More

    IPL 2024: ಸನ್​ರೈಸರ್ಸ್​ ಹೈದರಾಬಾದ್​ನಲ್ಲೂ ಮುಂದುವರಿಯುವುದೇ ಕಮ್ಮಿನ್ಸ್ ಪ್ರಶಸ್ತಿ ಬೇಟೆ?​

    ಹೈದರಾಬಾದ್​: ಕಳೆದ ಆವೃತ್ತಿಯ ನಂತರದಲ್ಲಿ ಹೆಚ್ಚಿನ ಬದಲಾವಣೆ ಕಂಡಿರುವ ತಂಡಗಳಲ್ಲಿ ಸನ್​ರೈಸರ್ಸ್​ ಪ್ರಮುಖವಾದುದು. ಕಳೆದ ವರ್ಷ ಆಸೀಸ್​ಗೆ ಏಕದಿನ ವಿಶ್ವಕಪ್​, ಐಸಿಸಿ ಟೆಸ್ಟ್​ ವಿಶ್ವ ಚಾಂಪಿಯನ್​ಷಿಪ್​, ಆಶಸ್​ ಸಹಿತ ಬಹುತೇಕ ಪ್ರಶಸ್ತಿ ಗೆದ್ದುಕೊಟ್ಟು, ಬೌಲಿಂಗ್​-ಬ್ಯಾಟಿಂಗ್​ನಲ್ಲೂ ಮಿಂಚಿದ ವೇಗಿ ಪ್ಯಾಟ್​ ಕಮ್ಮಿನ್ಸ್​ಗೆ ಈ ಬಾರಿ ದುಬಾರಿ ಸಂಭಾವನೆಯೊಂದಿಗೆ ನಾಯಕತ್ವವನ್ನೂ ನೀಡಲಾಗಿದೆ.

    ಏಕದಿನ ವಿಶ್ವಕಪ್ ಫೈನಲ್​ ಹೀರೋ ಟ್ರಾವಿಸ್​ ಹೆಡ್​, ವಾನಿಂದು ಹಸರಂಗ ತಂಡದ ಇನ್ನಿಬ್ಬರು ಪ್ರಮುಖ ಹೊಸ ಸೇರ್ಪಡೆ. ನೂತನ ಮುಖ್ಯ ಕೋಚ್​ ಆಗಿ ಡೇನಿಯಲ್​ ವೆಟ್ಟೋರಿ ಇದ್ದಾರೆ. ಸದ್ಯಕ್ಕೆ ತಂಡದಲ್ಲಿ ಯಾವುದೇ ಫಿಟ್ನೆಸ್​ ಕಳವಳವೂ ಇಲ್ಲ. ಆದರೆ ವಿದೇಶಿ ಸ್ಟಾರ್​ಗಳೇ ಹೆಚ್ಚಿರುವುದರಿಂದ, ಇವರಲ್ಲಿ ನಾಲ್ವರನ್ನು ಮಾತ್ರ ಒಳಗೊಂಡ 11ರ ಬಳಗದ ಸಮತೋಲನ ಸವಾಲೆನಿಸಿದೆ.

    ತಂಡ: ಪ್ಯಾಟ್​ ಕಮ್ಮಿನ್ಸ್​(ನಾಯಕ), ಏಡನ್​ ಮಾರ್ಕ್ರಮ್​, ಅಭಿಷೇಕ್​ ಶರ್ಮ, ಮಯಾಂಕ್​ ಅಗರ್ವಾಲ್​, ರಾಹುಲ್​ ತ್ರಿಪಾಠಿ, ಅಬ್ದುಲ್​ ಸಮದ್​, ಅನ್ಮೋಲ್​ಪ್ರೀತ್​ ಸಿಂಗ್​, ಗ್ಲೆನ್​ ಫಿಲಿಪ್ಸ್​, ಟ್ರಾವಿಸ್​ ಹೆಡ್​, ಹೆನ್ರಿಕ್​ ಕ್ಲಾಸೆನ್​, ಉಪೇಂದ್ರ ಯಾದವ್​, ನಿತೀಶ್​ ಕುಮಾರ್​ ರೆಡ್ಡಿ, ವಾಷಿಂಗ್ಟನ್​ ಸುಂದರ್​, ಸನ್ವೀರ್​ ಸಿಂಗ್​, ಮಯಾಂಕ್​ ಮಾರ್ಕಂಡೆ, ಭುವನೇಶ್ವರ್​ ಕುಮಾರ್​, ಮಾಕೋರ್ ಜಾನ್ಸೆನ್​, ಉಮ್ರಾನ್​ ಮಲಿಕ್​, ಟಿ. ನಟರಾಜನ್​, ಜಲಕ್​ ಫಾರೂಖಿ, ವಾನಿಂದು ಹಸರಂಗ, ಜೈದೇವ್​ ಉನಾದ್ಕತ್​, ಶಾಬಾಜ್​ ಅಹ್ಮದ್​, ಉಪೇಂದ್ರ ಸಿಂಗ್​ ಯಾದವ್​, ಆಕಾಶ್​ ಸಿಂಗ್​, ಜಾತಾವೇದ್​ ಸುಬ್ರಹ್ಮಣ್ಯನ್​.

    2ನೇ ಹಂತದ ವೇಳಾಪಟ್ಟಿಗೆ ಕಠಿಣ ಸವಾಲು; ಚುನಾವಣೆಯ ಜತೆಗೆ ಈದ್​-ರಾಮನವಮಿ ಭದ್ರತಾ ತಾಪತ್ರಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts