More

    ಜೀವನದಲ್ಲಿ ಒಳ್ಳೆಯ ಮೌಲ್ಯ ರೂಢಿಸಿಕೊಳ್ಳಿ

    ಕಮತಗಿ: ವಿದ್ಯಾರ್ಥಿ ಜೀವನದಲ್ಲಿ ನೀವು ರೂಢಿಸಿಕೊಳ್ಳುವ ಮೌಲ್ಯ ನಿಮ್ಮ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್. ಮಾಯಾಚಾರಿ ಹೇಳಿದರು.

    ಸಮೀಪದ ನೀಲಾನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳು, 50 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ, ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಿಶೋರ ಸ್ವಾಸ್ಥೃ ಕಾರ್ಯಕ್ರಮದಡಿ ಹದಿಹರೆಯದ ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    10 ರಿಂದ 19 ವರ್ಷ ವಯಸ್ಸಿನ ಬಾಲ್ಯಾವಸ್ಥೆಯಿಂದ ತಾರುಣ್ಯಕ್ಕೆ ಮಾರ್ಪಾಡಾಗುವ ಮಧ್ಯದ ಕಾಲಘಟ್ಟದಲ್ಲಿ ದೈಹಿಕ, ಮಾನಸಿಕ ಭಾವನೆಗಳು ಬದಲಾವಣೆಯ ಮಹತ್ವದ ಕಾಲ. ಈ ವೇಳೆ ಜೀವನದಲ್ಲಿ ಏನಾಗಬೇಕೆಂಬ ಗುರಿ ನಿರ್ಧರಿಸಿಕೊಳ್ಳಬೇಕು. ಶಾಲಾ ಜೀವನದಲ್ಲಿ ಕಲಿಯುವ ಹೊಸ ವಿಚಾರ, ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

    ಆಪ್ತ ಸಮಾಲೋಚಕ ರಮೇಶ ಸೊಲ್ಲಾಪುರ ಮಾತನಾಡಿ, ಬಾಲ್ಯ ಮತ್ತು ವಯಸ್ಕತನದ ಮಧ್ಯೆ 10-19 ವರ್ಷದ ನಡುವಿನ ವಯೋಮಾನವೇ ಹದಿಹರೆಯ. ಪ್ರತಿಯೊಬ್ಬರಲ್ಲೂ ದೇಹದಲ್ಲಿ ಬದಲಾವಣೆಗಳು ಬೇರೆ ಬೇರೆ ಸಮಯದಲ್ಲಿ ಆಗಬಹುದು. ಆದರೆ ಪ್ರಕ್ರಿಯೆ ಒಂದೇ ಆಗಿರುತ್ತದೆ. ಆಗ ನಿಮ್ಮಲ್ಲಿ ಸಾಕಷ್ಟು ಪ್ರಶ್ನೆಗಳು ಉದ್ಭವಿಸಬಹುದು. ಅವುಗಳನ್ನು ಪೋಷಕರು, ಶಿಕ್ಷಕರು ಅಥವಾ ಆತ್ಮೀಯರಲ್ಲಿ ಹಂಚಿಕೊಂಡು ಉತ್ತರ ಕಂಡುಕೊಳ್ಳಬೇಕು. ಸ್ನೇಹಿತರ ಪ್ರಭಾವಕ್ಕೆ ಒಳಗಾಗುವುದು, ಸಾಮಾಜಿಕ ಮತ್ತು ಹಿರಿಯರ ಒತ್ತಡಗಳು, ಅಶ್ಲೀಲ ಸಾಹಿತ್ಯ, ಮಾಧ್ಯಮಗಳ ಕಡೆಗೆ ಗಮನ, ಧೂಮಪಾನ, ಮಧ್ಯಪಾನಗಳತ್ತ ಆಕರ್ಷಣೆಗೊಳಗಾಗಬಹುದು. ಶುಚಿತ್ವ ಕುರಿತು ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು. ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಇರುವ ಸೊಪ್ಪು, ತರಕಾರಿಗಳನ್ನು ಉಪಯೋಗಿಸಬೇಕೆಂದು ವಿವರಿಸಿದರು.

    ಶಾಲೆ ಶಿಕ್ಷಕರಾದ ಎಂ.ಟಿ. ಲಮಾಣಿ, ಪಿ.ಡಿ. ಅರಳಿಕಟ್ಟಿ, ಎಂ.ಎಚ್. ಪೊಲೇಶಿ, ಸಿ.ವಿ. ಪಟ್ಟಣಶೆಟ್ಟಿ, ಕೆ.ಎನ್. ಚನ್ನದಾಸರ, ಜಿ.ಎಸ್. ನಾಯಕ ಇದ್ದರು. ಪಿ.ಡಿ. ಅರಳಿಕಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts