ಗಲಭೆಯ ನಡುವೆ ನವೀನ್ ಅನ್ನು ಮುಗಿಸೋಕೆ ಸ್ಕೆಚ್​ ರೂಪಿಸಿದ್ರು ಡಿಜೆ ಹಳ್ಳಿ ಗಲಭೆಕೋರರು!

916379
Published on

ಬೆಂಗಳೂರು: ಡಿಜೆಹಳ್ಳಿ ಗಲಭೆಗೆ ಕಾರಣವಾಗಿದ್ದ ಫೇಸ್​ಬುಕ್​ ಕಮೆಂಟ್​ ಮಾಡಿದ್ದ ನವೀನ್ ಅನ್ನು ಮುಗಿಸೋದಕ್ಕೆ ಭಾರಿ ಸ್ಕೆಚ್​ ಸಿದ್ಧವಾಗಿತ್ತು. ಗಲಭೆಯ ನಡುವೆಯೇ ಇದಕ್ಕಾಗಿ ನವೀನ್ ಎಲ್ಲಿದ್ದಾನೆ ಎಂಬ ಹುಡುಕಾಟವನ್ನೂ ಒಂದು ತಂಡ ಮಾಡಿತ್ತು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಗಲಭೆ ಆರಂಭವಾದ ಬೆನ್ನಿಗೇ ಪೊಲೀಸರು ಅವಹೇಳನಕಾರಿ ಫೇಸ್​ಬುಕ್​ ಪೋಸ್ಟ್​ಗೆ ಕಮೆಂಟ್ ಮಾಡಿದ್ದ ನವೀನ್ ವಿರುದ್ಧ ದೂರು ದಾಖಲಾದ ಕೂಡಲೇ ಆತ​ ಎಲ್ಲಿದ್ದಾನೆ ಎಂದು ಹುಡುಕಲಾರಂಭಿಸಿದ್ದರು. ನವೀನ್​ ಅನ್ನು ಬಂಧಿಸುವುದು ಸ್ವಲ್ಪ ತಡವಾಗಿದ್ರೂ ಆತನ ಪ್ರಾಣಕ್ಕೆ ಕಂಟಕ ಇತ್ತು. ಪೊಲೀಸರು ಸ್ಥಳಕ್ಕೆ ತಲುಪಿದ ವೇಳೆ ಗಲಭೆಕೋರರೂ ಸ್ಥಳದಲ್ಲಿ ಗಲಭೆ ಎಬ್ಬಿಸಿದ್ದರು. ನವೀನ್ ಮನೆಗೆ ಕಲ್ಲು ತೂರಾಟ ನಡೆಸಿ ಅಲ್ಲೆಲ್ಲ ಬೆಂಕಿ ಹಚ್ಚೋದಕ್ಕೆ ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನವೀನ್ ಬಂಧನ ಸ್ವಲ್ಪ ತಡವಾಗಿದ್ದರೂ ಮನೆಯ ಸಹಿತ ನವೀನ್​ ಸಜೀವ ದಹನ ನಡೆದುಬಿಡುತ್ತಿತ್ತು. ಅವರ ಮನೆಯವರೂ ಪ್ರಾಣ ಕಳೆದುಕೊಳ್ಳಬೇಕಾಗಿ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net