More

    ಕೋವಿಡ್​-19 ಪಿಡುಗಿನ ವೇಳೆ ಸೈಬರ್​ಕ್ರೈಂ ಹೆಚ್ಚಳ; ಯುಎನ್​ ಬಿಡುಗಡೆ ಮಾಡಿದೆ ಎದೆನಡುಗಿಸುವ ಅಂಕಿಅಂಶ

    ವಿಶ್ವಸಂಸ್ಥೆ: ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ಇಡೀ ಜಗತ್ತು ಸ್ತಬ್ಧವಾಗಿತ್ತು. ಆದರೆ ಒಂದು ವರ್ಗದವರು ಮಾತ್ರ ತುಂಬಾ ಬಿಜಿಯಾಗಿದ್ದರು. ಅವರೇ ಸೈಬರ್​ ಕಳ್ಳರು. ಆಸ್ಪತ್ರೆ ಮತ್ತು ಆರೋಗ್ಯ ಸೇವೆ ಒದಗಿಸುವ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಇವರು ದಾಳಿ ಮಾಡಿ ಕೋಟ್ಯಂತರ ರೂಪಾಯಿ ಎಗರಿಸುತ್ತಿದ್ದರೆ, ಹಣ ಕಳೆದುಕೊಂಡವರು ಅಸಹಾಯಕರಾಗಿ ನಿಲ್ಲುವಂತಾಗಿತ್ತು.

    ವಿಶ್ವದಾದ್ಯಂತ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ನಡೆದಿರುವ ಸೈಬರ್​ ಅಪರಾಧಗಳ ಅಂಕಿಅಂಶ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ, ಕೋವಿಡ್​-19 ಪಿಡುಗಿನ ಅವಧಿಯಲ್ಲಿ ಸೈಬರ್​ ವಂಚನೆಗಳು ಶೇ.350 ಹೆಚ್ಚಳವಾಗಿದ್ದವು ಎಂದು ಹೇಳಿದೆ.

    ಇದನ್ನೂ ಒಳಗೊಂಡಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮಾಹಿತಿ ನೀಡಿರುವ ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ವಿಭಾಗದ ಮುಖ್ಯಸ್ಥ ವ್ಲಾದಿಮಿರ್​ ವೊರೊನ್ಕೋವ್​, ಇತ್ತೀಚಿನ ತಿಂಗಳಲ್ಲಿ ಪಿಶಿಂಗ್​ ಸೈಟ್​ಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇದು ಸೈಬರ್​ ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ವಿಶ್ವಸಂಸ್ಥೆಯ ಮೊದಲ ವರ್ಚುಯಲ್​ ಭಯೋತ್ಪಾದನಾ ನಿಗ್ರಹ ಸಪ್ತಾಹದಲ್ಲಿ ಮಾತನಾಡಿದ ಎಲ್ಲ ಭಾಷಣಕಾರರು ಈ ಅಂಶವನ್ನು ಒತ್ತಿ ಹೇಳಿದ್ದಾಗಿ ತಿಳಿಸಿದರು.

    ಇದನ್ನೂ ಓದಿ: ಏರ್​ ಇಂಡಿಯಾ ವಿಮಾನ ಅಪಘಾತ: ಪ್ರಯಾಣಿಕರಿಬ್ಬರಲ್ಲಿ ಕರೊನಾ ದೃಢ, ಸಿಐಎಸ್​ಎಫ್ ಸಿಬ್ಬಂದಿ ಕ್ವಾರಂಟೈನ್​

    ಕೋವಿಡ್​ ಪಿಡುಗಿನಿಂದಾಗಿ ಸೈಬರ್​ ಅಪರಾಧಗಳು ಹೆಚ್ಚಾಗಿವೆ. ಇದು ಅಲ್ಲದೆ, ವಿಶೇಷವಾಗಿ ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯಿಂದ ಉಂಟಾಗುತ್ತಿರುವ ಪರಿಣಾಮಗಳು ಮತ್ತು ಉದ್ಭವಿಸಿರುವ ಸಮಸ್ಯೆಗಳ ಸಂಪೂರ್ಣ ಅರಿವು ವಿಶ್ವಸಂಸ್ಥೆ ಮತ್ತು ಜಾಗತಿಕ ತಜ್ಞರಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ವಿಶ್ವಾದ್ಯಂತ ಭಯ, ದ್ವೇಷ ಮತ್ತು ವೈಷಮ್ಯಗಳ ಮನೋಭಾವ ಬಿತ್ತುವ ಜತೆಗೆ ಮತೀಯವಾಗಿ ರೊಚ್ಚಿಗೇಳಿಸುವ ಮತ್ತು ಹೊಸ ಉಗ್ರರ ನೇಮಕಾತಿಗಾಗಿ ಸದ್ಯ ಕೋವಿಡ್​-19ರಿಂದ ಉಂಟಾಗಿರುವ ಅವ್ಯವಸ್ಥೆಗಳು ಮತ್ತು ಆರ್ಥಿಕ ಮುಗ್ಗಟ್ಟುಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಪಿಡುಗಿನ ಅವಧಿಯಲ್ಲಿ ಹೆಚ್ಚಳವಾಗಿರುವ ಇಂಟರ್​ನೆಟ್​ ಬಳಕೆ ಮತ್ತು ಸೈಬರ್​ ಅಪರಾಧಗಳು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡಿವೆ ಎಂದು ಹೇಳಿದ್ದಾರೆ.

    ಒಂದು ವಾರ ನಡೆದ ಈ ಸಭೆಯಲ್ಲಿ 134 ರಾಷ್ಟ್ರಗಳು, 88 ನಾಗರಿಕ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು, 47 ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿ ಸಂಸ್ಥೆಗಳು ಹಾಗೂ ವಿಶ್ವಸಂಸ್ಥೆಯ 40 ವಿಭಾಗಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಅರೆಕ್ಷಣದಲ್ಲಿ ನಡೆದ ದುರಂತ ನರಕವನ್ನೇ ಸೃಷ್ಟಿಸಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts