More

    ದೈನಂದಿನ ವಹಿವಾಟಿಗೆ ಮೊಬೈಲ್ ಸಹಕಾರಿ

    ಹುಕ್ಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಉಮೇಶ ಕತ್ತಿ ಅವರು ಸೋಮವಾರ ಪೋಷಣ್ ಅಭಿಯಾನ ಯೋಜನೆಯಡಿ ಸ್ಮಾರ್ಟ್‌ಫೋನ್‌ವಿತರಿಸಿದರು.

    ನಂತರ ಮಾತನಾಡಿದ ಅವರು, ಸರ್ಕಾರದ ಪೇಪರ್‌ಲೆಸ್ ಡಾಕ್ಯುಮೆಂಟ್ ಯೋಜನೆಗೆ ಸಹಕಾರಿಯಾಗುವಂತೆ ಮೊಬೈಲ್ ಮೂಲಕ ದೈನಂದಿನ ವಹಿವಾಟು ನಮೂದಿಸಲು ಸ್ಮಾರ್ಟ್‌ಫೋನ್ ಸಹಕಾರಿಯಾಗಿದೆ. ಜತೆಗೆ ಮಕ್ಕಳ ಹಾಗೂ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗೆ ನೂತನ ಯೋಜನೆಗೆ ನೆರವಾಗಲಿದೆ. ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲೋಕಾಂಬಾ, ಮೊಬೈಲ್ ಬಳಕೆ ಕುರಿತು ಮಾಹಿತಿ ನೀಡಿದರು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಗೌಡ ಪಾಟೀಲ, ಭೂ ನ್ಯಾಯ ಮಂಡಳಿ ಸದಸ್ಯ ಶಿವನಗೌಡ ಪಾಟೀಲ, ಪುಟ್ಟು ಖಾಡೆ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಹೊಳೆಪ್ಪ ಎಚ್., ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಪರಸಣ್ಣವರ, ನಿರ್ಮಲಾ ಕುರಬೇಟ, ಕಮಲಾ ಹಿರೇಮಠ ಇತರರು ಇದ್ದರು. ಒಟ್ಟು 471 ಕಾರ್ಯಕರ್ತೆಯರು ಮತ್ತು 19 ಸೂಪರ್‌ವೈಸರ್‌ಗಳಿಗೆ ಸ್ಮಾರ್ಟ್‌ಫೋನ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts