More

    ಸಹಾಯ ಮಾಡುವ ಮೌಲ್ಯ ಬೆಳೆಸಿಕೊಳ್ಳುವುದೇ ನಿಜವಾದ ಧರ್ಮ: ಶ್ರೀ ಮಹಾಂತ ಸ್ವಾಮೀಜಿ

    ಸೊರಬ: ಸರ್ವ ಧರ್ಮಗಳು ಸಾರುವುದು ಒಂದೇ ಆಗಿದ್ದು ಮನುಕುಲದ ಒಳಿತು ಬಯಸುವುದಾಗಿದೆ. ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಬದುಕುವುದು ಎಲ್ಲ ಧರ್ಮ ಗ್ರಂಥಗಳಲ್ಲೂ ಬೋಽಸಿದ ಮೊದಲ ತತ್ವವಾಗಿದೆ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಹೇಳಿದರು.

    ಪಟ್ಟಣದ ಮಾರ್ಕೆಟ್ ರಸ್ತೆಯ ದಾರುಸ್ಸಲಾಂ ಶಾದಿ ಮಹಲ್‌ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಬುಧವಾರ ಹಮ್ಮಿಕೊಂಡ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ನೊಂದಿರುವ ಮತ್ತು ಕಷ್ಟಕ್ಕೆ ಸಿಲುಕಿದವರಿಗೆ ರಕ್ಷಣೆ ನೀಡುವ ಜತೆಗೆ ಸಹಾಯ ಮಾಡುವ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವುದು ನಿಜವಾದ ಧರ್ಮವಾಗಿದೆ. ಎಲ್ಲ ಧರ್ಮಗಳು ಶಾಂತಿ-ಸೌಹಾರ್ದತೆಯಿAದ ಬದುಕುವುದನ್ನು ತಿಳಿಸಿಕೊಟ್ಟಿದೆ ಎಂದರು.
    ರಾಜ್ಯದಲ್ಲಿ ಅನೇಕ ಮಂದಿರಗಳು ಸೌಹಾರ್ದತೆಯ ಪ್ರತೀಕವಾಗಿದ್ದು ಇಂದಿಗೂ ಸಹ ಹಿಂದು, ಮುಸ್ಲಿಂ, ಕ್ರೆÊಸ್ತ ಸೇರಿ ಅನೇಕ ಧರ್ಮೀಯರು ಒಗ್ಗೂಡಿ ಉತ್ಸವ, ಸಮಾರಂಭ ನಡೆಸುವುದನ್ನು ಕಾಣಬಹುದು. ಧರ್ಮ ಗ್ರಂಥಗಳ ಬಗ್ಗೆ ಪರಿಪೂರ್ಣ ಅರಿವು ಹೊಂದಬೇಕು. ಧರ್ಮವೆಂಬುದು ಸೂಕ್ಷ÷್ಮ ವಿಷಯ. ಸಮರ್ಪಕವಾಗಿ ಅರ್ಥೈಸಿಕೊಳ್ಳದಿದ್ದರೆ ಸಮಾಜದಲ್ಲಿ ದ್ವಂದ್ವಗಳು ಸೃಷ್ಟಿಯಾಗುತ್ತೆ. ಬಸವಾದಿ ಶರಣರು ದಯವೇ ಧರ್ಮದ ಮೂಲವೆಂದು ಮಾರ್ಗದರ್ಶನ ನೀಡಿದ್ದಾರೆ. ಇದನ್ನರಿತು ಯುವ ಜನಾಂಗ ಶಾಂತಿ ಬದುಕಿನತ್ತ ಸಾಗಬೇಕು ಎಂದು ತಿಳಿಸಿದರು.
    ಪ್ರವಾದಿ ಮುಹಮ್ಮದ್(ಸ) ಸಮಾನತೆಯ ಸಮಾಜದ ಶಿಲ್ಪಿ ವಿಷಯದ ಕುರಿತು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಪ್ರವಚನ ನೀಡಿ, ಪ್ರಸ್ತುತ ದಿನಗಳಲ್ಲಿ ಎಲ್ಲವೂ ವ್ಯಾಪಾರೀಕರಣವಾಗುತ್ತಿದೆ. ಜನತೆಯಲ್ಲಿ ಧಾರ್ಮಿಕ ಅರಿವು ಮೂಡಿಸಿ ಮತ್ತು ಸನ್ಮಾರ್ಗದಲ್ಲಿ ನಡೆಯುವುದನ್ನು ಕಾಲ ಕಾಲಕ್ಕೆ ತಿಳಿಸಿಕೊಡುವುದು ಸಹ ಧರ್ಮಗಳ ಕರ್ತವ್ಯವಾಗಿದೆ. ಪ್ರವಾದಿಗಳು ಬೋಽಸಿದ ವಿಶ್ವಬಾಂಧವ್ಯ ಮತ್ತು ಮಾನವ ಸಮಾತೆಯ ಸಂದೇಶವು ಮಾನವಕುಲದ ಉದ್ಧಾರಕ್ಕೆ ಮುಹಮ್ಮದರು ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದರು.
    ಯೋಗೇಶ್ ಮಾಸ್ಟರ್ ರಚಿಸಿದ ನನ್ನ ಅರಿವಿನ ಪ್ರವಾದಿ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಅಬ್ದುಲ್ ರೆಹಮಾನ್, ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಯಾಸೀನ್, ಟಿ. ಮುಸ್ತಾಕ್, ಸಲೀಂ ಉಮ್ರಿ, ಪ್ರಮುಖರಾದ ಪಾಣಿ ರಾಜಪ್ಪ, ಡಾ. ಎಚ್.ಇ. ಜ್ಞಾನೇಶ್, ಮಲ್ಲಿಕಾರ್ಜುನ, ನಿವೃತ್ತ ಎಎಸ್‌ಐ ಶಬ್ಬೀರ್ ಅಹಮ್ಮದ್, ಮುಹಮ್ಮದ್ ಶಾಬುಲಾಲ್, ಖುತ್ಬುದ್ದಿನ್ ಹಜ್ರತ್ ಇತರರಿದ್ದರು. ಹಾಫಿಜ್ ಅಲಿಹಸನ್ ಕುರಾನ್ ಪಠಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts