More

    ತೌಕ್ತೆ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಯಾಸ್​ ಎಂಟ್ರಿಗೆ ಕೌಂಟ್​ಡೌನ್​: ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ!

    ನವದೆಹಲಿ: ಗುಜರಾತ್​, ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟುಮಾಡಿದ ತೌಕ್ತೆ ಚಂಡಮಾರುತ ಬಂದಷ್ಟೇ ವೇಗವಾಗಿ ಕಣ್ಮರೆಯಾಗಿದೆ. ಇದೀಗ ತೌಕ್ತೆ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಸೈಕ್ಲೋನ್​ ಯಾಸ್​ ಪೂರ್ವ ಕರಾವಳಿ ಸಮೀಪಿಸುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಮೇ 26ರಂದು ಸೈಕ್ಲೋನ್​ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಇತ್ತೀಚಿನ ಮಾಹಿತಿ ಪ್ರಕಾರ ಇಂದು (ಶನಿವಾರ) ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದ್ದು, ಸೋಮವಾರದ ವೇಳೆಗೆ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

    ಬಂಗಾಳಕೊಲ್ಲಿಯಲ್ಲಿ ಮುಂದಿನ 72-120 ಗಂಟೆಗಳಲ್ಲಿ ವಾಯುಭಾರ ಕುಸಿತ ಸಂಭವನೀಯತೆ ಹೆಚ್ಚಿದೆ ಎಂದು ಐಎಂಡಿ ಶುಕ್ರವಾರ ರಾತ್ರಿಯೇ ಹೇಳಿದೆ. ಚಂಡಮಾರುತಕ್ಕೆ ಯಾಸ್​ ಎಂದು ಹೆಸರಿಡಲಾಗಿದ್ದು, ವಾಯುವ್ಯ ದಿಕ್ಕಿನಲ್ಲಿ ಸಂಚರಿಸಿ ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯನ್ನು ಮೇ 26ರಂದು ತಲುಪಲಿದೆ ಎಂದು ಹೇಳಲಾಗಿದೆ.

    ಯಾಸ್​ ಚಂಡಮಾರುತ ಎಚ್ಚರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ಆಂಧ್ರ ಪ್ರದೇಶ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಗಳಿಗೆ ಆರೋಗ್ಯ ಸೌಲಭ್ಯಗಳನ್ನು ಶೇಖರಿಸಿಕೊಳ್ಳಲು ಸೂಚಿಸಿದೆ. ಅಗತ್ಯ ಔಷಧಗಳು ಸೇರಿದಂತೆ ಅನೇಕ ಸೌಲಭ್ಯ ಹೊಂದಿಸಿಕೊಳ್ಳಲು ಹೇಳಿದೆ. ಯಾಸ್​ ಚಂಡಮಾರುತ ಶನಿವಾರದೊತ್ತಿಗೆ ಭೂಕುಸಿತ ಉಂಟುಮಾಡುವ ನಿರೀಕ್ಷೆ ಇದೆ.

    ಒಡಿಶಾದ ಸುಮಾರು 14 ರಿಂದ 30 ಜಿಲ್ಲೆಗಳ ಮೇಲೆ ಯಾಸ್​ ಚಂಡಮಾರುತ ತೀವ್ರ ಪರಿಣಾಮ ಉಂಟುಮಾಡಲಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಇದರ ಬೆನ್ನಲ್ಲೇ ಕರಾವಳಿ ತೀರಪ್ರದೇಶದಲ್ಲಿರುವ ಭಾರತೀಯ ನೌಕಾಪಡೆ ಮತ್ತು ಭಾರತೀಯ ಕರಾವಳಿ ಪಡೆಯನ್ನು ಸಜ್ಜಾಗಲು ಸೂಚಿಸಿದೆ.

    ಮುಂದಿನ ವಾರದವರೆಗೆ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶಗಳಿಗೆ ತೆರಳಬೇಕಿದ್ದ 22 ವಿಶೇಷ ರೈಲುಗಳನ್ನು ರದ್ದು ಮಾಡಿದೆ.

    ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಚಂಡ ಮರುತ ವಿರುದ್ಧ ಹೋರಾಡಲು ಸನ್ನದ್ಧವಾಗಿವೆ. ಯಾಸ್​ ಚಂಡಮಾರುತ ಹಲವೆಡೆ ಪ್ರವಾಹವನ್ನು ಸೃಷ್ಟಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)

    17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !

    ಉತ್ತರ ಪ್ರದೇಶ ಹಳ್ಳಿಯೊಂದರಲ್ಲಿ 22 ಮಂದಿ ಸಾವು: ಸ್ಥಳೀಯ ಚುನಾವಣೆ ಬಳಿಕ ಸಾಲು ಸಾಲು ಸಾವು!

    ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಲಾಲು ಪ್ರಸಾದ್​ ಯಾದವ್​​ಗೆ ಕ್ಲೀನ್​ ಚಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts