More

    ಗುರುಬಸವ ಶ್ರೀಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆ

    ಶಿವಮೊಗ್ಗ: ಜಗದ್ಗುರು ಗುರುಬಸವ ಮಹಾಶಿವಯೋಗಿಗಳ 112ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಜ.25 ಮತ್ತು 26ರಂದು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಶೀಲಾ ಸುರೇಶ್ ತಿಳಿಸಿದರು.

    ಆನಂದಪುರ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೈವಿಧ್ಯ ಮತ್ತು ಅರ್ಥಪೂರ್ಣ ಕಾರ್ಯಕ್ರಮ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    25ರ ಬೆಳಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿದ್ದು ಅಂದು ಸಂಜೆ 4ಕ್ಕೆ ಮಹಿಳೆಯರಿಗೆ ವೇಷಭೂಷಣ ಸ್ಪರ್ಧೆ, 111 ಮಹಿಳೆಯರಿಂದ ವಚನ ಗಾಯನ, ಸಂಜೆ 5ಕ್ಕೆ ಶರಣ ಸಾಹಿತ್ಯ ಸಮ್ಮೇಳನ, ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಅಲ್ಲಮಪ್ರಭು ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
    ಜ.26ರ ಬೆಳಗ್ಗೆ 10ಕ್ಕೆ ಶೂನ್ಯ ಪೀಠಾರೋಹಣ, ಆನ್‌ಲೈನ್ ಪ್ರಶ್ನೋತ್ತರ ಸ್ಪರ್ಧೆ, ಭಾವೈಕ್ಯ ಗೀತೆ, ಸಂಜೆ 5ಕ್ಕೆ ಭಾವೈಕ್ಯ ಸಮ್ಮೇಳನ ಹಾಗೂ ಗುರುಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಎರಡು ದಿನ ಮಕ್ಕಳು, ವಿದ್ಯಾರ್ಥಿಗಳು, ಹಿರಿಯರಿಗೆ ಹಲವು ಸ್ಪರ್ಧೆ ಆಯೋಜಿಸಲಾಗಿದೆ. 25ರ ಬೆಳಗ್ಗೆ 10ಕ್ಕೆ 10 ಮತ್ತು 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ, 18 ವರ್ಷ ಮೇಲ್ಪಟ್ಟವರಿಗೆ ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. 26ರ ಬೆಳಗ್ಗೆ 10ಕ್ಕೆ 18 ವರ್ಷ ಮೇಲ್ಪಟ್ಟವರಿಗೆ ರಂಗೋಲಿ ಸ್ಪರ್ಧೆ ಇರುತ್ತದೆ. ತಂಡಗಳಿಂದ ಜಿಲ್ಲಾ ಮಟ್ಟದ ಶಿವಾರ್ಪಣಂ ಶಿವಭಜನಾ ಸ್ಪರ್ಧೆ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ (ಮೊ. 948183171, 9480141998) ಸಂಪರ್ಕಿಸಬಹುದು ಎಂದರು.
    ಸಮಿತಿ ಕಾರ್ಯದರ್ಶಿ ಮಹಾಲಿಂಗಯ್ಯ ಶಾಸಿ, ಶಾಂತಾ ಆನಂದ್, ಪುಷ್ಪಾ ಹಾಲಪ್ಪ, ಡಾ. ಕಿರಣ್ ದೇಸಾಯಿ, ಬಳ್ಳಕೆರೆ ಸಂತೋಷ್, ಇ.ವಿಶ್ವಾಸ್, ಕೆ.ಆರ್.ಸೋಮನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts