More

    ಗ್ರಾಹಕ ದೂರುಗಳಿಗೆ 90 ದಿನದಲ್ಲಿ ಪರಿಹಾರ

    ಚಿತ್ರದುರ್ಗ: ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 90 ದಿನದೊಳಗೆ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ನೊಂದ ಗ್ರಾಹಕರಿಗೆ ಪರಿಹಾರ ನೀಡಲಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯ ಜಿ.ಶ್ರೀಪತಿ ಹೇಳಿದರು.

    ಜಿಲ್ಲಾಡಳಿತ,ಜಿಪಂ,ಆಹಾರ ಇಲಾಖೆ,ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ,ಕಾನೂನು ಮಾಪನಾ ಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ತರಾಸು ರಂಗಮಂದಿರದ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಸೇವಾ ನ್ಯೂನತೆಗಳಿದ್ದಾಗ ಗ್ರಾಹಕರು ಆಯೋಗವನ್ನು ಸಂಪರ್ಕಿಸಬಹುದು. ಈಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಖರೀದಿ ಹೆಚ್ಚಾಗುತ್ತಿದೆ. ವ್ಯವಹಾರದಲ್ಲಿ ಮೋಸ ಅಥವಾ ನ್ಯೂನತೆ ಎದುರಾದಲ್ಲಿ,ಗ್ರಾಹಕರು ಬಿಲ್‌ನೊಂದಿಗೆ ಆಯೋಗದ ಮುಂದೆ ಹಾಜರುಪಡಿಸಬೇಕಾಗುತ್ತದೆ. 5 ಲಕ್ಷ ರೂ.ಮೊತ್ತದ ವಹಿವಾಟಿನವರೆಗೆ ಶುಲ್ಕವಿಲ್ಲ. ನಂತರದ ವಹಿವಾಟಿನ ಮೊತ್ತಕ್ಕೆ ನಿಗದಿತ ಶುಲ್ಕ ಪಾವತಿಸಬೇಕು. ಆಯೋಗದ ಆದೇಶದ ಮೇಲೆ ರಾಜ್ಯಹಾಗೂ ರಾಷ್ಟ್ರೀಯ ಆಯೋಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದರು.

    ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂಧನ್ ಮಾತನಾಡಿ,ಹುಟ್ಟಿದಾಗಿನಿಂದ ಹಿಡಿದು ಸಾಯುವ ಕ್ಷಣದವರೆಗೂ ನಾವು ಗ್ರಾಹಕ ರಾಗಿರುತ್ತೇವೆ. ಕೊಟ್ಟ ಹಣಕ್ಕೆ ಸರಿಯಾದ ರೀತಿಯಲ್ಲಿ ಸೇವೆ,ವಸ್ತು ದೊರೆತಿದೆಯೇ ಎಂಬುದನ್ನು ಅರಿಯಬೇಕು. ವ್ಯಾಪಾರದಲ್ಲಿ ನಡೆಯುವ ಮೋಸ,ಅವ್ಯವಹಾರಗಳ ವಿರುದ್ಧ ರಕ್ಷಣೆ ಕೊಡಲು ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದೆ. ಪ್ರತಿ ವರ್ಷ 20 ಶಾಲೆಗಳಲ್ಲಿ ಗ್ರಾಹಕರ ಕ್ಲಬ್‌ಗಳನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಗ್ರಾಹಕರ ಕೈಪಿಡಿ ಪುಸ್ತಕ ಬಿಡುಗಡೆ ಮಾಡಲಾಯಿತು.

    ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಕಾನೂನು ಮಾಪನಾಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ.ಗುರುಪ್ರಸಾದ್, ಆಹಾರ ಸುರಕ್ಷತಾಧಿಕಾರಿ ತಿರುಮಲೇಶ್,ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್,ಆಹಾರ ಶಿರಸ್ತೇದಾರರಾದ ಸುರೇಶ್,ಲಿಂಗರಾಜು, ರಮೇಶ್,ವೀರಣ್ಣ,ತಿಪ್ಪೇಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts