More

    ನನ್ನ ವಿಮಾನದ ಟಿಕೆಟ್​ಗಾಗಿ ತಂದೆ ವರ್ಷದ ಸಂಬಳ ಖರ್ಚು ಮಾಡಿದ್ದರು; ಸಂಕಷ್ಟದ ದಿನ ನೆನೆದ ಗೂಗಲ್​ ಸಿಇಒ ಸುಂದರ್​ ಪಿಚಾಯಿ

    ನವದೆಹಲಿ: ಕರೊನಾದಿಂದಾಗಿ ಜಾಗತಿಕ ಅರ್ಥ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಇಂಥ ಸಂದರ್ಭದಲ್ಲಿ ಪದವಿ ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಮುಕ್ತರಾಗಿರಬೇಕು, ತಾಳ್ಮೆ ವಹಿಸಬೇಕು ಹಾಗೂ ಭರವಸೆಯುಳ್ಳವರಾಗಿರಬೇಕು ಎಂದು ಗೂಗಲ್​ ಸಿಇಒ ಸುಂದರ್​ ಪಿಚಾಯಿ ಹೇಳಿದ್ದಾರೆ.

    ಪದವಿ ತರಗತಿಗೆ ವಿಡಿಯೋ ಸಂವಾದದ ಮೂಲಕ ವಿಶೇಷ ಸಂದೇಶ ನೀಡಿದ ಪಿಚಾಯಿ, ತಾವು ಪದವಿ ಆರಂಭದಲ್ಲಿ ಅನುಭವಿಸಿದ ಸಂಕಷ್ಟದ ದಿನಗಳನ್ನು ನೆನೆದರು. ಇಡೀ ಜಗತ್ತೇ ಇಂದು ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ನಾನು ಧನಾತ್ಮಕ ಚಿಂತನೆಗಳನ್ನು ಹೊಂದಿರಬೇಕು ಎಂದು ಹೇಳಿದರು.

    ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಆಗಮಿಸಿದ ದಿನಗಳನ್ನು ಅವರು ನೆನೆದರು. ಸ್ಯಾನ್​ಫೋರ್ಡ್​ ವಿವಿಗೆ ನನ್ನನ್ನು ಅಧ್ಯಯನಕ್ಕೆ ಕಳುಹಿಸಲು ವಿಮಾನದ ಟಿಕೆಟ್​ಗಾಗಿ ತಂದೆ ಒಂದು ವರ್ಷದ ಸಂಬಳ ಖರ್ಚು ಮಾಡಿದ್ದರು. ಅದೇ ಮೊದಲ ಬಾರಿಗೆ ನಾನು ವಿಮಾನ ಪ್ರಯಾಣ ಮಾಡಿದ್ದು ಎಂದು ಹೇಳಿದ್ದಾರೆ.

    ಇದನ್ನೂ ಓದಿ; ಎರಡು ದಿನ ತಡವಾಗಿದ್ದರೆ ಸಿಮೆಂಟ್​ ಕಂಪನಿಯಿಂದಲೇ 17 ಕೋಟಿ ರೂ. ಪಡೀತಿದ್ದ ಉದ್ಯೋಗಿ….!

    ಆಗ ಅಮೆರಿಕ ಭಾರಿ ದುಬಾರಿಯಾಗಿತ್ತು. ಮನೆಗೆ ದೂರವಾಣಿ ಕರೆ ಮಾಡಬೇಕೆಂದರೆ ಒಂದು ನಿಮಿಷಕ್ಕೆ ಎರಡು ಡಾಲರ್​ ತೆರಬೇಕಾಗಿತ್ತು. ಇನ್ನು ನಾನೊಂದು ಬ್ಯಾಕ್​ಪ್ಯಾಕ್​ ಖರೀದಿಸಬೇಕೆಂದರೆ ಅದಕ್ಕೆ ತಂದೆಯ ಒಂದು ತಿಂಗಳ ಸಂಬಳ ಬೇಕಾಗಿತ್ತು ಎಂದು ಅವರು ಸ್ಮರಿಸಿದ್ದಾರೆ.

    ಅಂದಿನ ದಿನಗಳಲ್ಲಿ ತಂತ್ರಜ್ಞನದ ಅನುಭವವೇ ನಮಗಿರಲಿಲ್ಲ. ಆದರೆ ಇಂದು ಮಕ್ಕಳು ಎಲ್ಲ ರೀತಿಯ, ಎಲ್ಲ ವಿವಿಧ ಕಂಪ್ಯೂಟರ್​ಗಳನ್ನು ಬಳಸುವುದರೊಂದಿಗೆ ಬೆಳೆಯುತ್ತಿದ್ದಾರೆ. ನನಗೆ ಹತ್ತು ವರ್ಷವಾಗುವವರೆಗೆ ನಮ್ಮ ಮನೆಯಲ್ಲಿ ಟೆಲಿಫೋನ್​ ಇರಲಿಲ್ಲ. ಅಮೆರಿಕಕ್ಕೆ ಆಗಮಿಸುವವರೆಗೆ ನಿಯಮಿತವಾಗಿ ಕಂಪ್ಯೂಟರ್​ ಕೂಡ ಬಳಸುತ್ತಿರಲಿಲ್ಲ. ಕೊನೆಗೊಂದು ದಿನ ನಮ್ಮ ಮನೆಗೆ ಟಿವಿ ಬಂದಾಗ ಅದರಲ್ಲಿ ಒಂದೇ ಚಾನೆಲ್​ ಬರುತ್ತಿತ್ತು ಎಂದು ಅವರು ಅಮೆರಿಕ ಹಾಗೂ ಭಾರತದಲ್ಲಿ ಬದುಕನ್ನು ಹೋಲಿಕೆ ಮಾಡಿದರು.

    ಇದನ್ನೂ ಓದಿ; ಚೀನಾ ಕರಾವಳಿಯಲ್ಲಿ ಕಳವಳಕಾರಿ ವಿದ್ಯಮಾನ, ತೀರ ಸಮೀಪಿಸುತ್ತಿದ್ದಂತೆ ದಿಕ್ಕು ತಪ್ಪಿದ ಹಡಗುಗಳು…! 

    ಈ ಕಾರ್ಯಕ್ರಮವನ್ನು ಯೂಟ್ಯೂಬ್​ ನೇರ ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಹಾಗೂ ಪತ್ನಿ ಮಿಶೆಲ್​ ಒಬಾಮಾ, ಗಾಯಕಿರಾದ ಲೇಡಿ ಗಾಗಾ, ಬಿಯಾನ್ಸ್​ ಮೊದಲಾದವರು ಪಾಲ್ಗೊಂಡಿದ್ದರು.

    ಚೆನ್ನೈಯಲ್ಲಿ ಬೆಳೆದ ಸುಂದರ್​ ಪಿಚಾಯಿ, ಮೆಟಿರಿಯಲ್​ ಸೈನ್ಸ್​ ಇಂಜಿನಿಯರ್​ ಆಗಿದ್ದರು. 2004ರಲ್ಲಿ ಮ್ಯಾನೇಜ್​ಮೆಂಟ್​ ಎಕ್ಸಿಕ್ಯೂಟಿವ್​ ಆಗಿ ಗೂಗಲ್​ ಸೇರಿದರು. ಕಂಪನಿಯ ಉತ್ಪಾದನಾ ಮುಖ್ಯಸ್ಥ, ಕೊನೆಗೆ 2015ರಲ್ಲಿ ಸಿಇಒ ಆಗಿ ನೇಮಕಗೊಂಡರು. ಗೂಗಲ್​ ಮಾತೃ ಸಂಸ್ಥೆಯಾದ ಅಲ್ಫಾಬೆಟ್​ ಸಂಸ್ಥೆಗೂ ಮುಖ್ಯಸ್ಥರಾಗಿದ್ದಾರೆ.

    ಬೆಂಗಳೂರಿನಲ್ಲಿ ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೊಳಗಾದ ಬಾಲಕಿಗೆ ಹೊಸ ಬದುಕು ಕಟ್ಟಿಕೊಳ್ಳುವಾಸೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts