆ. 2115 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts