More

    VIDEO| ಮಗುವನ್ನು ಮಂಚದ ಕೆಳಗೆ ಎಳೆದುಕೊಂಡ ದೆವ್ವ: ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ!

    ದೆವ್ವಗಳು ಅಸ್ತಿತ್ವ ಬಗ್ಗೆ ಸಂಶಯ ಮೂಡಿದರೂ ಸಹ ಆಗಾಗ ಅವುಗಳ ಇರುವಿಕೆಗೆ ಪುಷ್ಟಿ ನೀಡುವಂತಹ, ಭಯಹುಟ್ಟಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಅಂಥದ್ದೆ ಮತ್ತೊಂದು ವಿಡಿಯೋ ಬೆಳಕಿಗೆ ಬಂದಿದ್ದು, ಆಟವಾಡುತ್ತಿದ್ದ ಮಗುವನ್ನು ಮಂಚದ ಕೆಳಗೆ ದೆವ್ವ ಎಳೆದುಕೊಂಡಿತು ಎನ್ನಲ್ಲಾದ ವಿಡಿಯೋವನ್ನು ಮಗುವಿನ ತಂದೆ ಸೆರೆಹಿಡಿದಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಬೆಡ್​ರೂಮ್​ನಲ್ಲಿರುವ ಮಗು ಬೆಡ್​ನ ಕೊನೆಯಲ್ಲಿ ಮಲಗಿ ತನ್ನ ಗೊಂಬೆಗಳ ಜತೆ ಆಟವಾಡುತ್ತಿರುವಂತೆ ಕಾಣುತ್ತದೆ. ರಾತ್ರಿ 11.37ರ ಸುಮಾರಿಗೆ (ಕ್ಯಾಮೆರಾದಲ್ಲಿ ಸರೆಯಾಗಿರುವ ಸಮಯ) ವಿಚಿತ್ರವೊಂದು ಸಂಭವಿಸುತ್ತದೆ. ಮಗು ಏನನ್ನೋ ಎತ್ತಿಕೊಳ್ಳಲು ಮಂಚದ ಕೆಳಗಡೆ ಇಳಿದು ಬಗ್ಗಿ ನೋಡುವಾಗ ಯಾರೋ ಮಗುವನ್ನು ಎಳೆದುಕೊಂಡಂತೆ ವಿಡಿಯೋದಲ್ಲಿ ಗೋಚರವಾಗುತ್ತದೆ.

    ಇದನ್ನೂ ಓದಿರಿ: ಮಧುಬಂಗಾರಪ್ಪ, ಜಿಟಿಡಿ, ಶಶಿಭೂಷಣ್​, ಅಸ್ನೋಟಿಕರ್​ ಜೆಡಿಎಸ್​ ಬಿಡ್ತಾರಾ? ಎಚ್​ಡಿಡಿ ಸ್ಫೋಟಕ ಹೇಳಿಕೆ

    ಈ ವಿಡಿಯೋವನ್ನು @joshdean0222 ಹೆಸರಿನ ಟಿಕ್​ಟಾಕ್​ ಖಾತೆಯಲ್ಲಿ ಅಪ್​ಲೋಡ್​ ಮಾಡಲಾಗಿದ್ದು, ನನ್ನ ಮಗಳನ್ನು ಮಂಚದ ಕೆಳಗೆ ಎಳೆದುಕೊಳ್ಳಲಾಯಿತು. ಮಗು ತೆವಳುಕೊಂಡು ಹೋಗಿರಬಹುದೆಂದು ನನ್ನ ಪತ್ನಿ ಯೋಚಿಸಿದಳು. ಆದರೆ, ಮಗಳನ್ನು ಏನೋ ಎಳೆದುಕೊಂಡಿತು ಎಂದು ಅಡಿಬರಹ ಬರೆಯಲಾಗಿದೆ. ಇನ್ನು ಮಗುವನ್ನು ಮಂಚದ ಕೆಳಗೆ ಎಳೆದುಕೊಳ್ಳುತ್ತಿದ್ದಂತೆ ಅದು ಅಳುತ್ತಾ ಮಮ್ಮಿ ಎಂದು ಕೂಗಿಕೊಳ್ಳುತ್ತದೆ. ಅಷ್ಟರಲ್ಲಿ ಮಗುವಿನ ಕಾಲು ಮಂಚದ ಕೆಳಗೆ ಕಾಣೆಯಾಗುತ್ತದೆ.

    VIDEO| ಮಗುವನ್ನು ಮಂಚದ ಕೆಳಗೆ ಎಳೆದುಕೊಂಡ ದೆವ್ವ: ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ!

    ಟಿಕ್​ಟಾಕ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದಾಗಿನಿಂದ ಈವರೆಗೂ 8 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದವರೆಲ್ಲ ಏನು ನೋಡುತ್ತಿದ್ದೇವೆ ಎಂಬುದನ್ನು ನಮ್ಮಿಂದ ನಂಬಲು ಆಗುತ್ತಿಲ್ಲ ಎಂದು ಕಮೆಂಟಿಸಿದ್ದಾರೆ.

    ಇದನ್ನೂ ಓದಿರಿ: ಕೆಎಸ್​ಆರ್​ಟಿಸಿ ಬಸ್​ ಕಳುವು ಮಾಡಿದವ ಅಂದರ್​: ಖದೀಮ ಕೊಟ್ಟ ಕಾರಣ ಕೇಳಿ ಪೊಲೀಸರೇ ತಬ್ಬಿಬ್ಬು!

    ಏಳು ಲಕ್ಷಕ್ಕೂ ಅಧಿಕ ಮಂದಿ ವಿಡಿಯೋಗೆ ಲೈಕ್​ ಮಾಡಿದ್ದು, 26 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್​ ಮಾಡಿದ್ದಾರೆ. ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ನಾಟಕೀಯ ಎಂದು ಕೆಲವರು ಜರಿದಿದ್ದಾರೆ. ಇನ್ನು ಕೆಲವು ಓ ದೇವರೇ ಮಗು ಸುರಕ್ಷಿತವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. ಹೀಗೆ ಅನೇಕರು ಕಮೆಂಟಿಸಿದ್ದಾರೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಡೈಲಿ ಮಿರರ್​)

    ನಿಮ್ಮ ಕಣ್ಣಿಗೊಂದು ಸವಾಲ್:​ ಚಿತ್ರದಲ್ಲಿರೋ ಭಾರಿ ಗಾತ್ರದ ಹೆಬ್ಬಾವು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

    ಮರ್ಸಿಡಿಸ್​ಗೆ ಸನ್ನಿ ಲಿಯೋನ್​ ಪತಿಯ ಕಾರಿನ ನಂಬರ್​ ಅಳವಡಿಸಿ ಅಲೆದಾಡುತ್ತಿದ್ದವ ಅಂದರ್​!

    ಸರ್ಕಾರದ ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಬ್ರೇಕ್?! ಇನ್ಮೇಲೆ ವಾಟ್ಸ್​ಆ್ಯಪ್​​ ಕಥೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts