More

    ಸಾಂಸ್ಕೃತಿಕ ಸಮೃದ್ಧಿಯಿಂದ ಭಾಷೆ ಜೀವಂತ

    ಮಾನ್ವಿ: ಜಗತ್ತಿನಾದ್ಯಂತ ನೆಲೆಸಿರುವ ಕನ್ನಡಿಗರು ಕನ್ನಡದ ಕಂಪನ್ನು ಸಾಂಸ್ಕೃತಿಕ ಪ್ರತಿಭೆ ಮೂಲಕ ಸಾರುತ್ತಿದ್ದು, ಈ ಮೂಲಕ ಕನ್ನಡ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಭಾಷೆಯಾಗಿದೆ ಎಂದು ನೇತಾಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ ತಿಳಿಸಿದರು.

    ಇದನ್ನೂ ಓದಿ: ಕಲಬುರಗಿಯನ್ನು ಸಾಂಸ್ಕೃತಿಕ ಜಿಲ್ಲೆಯಾಗಿಸಲು ಶ್ರಮ

    ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಭಾಷೆ ಸಾಂಸ್ಕೃತಿಕವಾಗಿ ಸಮೃದ್ಧವಾದಾಗ ಶಾಶ್ವತವಾಗಿ ಉಳಿಯಲಿದೆ.

    ನಾಡಿನ ಜನರ ಸಾಂಸ್ಕೃತಿಕ ಗಟ್ಟಿತನವೇ ಭಾಷೆಯ ಗಟ್ಟಿತನಕ್ಕೂ ಕಾರಣವಾಗಿದೆ. ಪ್ರಪಂಚದಾದ್ಯಂತ ಇರುವ ಕನ್ನಡ ಸಂಘಗಳು ಭಾಷೆ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿವೆ ಎಂದರು.

    ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ, ಏಕಪಾತ್ರಾಭಿನಯ, ಹಾಸ್ಯ ಪ್ರಸಂಗ, ವಚನ ಗಾಯನ ಪ್ರಸ್ತುತಪಡಿಸಿದರು. ಸಂಸ್ಥೆ ಅಧ್ಯಕ್ಷ ಕೆ.ಈ.ನರಸಿಂಹ, ಉಪನ್ಯಾಸಕ ಚಂದ್ರು ಜಾಧವ್, ಶಿಕ್ಷಕರಾದ ಯಾನಿಗ್ರೇಸಿ, ಬಸವರಾಜ್, ಕೆ.ರವಿವರ್ಮಾ, ಅನೀಸ್ ಫಾತಿಮಾ, ಬಸವರಾಜ್, ರಹೀಂ ಪಾಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts