More

    ಸೈಬರ್​ ಖದೀಮರ ಕಳ್ಳಾಟ : ಔಷಧ, ಆಕ್ಸಿಜನ್​ ಪೂರೈಕೆ ಸೋಗಲ್ಲಿ ವಂಚನೆ

    ಬೆಂಗಳೂರು : ಕರೊನಾ ಸೋಂಕು ಮತ್ತು ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಜನರು ಒಂದಿಲ್ಲೊಂದು ರೀತಿಯಲ್ಲಿ ಆನ್​ಲೈನ್​ ವ್ಯವಹಾರಕ್ಕೆ ಮೊರೆ ಹೋಗಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್​ ಖದೀಮರು ಅಮಾಯಕರಿಗೆ ಬಲೆ ಬೀಸಿ ಸಂಕಷ್ಟದಲ್ಲಿಯೂ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ.

    ವಿಲ್ಸನ್​ ಗಾರ್ಡನ್​ ನಿವಾಸಿ ಆನ್​ಲೈನ್​ನಲ್ಲಿ ಔಷಧ ಆರ್ಡರ್​ ಮಾಡಿದ್ದರು. ಔಷಧ ಬರುವುದು ತಡವಾದ ಕಾರಣಕ್ಕೆ ಕಂಪನಿಯ ವಾಟ್ಸ್​ಆ್ಯಪ್​ ನಂಬರ್​ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ಮೆಡಿಸಿನ್​ ಆಸ್ಪತ್ರೆಗೆ ಪಾರ್ಸೆಲ್​ ಕಳುಹಿಸುತ್ತೇವೆ. ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ಹಂತ ಹಂತವಾಗಿ 85 ಸಾವಿರ ರೂ.ಗಳನ್ನು ತನ್ನ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾನೆ. ಔಷಧ ಮಾತ್ರ ಗ್ರಾಹಕನ ಕೈ ಸೇರಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವ ವಿಚಾರ ಗೊತ್ತಾಗಿ ಕೇಂದ್ರ ವಿಭಾಗ ಸಿಇಎನ್​ ಠಾಣೆಗೆ ದೂರು ನೀಡಿದ್ದಾರೆ.

    ಇದನ್ನೂ ಓದಿ: ವೇಶ್ಯೆಯ ಬರ್ಬರ ಕೊಲೆ : ಪರಾರಿಯಾಗುತ್ತಿದ್ದ ಆರೋಪಿ ಪೊಲೀಸ್​ ವಶಕ್ಕೆ

    ಮತ್ತೊಂದು ಪ್ರಕರಣದಲ್ಲಿ ವಾಟ್ಸ್​ಆ್ಯಪ್​ನಲ್ಲಿ ಬಂದ ಸಂದೇಶದಲ್ಲಿ ಅಮ್ಲಜನಕ ಸಿಲಿಂಡರ್​ಗೆ ಸಂಪರ್ಕಿಸಿ ಎಂದು ಉಲ್ಲೇಖಿಸಿದ್ದ ಮೊಬೈಲ್​ ನಂಬರ್​ಗೆ ಕರೆ ಮಾಡಿದ ಮಹಿಳೆಯಿಂದ 47 ಸಾವಿರ ರೂ. ಪಡೆದ ಖದೀಮರು ನಾಪತ್ತೆಯಾಗಿದ್ದಾರೆ. ವೈಟ್​ಫೀಲ್ಡ್​ ಆರ್​ಬಿಡಿ ರಸ್ತೆಯ ನೀಲು ಎಂಬುವರು ವಂಚನೆಗೆ ಒಳಗಾದವರು.

    ಮೇ 6 ರಂದು ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಕ್ಸಿಜನ್​ ಸಿಲಿಂಡರ್​ ಅಗತ್ಯವಿದ್ದ ಕಾರಣಕ್ಕೆ ವಾಟ್ಸ್​ಆ್ಯಪ್​ಗೆ ಬಂದಿದ್ದ ಸಂದೇಶದಲ್ಲಿನ ಮೊಬೈಲ್​ ನಂಬರ್​ಗೆ ನೀಲು ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ‘ಲೊಕೇಷನ್​ ಕಳುಹಿಸಿ, ಮನೆಗೆ ಸಿಲಿಂಡರ್​ ಡೆಲಿವರಿ ಕೊಡುತ್ತೇವೆ’ ಎಂದು ನಂಬಿಸಿ 47 ಸಾವಿರ ರೂ. ಅನ್ನು ಗೂಗಲ್​ ಪೇಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಹಣ ಕೊಟ್ಟು ಎಷ್ಟು ಹೊತ್ತಾದರೂ ಸಿಲಿಂಡರ್​ ಬಾರದೆ ಇದ್ದಾಗ ಅನುಮಾನ ಬಂದು ಮಹಿಳೆ ಮತ್ತೆ ಕರೆ ಮಾಡಿದಾಗ ಮೊಬೈಲ್​ ಸಂಪರ್ಕ ಸಿಕ್ಕಿಲ್ಲ. ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ವೈಟ್​ಫೀಲ್ಡ್​ ವಿಭಾಗ ಸಿಇಎನ್​ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಅಸ್ಸಾಂನ ಹೊಸ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಸರ್ಮ ಆಯ್ಕೆ

    ಆ್ಯಂಟಿ ಕೋವಿಡ್​ ಡ್ರಗ್​ ರೂಪಿಸಿದ ಡಿಆರ್​ಡಿಒ ! ತುರ್ತು ಬಳಕೆಗೆ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts