More

    ಬೆಂಗಳೂರಿನಲ್ಲಿ 9ನೇ ಆವೃತ್ತಿಯ ವ್ರೂಮ್ ಡ್ರ್ಯಾಗ್ ಮೀಟ್: ಮೈನವಿರೇಳಿಸುವ ಸಾಹಸ ಪ್ರದರ್ಶನ

    ಬೆಂಗಳೂರು : ಭಾರತೀಯ ಮೋಟಾರ್ ಸ್ಪೋರ್ಟ್ಸ್ ಉದ್ಯಮದಲ್ಲಿ ಪ್ರಖ್ಯಾತಿಗಳಿಸಿರುವ ವ್ರೂಮ್ ಮೋಟಾರ್ ಸ್ಪೋರ್ಟ್ಸ್, 9ನೇ ಆವೃತ್ತಿಯ ಡ್ರ್ಯಾಗ್ ಮೀಟ್ ಘೋಷಿಸಿದೆ. ಹೊಸೂರಿನ ಅತ್ಯಾಧುನಿಕ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್‌ನಲ್ಲಿ ನವೆಂಬರ್ 24ರಿಂದ 26ರವರೆಗೆ ನಡೆಯಲಿದೆ.
    ವ್ರೂಮ್ ಮೋಟಾರ್ ಸ್ಪೋರ್ಟ್ಸ್ಸ್ ಸಂಸ್ಥಾಪಕ ತಾರಿಕ್ ಮೊಹ್ಸಿನ್ ಮಾತನಾಡಿ, ಡ್ರ್ಯಾಗ್ ಮೀಟ್ ಮೋಟಾರ್ ಸ್ಪೋರ್ಟ್ಸ್ ಜನರಿಗೆ ಮನರಂಜನೆ ನೀಡಲಿದೆ. ರೇಸರ್‌ಗಳು, ಸೂಪರ್ ಬೈಕ್‌ಗಳು, ಸೂಪರ್ ಕಾರ್‌ಗಳ ಪ್ರದರ್ಶನ ಮತ್ತು ರೋಮಾಂಚನಕಾರಿ ಡ್ರಿಫ್ಟಿಂಗ್ ಸ್ಟಂಟ್‌ಗಳ ಭರವಸೆಯೊಂದಿಗೆ 9ನೇ ಆವೃತ್ತಿಯನ್ನು ಪ್ರಸ್ತುತಪಡಿಸಲು ಉತ್ಸುಕರಾಗಿದ್ದೇವೆ.
    9ನೇ ಆವೃತ್ತಿಯು ವರ್ಷಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸುರಕ್ಷಿತ ಮೋಟಾರ್ ಸ್ಪೋರ್ಟ್ಸ್ ಸಂಸ್ಕೃತಿಯ ಬದ್ಧತೆಯ ಫಲಿತಾಂಶವಾಗಿದೆ. ನಿರಂತರ ಪ್ರಯತ್ನಗಳ ಮೂಲಕ ಈ ಸಂಭ್ರಮವನ್ನು ಬರಮಾಡಿಕೊಳ್ಳುತ್ತಿದ್ದೇವೆ. ರೇಸರ್‌ಗಳು ಮತ್ತು ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳಿಗೆ ಡ್ರ್ಯಾಗ್ ರೇಸಿಂಗ್ ಸುರಕ್ಷಿತ ವೇದಿಕೆ ಕಲ್ಪಿಸಿದೆ. ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ಸ್ ಕ್ಲಬ್ ಆಫ್ ಇಂಡಿಯಾ ಬೆಂಬಲದೊಂದಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮೋಟಾರ್ ಸ್ಪೋರ್ಟ್ಸ್ಸ್‌ ಚಮತ್ಕಾರ ಹಾಗೂ ರೋಮಾಂಚನವನ್ನು ನೀಡಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

    ಡ್ರ್ಯಾಗ್ ಮೀಟ್ 9ನೇ ಆವೃತ್ತಿಯಲ್ಲಿ ಮಾರ್ಪಡಿಸಿದ ಭಾರತೀಯ ಕಾರುಗಳು ಮತ್ತು ಭಾರತೀಯ ಬೈಕ್‌ಗಳಿಂದ ಹಿಡಿದು ಜಾವ್ ಡ್ರಾಪಿಂಗ್ ಸೂಪರ್ ಕಾರ್‌ಗಳು ಮತ್ತು ಸೂಪರ್ ಬೈಕ್ ಸೇರಿ ವೈವಿಧ್ಯಮಯ ವಾಹನಗಳು ಭಾಗವಹಿಸುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts