More

    ಹಿರಿಯೂರು ಅಭಿವೃದ್ಧಿಗೆ ಬದ್ಧ

    ಹಿರಿಯೂರು: ತಾಲೂಕಿನ ಜನ ಮೆಚ್ಚುವಂತೆ ಅಭಿವೃದ್ಧಿ, ಸರ್ವ ಸ್ಪರ್ಶಿ ಆಡಳಿತದ ಸಂಕಲ್ಪ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

    ತಾಲೂಕಿನ ಖಂಡೇನಹಳ್ಳಿ ಗ್ರಾಮದ ಶ್ರೀ ಶನೈಶ್ಚರ ಸ್ವಾಮಿ ದೇಗುಲದ ಆವರಣದಲ್ಲಿ ಭಾನುವಾರ ಮತದಾರರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯ, ಎಲ್ಲ ಜಾತಿ, ಜನಾಂಗ, ಧರ್ಮದವರನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ ಎಂದರು.

    ರಾಜ್ಯ ಸರ್ಕಾರ ಜಾರಿಗೆ ತಂದಿರವ ಗ್ಯಾರಂಟಿ ಯೋಜನೆಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗುತ್ತಿರುವುದು ಸರ್ಕಾರ ಜನಪರ ಇದೆ ಎನ್ನುವುದಕ್ಕೆ ಉತ್ತಮ ನಿದರ್ಶನವಾಗಿದೆ.

    ಕ್ಷೇತ್ರದ ಪ್ರಜ್ಞಾವಂತ ಮತದಾರರು ನನ್ನ ಜನಪರ ಕಾಳಜಿ, ಅಭಿವೃದ್ಧಿ ಪರ ಚಿಂತನೆ ಮೆಚ್ಚಿ ಮೂರು ಬಾರಿ ಆಯ್ಕೆ ಮಾಡಿದ್ದು, ಜನರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

    ಎಲ್ಲ ಧರ್ಮ ಜಾತಿಯ ಜನರ ಆಶೀರ್ವಾದದೊಂದಿಗೆ ಶಾಸಕನಾಗಿ ಆಯ್ಕೆಯಾಗಿದ್ದು, ಸರ್ಕಾರದಲ್ಲಿ ಮಂತ್ರಿಗಿರಿ ಸ್ಥಾನ ಲಭಿಸಿದೆ. ಭ್ರಷ್ಟಾಚಾರ ರಹಿತ ಜನಪರ ಆಡಳಿತ ನೀಡಲಿದ್ದೇನೆ ಎಂದರು.

    ನೀರಾವರಿಗೆ ಆದ್ಯತೆ: ಶಿಕ್ಷಣ, ಆರೋಗ್ಯ, ವಸತಿ, ಮೂಲ ಸೌಕರ್ಯ ಅಭಿವೃದ್ಧಿ ಜತೆಗೆ ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು.

    ಭದ್ರಾ ಮೇಲ್ದಂಡೆ ಯೋಜನೆ ಮೂಲಕ ತಾಲೂಕಿಗೆ ನೀರು ಹರಿಸುವ ವಿಷಯದಲ್ಲಿ ನನ್ನ ಬದ್ಧತೆ ಏನೆಂದು ನನಗೆ ಗೊತ್ತಿದೆ. ತಾಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆ ಕನಸು ನನಸು ಮಾಡುವುದೇ ನನ್ನ ಗುರಿ ಎಂದರು.

    ಹಿರಿಯೂರು ವಿಧಾನ ಸಭಾ ಕ್ಷೇತ್ರವನ್ನು ಮಾದರಿ ತಾಲೂಕನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಮತದಾರರು ನೇರವಾಗಿ ನನ್ನನ್ನು ಭೇಟಿಯಾಗಿ ಸಮಸ್ಯೆಗಳನ್ನು ನನ್ನ ಗಮನಕ್ಕೆ ತರುವ ಮೂಲಕ ಸಮಸ್ಯೆ ಪರಿಹಾರಕ್ಕೆ ಸಹಕರಿಸಬೇಕು ಎಂದು ಹೇಳಿದರು.

    ಖಂಡೇನಹಳ್ಳಿ, ಪಾಳ್ಯ, ಬೆಂಕಿಕಾಟನಹಟ್ಟಿ, ಹೊಸಕರೆ, ಬೇತೂರು, ಕಣಜನಹಳ್ಳಿ ಇತರ ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

    ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ದಾಸರಿ, ಜಿಯಾಉಲ್ಲಾ, ಡಿ.ಚಿದಾನಂದ್, ಎಸ್.ಕೆ.ಶಿವಮೂರ್ತಿ, ಗ್ರಾಪಂ ಅಧ್ಯಕ್ಷ ರಾಘವೇಂದ್ರ,

    ಸದಸ್ಯರಾದ ಮಂಗಳಮ್ಮ, ಶಿವಮ್ಮ, ಸಾವಿತ್ರಮ್ಮ, ಕೆ.ಟಿ.ಶ್ರೀನಿವಾಸ್, ಮಾಜಿ ಅಧ್ಯಕ್ಷ ಕೆ.ಜಿ.ತಿಮ್ಮರಾಯಪ್ಪ, ಹೊಸಕೆರೆ ಹನುಮಂತರಾಯಪ್ಪ,

    ಈರಲಿಂಗೇಗೌಡ, ಆರ್.ಟಿ.ತಿಪ್ಪೇಸ್ವಾಮಿ, ಈಶ್ವರಪ್ಪ, ನರಸಿಂಹಮೂರ್ತಿ, ಈರಲಿಂಗೇಗೌಡ, ಡಿ.ಜಿ.ಗೋವಿಂದರಾಜ್, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts