More

    1260 ರೂಪಾಯಿಗೋಸ್ಕರ 44000 ರೂಪಾಯಿ ಕಳೆದುಕೊಂಡ!

    ಬೆಂಗಳೂರು: ವಿದ್ಯುತ್ ಬಿಲ್ ಮರುಪಾವತಿಗಾಗಿ ಹೆಲ್ಪ್ ಲೈನ್‌ಗೆ ಕರೆ ಮಾಡಿದ ಗ್ರಾಹಕನಿಗೆ ಸೈಬರ್ ವಂಚಕರು 44 ಸಾವಿರ ರೂ. ವಂಚನೆ ಮಾಡಿದ್ದಾರೆ.

    ಹಲಸೂರಿನ ನಂದಲಾಲ್ ಅಗರವಾಲ್ ವಂಚನೆಗೆ ಒಳಗಾದವರು. ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ನಂದಲಾಲ್, ಜೂನ್ 21ರಂದು ಗೂಗಲ್ ಪೇ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದ್ದರು. 1260 ರೂ. ಪಾವತಿ ಮಾಡುವ ಬದಲು ಎರಡು ಬಾರಿ ಕಟ್ಟಿದ್ದರು. ಅದಕ್ಕಾಗಿ ಹಣವನ್ನು ಹಿಂಪಡೆಯುವ ಸಲುವಾಗಿ ಗೂಗಲ್ ಕಸ್ಟಮರ್ ಕೇರ್ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ.

    ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!

    ಅದರಲ್ಲಿ ಸಿಕ್ಕ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ, ಹಣ ಮರು ಪಾವತಿ ಮಾಡುವ ವಿಭಾಗಕ್ಕೆ ನಿಮ್ಮ ದೂರನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ. ಕೆಲವೇ ನಿಮಿಷಕ್ಕೆ ಮತ್ತೊಬ್ಬ ವ್ಯಕ್ತಿ ನಂದಲಾಲ್‌ಗೆ ಕರೆ ಮಾಡಿ ನೀವು ಹೆಚ್ಚುವರಿಯಾಗಿ ಪಾವತಿ ಮಾಡಿರುವ ಬೆಸ್ಕಾಂ ಬಿಲ್ ಮೊತ್ತವನ್ನು ಹಿಂತಿರುಗಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ನಂದಲಾಲ್, ತನ್ನ ಬ್ಯಾಂಕ್ ಖಾತೆಯ ವಿವರನ್ನು ವಂಚಕನಿಗೆ ಹೇಳಿದ್ದಾರೆ.

    ಅದಾಗಿ ಕೆಲವೇ ಕ್ಷಣಗಳಲ್ಲಿ ಸೈಬರ್ ಕಳ್ಳರು ನಂದಲಾಲ್‌ರ ಬ್ಯಾಂಕ್ ಖಾತೆಯಿಂದ 44,912 ರೂ. ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ವಾಪಸ್ ನಂದಲಾಲ್ ಕರೆ ಮಾಡಿದಾಗ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ಪಶ್ಚಿಮ ವಿಭಾಗ ಸಿಇಎನ್ ಠಾಣೆಗೆ ಬಂದು ದೂರು ನೀಡಿದ್ದಾರೆ.

    ಕೋವಿಡ್​ 19ಗೆ ಆಯುರ್ವೇದ ಚಿಕಿತ್ಸೆ: 29ಕ್ಕೆ ಟಾಸ್ಕ್​ ಫೋರ್ಸ್​ ಸಭೆಯಲ್ಲಿ ನಡೆಯಲಿದೆ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts