More

    ‘ಸೈಕಲ್ 4ಚೇಂಜ್’: ಇನ್ನು ಪ್ರತಿ ನಗರದಲ್ಲೂ ಸೈಕಲ್ ಸವಾರಿ ಮಾಡಿ!

    ಬೆಂಗಳೂರು: ರಾಜ್ಯದ ಪ್ರತಿ ನಗರದಲ್ಲೂ ಮೋಟಾರುರಹಿತ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಬಲ ತುಂಬಲು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಮುಂದಾಗಿದೆ. ಆ ಮೂಲಕ 2ನೇ ಹಂತದ ನಗರಗಳಲ್ಲೂ ಸೈಕಲ್ ಸವಾರಿಗೆ ಒತ್ತು ನೀಡಲಾಗುತ್ತಿದೆ.

    ವಾಹನದಟ್ಟಣೆ ಹೆಚ್ಚಿರುವ ಬೆಂಗಳೂರು, ಮೈಸೂರಿನಲ್ಲಿ ಸೈಕಲ್ ಪಥ ನಿರ್ವಿುಸಿ ಸೈಕಲ್ ಸವಾರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದೇ ರೀತಿ, ಹುಬ್ಬಳ್ಳಿ- ಧಾರವಾಡ ನಡುವೆ ‘ಬಸ್ ರ್ಯಾಪಿಡ್ ಟ್ರಾನ್ಸ್ ಪೋರ್ಟ್ ಸಿಸ್ಟಂ’ (ಬಿಆರ್​ಟಿಎಸ್) ವ್ಯವಸ್ಥೆ ಜಾರಿಗೊಳಿಸಲಾಗಿದೆ.
    ಇದೀಗ ಉಳಿದ ನಗರಗಳಲ್ಲೂ ಮೋಟಾರುರಹಿತ ಸೈಕಲ್ ಸವಾರಿಗೆ ಮಹತ್ವ ಪ್ರಾಪ್ತವಾಗಲಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ‘ಸೈಕಲ್ 4ಚೇಂಜ್’ ಎಂಬ ಹೊಸ ಯೋಜನೆ ಜಾರಿಗೆ ತಂದಿದೆ.

    ಇದನ್ನೂ ಓದಿ: ಕರೊನಾ ವಿರುದ್ಧ ವಾರ್ಡ್ ‘ವಾರ್’

    ನೋಡಲ್ ಅಧಿಕಾರಿ: ರಾಜ್ಯದಲ್ಲಿನ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಬೆಂಗಳೂರು, ಬೆಳಗಾವಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಮತ್ತು ಮಂಗಳೂರುಗಳಲ್ಲಿ ಸೈಕಲ್ ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಮೈಸೂರು ಮತ್ತು ಕಲಬುರಗಿಗಳಲ್ಲೂ ಈ ವ್ಯವಸ್ಥೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕೆ ಅಗತ್ಯ ತಂತ್ರಜ್ಞಾನ ಮತ್ತಿತರ ನೆರವುಗಳನ್ನು ‘ಡಲ್ಟ್’ ನೀಡಲಿದ್ದು, ಪ್ರತಿ 3 ನಗರಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿ ನೇಮಿಸಲಾಗಿದೆ.

    ಇದನ್ನೂ ಓದಿ: ‘ನಿನ್ನೇ ಮದುವೆ ಆಗ್ತೇನೆ ಚಿನ್ನಾ ಅದಕ್ಕೂ ಮೊದ್ಲು ಮನೆ ಬೇಡ್ವಾ.. ಸ್ವಲ್ಪ ಹಣ ಅಕೌಂಟ್​ಗೆ ಹಾಕು.!’

    ಟೈರ್-2 ನಗರದಲ್ಲೂ ಜಾರಿ: ಸೈಕಲ್ ಬಳಕೆ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ‘ಸೈಕಲ್ 4 ಚೇಂಜ್’ ಸ್ಪರ್ಧೆ ಏರ್ಪಡಿಸಿದೆ. ಅದರಂತೆ, ಯಾವುದೇ ನಗರದ ಆಡಳಿತವು ಸೈಕಲ್ ಸವಾರಿಗೆ ಬೇಕಾಗುವ ವ್ಯವಸ್ಥೆ ಜಾರಿಗೊಳಿಸುವ ಕುರಿತಂತೆ ಅರ್ಜಿ ಸಲ್ಲಿಸಬೇಕಿದೆ. ಅದನ್ನಾಧರಿಸಿ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಮಿಷನ್ ಮೂಲಕ ಆ ನಗರದ ಆಡಳಿತಕ್ಕೆ ಅನುದಾನ ನೀಡಲಾಗುತ್ತದೆ. ಜತೆಗೆ ಸೈಕಲ್ ಸವಾರಿಗೆ ಬೇಕಾಗುವ ವ್ಯವಸ್ಥೆಯನ್ನು ‘ಡಲ್ಟ್’ ಮಾಡಿಕೊಡಲಿದೆ.

    VIDEO: ಅಪಾಯದಲ್ಲಿದೆ ಮಧ್ಯ ಚೀನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts