More

    ಡಿ.ಕ್ರಾಸ್ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಕುಂಠಿತ, ವಾಹನ ಸವಾರರಿಗೆ ನಿತ್ಯವೂ ಕಿರಿಕಿರಿ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಶಾಪ

    ಪ್ರದೀಪ್ ಕುಮಾರ್ ಆರ್. ದೊಡ್ಡಬಳ್ಳಾಪುರ
    ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಡಿ.ಕ್ರಾಸ್ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಕುಂಠಿತಗೊಂಡಿದ್ದು, ವಾಹನ ಸವಾರರನ್ನು ಹೈರಾಣಾಗಿಸಿದೆ.

    ಡಿ.ಕ್ರಾಸ್‌ನಿಂದ ರೈಲ್ವೆ ನಿಲ್ದಾಣದವರೆಗೂ ನಾಲ್ಕು ಪಥದ ರಸ್ತೆ ಕಾಮಗಾರಿ ಪೂರ್ವ ಯೋಜಿತವಿಲ್ಲದೆ ಎರಡೂ ಬದಿಯಲ್ಲಿ ಒತ್ತುವರಿ ತೆರವುಗೊಳಿಸದೆ ಕಾಮಗಾರಿ ಆರಂಭಿಸಲಾಗಿದೆ.

    ರಾಜೇಂದ್ರ ವೃತ್ತದಿಂದ ಗಗನಾರ್ಯ ಮಠದವರೆಗೂ ಚರಂಡಿ ನಿರ್ಮಾಣ ಕೈಗೆತ್ತಿಕೊಂಡಿದ್ದು, ಮುಂಜಾಗ್ರತಾ ಕ್ರಮ ಇಲ್ಲದ ಕಾರಣ ಕಾಮಗಾರಿ ಅರ್ಧದಲ್ಲೇ ಸ್ಥಗಿತವಾಗಿದೆ. 1.20 ಲಕ್ಷ ರೂ.ವೆಚ್ಚದಲ್ಲಿ ಕೆಲಸ ಆರಂಭವಾಗಿ ವರ್ಷ ಕಳೆದರೂ ಪೂರ್ಣಗೊಳಿಸಿಲ್ಲ.

    ವಾಹನಗಳ ಸಂಚಾರ ದಟ್ಟಣೆ: ಗೌರಿಬಿದನೂರು, ತುಮಕೂರು, ಚಿಕ್ಕಬಳ್ಳಾಪುರ, ಬೆಳವಂಗಲ, ಸಾಸಲು, ತೂಬಗೆರೆ ಕಡೆಯಿಂದ ಡಿ.ಕ್ರಾಸ್ ರಸ್ತೆಯ ಮೂಲಕವೇ ನಗರಕ್ಕೆ ಬರುವುದರಿಂದ ವಾಹನ ಸಂಚಾರದ ಪ್ರಮಾಣ ಹೆಚ್ಚಾಗಿರುತ್ತದೆ. ನಾಲ್ಕು ಪಥದ ರಸ್ತೆ ನಿರ್ಮಿಸುವಾಗ ಕನಿಷ್ಠ ಎರಡು ಬಸ್‌ಗಳು ಸಂಚರಿಸಲು ಸಾಧ್ಯವಿಲ್ಲ. ರಸ್ತೆಯಲ್ಲಿ ಒಂದು ವಾಹನ ನಿಂತರೆ, ಇನ್ನೊಂದು ವಾಹನ ತೆರಳಲು ಸಾಧ್ಯವಾಗುವುದಿಲ್ಲ. ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಕಾಮಗಾರಿ ಪೂರ್ಣಗೊಳ್ಳದಿರುವುದೂ ಕಿರಿಕಿರಿ ಉಂಟು ಮಾಡಿದೆ.

    ಗುಂಡಿಗಳ ಜತೆಗೆ ಧೂಳಮಯ: ರಸ್ತೆಗಳು ಸಂಪೂರ್ಣ ಧೂಳಿನಿಂದ ಕೂಡಿದ್ದು, ದಿನನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ಜೀವ ಕೈಯಲ್ಲಿಡಿದುಕೊಂಡು ಓಡಾಡುವ ಸ್ಥಿತಿ ಉಂಟಾಗಿದೆ.

    2013ರಲ್ಲಿ ಸರ್ವೇ ಮಾಡಿ ಕಾಮಗಾರಿಗೆ ಅನುಮೋದನೆಯಾಗಿದೆ. ಒತ್ತುವರಿ ಪರಿಹಾರಕ್ಕೆ 2 ಕೋಟಿ ರೂ. ಅಂದಾಜು ಮಾಡಲಾಗಿದ್ದು, ಅನುದಾನದ ಕೊರತೆಯಿಂದ ತೆರವುಗೊಳಿಸಿಲ್ಲ.

    ನಗರಕ್ಕೆ ಪ್ರಮುಖ ಸಂಪರ್ಕವಾಗಿರುವ ಡಿ.ಕ್ರಾಸ್ ರಸ್ತೆಯ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಒತ್ತುವರಿ ತೆರವುಗೊಳಿಸದೆ ರಸ್ತೆ ನಿರ್ಮಿಸುತ್ತಿರುವುದು ಜನರ ಹಣ ಪೋಲು ಮಾಡುವಂತಿದೆ.
    ರಾಜಘಟ್ಟರವಿ, ದೊಡ್ಡಬಳ್ಳಾಪುರ

    ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ದೂರು ಇತ್ಯರ್ಥವಾಗುವ ತನಕ ಕಾಮಗಾರಿ ಮಾಡಲು ಸಾಧ್ಯವಿಲ್ಲ.
    ರಮೇಶ್ ಎಸ್.ಸುಣಗಾರ್, ಪೌರಾಯಕ್ತ, ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts