More

    ಪ್ರವಾಹದ ಜತೆಗೆ ಕಸ-ಕಡ್ಡಿ ಬರೋದು ಸಹಜ: ರೌಡಿ ರಾಜಕೀಯ ಕುರಿತು ಸಿಟಿ ರವಿ ವ್ಯಾಖ್ಯಾನ

    ಬೆಂಗಳೂರು: ಕೇಡರ್ ಬೇಸ್ ಪಾರ್ಟಿ ಆಗಿದ್ದ ಬಿಜೆಪಿ ಮಾಸ್ ಪಾರ್ಟಿ ಆಗಿ ಬದಲಾಗಿದೆ. ಈ ವೇಳೆ ಪ್ರವಾಹದ ಜತೆಗೆ ಕಸ-ಕಡ್ಡಿಯಂತೆ ಅನೇಕರು ಹರಿದು ಬಂದಿರಬಹುದು. ಆದರೆ ಪಕ್ಷದ ನೀತಿ- ನಿಯತ್ತು ಎಂಬ ಡ್ಯಾಮ್ ಫಿಲ್ಟರ್ ಮಾಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ‌ ವ್ಯಾಖ್ಯಾನಿಸಿದರು.

    ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

    ರಾಜಕೀಯ ಕಾರಣಕ್ಕಾಗಿ 1990ರ ದಶಕದಲ್ಲಿ ನನ್ನ ಹೆಸರನ್ನು ಸಮಾಜಘಾತಕರ ಪಟ್ಟಿಗೆ ಸೇರಿಸಿ ಪೊಲೀಸ್ ಠಾಣೆಯಲ್ಲಿ ಫೋಟೋ ಅಂಟಿಸಿದ್ದರು. ರೌಡಿಶೀಟರ್ ಹೆಸರಿದ್ದವರೆಲ್ಲ ರೌಡಿಗಳು ಎನ್ನಲಾಗದು. ಸೈಲೆಂಟ್ ಸುನಿಲ್, ಬೆತ್ತನಗೆರೆ ಶಂಕರ್, ವಿಲ್ಸನ್ ಗಾರ್ಡನ್ ನಾಗಾ, ರವಿ ಹೆಸರುಗಳು ಗೊತ್ತಿಲ್ಲ, ಆ ಬಗ್ಗೆ ಮಾಹಿತಿಯೂ ಇಲ್ಲ. ಪಕ್ಷದ ತಂತ್ರಗಾರಿಕೆ ಬದಲಾಗುತ್ತದೆಯೇ ಹೊರತು ನೀತಿ- ನಿಯತ್ತು ಬದಲಾಗದು. ರೌಡಿಗಳ ಸೇರ್ಪಡೆಗೆ ಅವಕಾಶವಿಲ್ಲ ಎಂಬ ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆಯನ್ನೇ ಪುನರುಚ್ಚರಿಸಬಯಸುವೆ ಎಂದು ಸಿ.ಟಿ.ರವಿ ಹೇಳಿದರು.

    ಭೂಅಕ್ರಮ ತನಿಖೆಯಾಗಲಿ
    ದತ್ತ ಪೀಠ ವಿಚಾರವಾಗಿ ನಮ್ಮ ಸರ್ಕಾರ ಹಾಗೂ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ನ್ಯಾಯಾಲಯದ ಆದೇಶದ ಅನುಗುಣವಾಗಿ ಸಂಪುಟ ಉಪಸಮಿತಿ ತೆಗೆದುಕೊಂಡ ನಿರ್ಣಯದ ಶಿಫಾರಸು ಅಂಗೀಕರಿಸಿ ಆಡಳಿತ ಮಂಡಳಿಯನ್ನು ನೇಮಕ ಮಾಡಿದೆ. ಅರ್ಚಕರ ನೇಮಕಕ್ಕೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ನಾಲ್ಕು ದಶಕಗಳ ಹೋರಾಟದ ಈಡೇರಿಕೆಯ ಹಿನ್ನೆಲೆಯಲ್ಲಿ ವೈಭವನದ ದತ್ತ ಜಯಂತಿಯನ್ನು ಈ ಬಾರಿ ವೈಭವದಿಂದ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದತ್ತಾತ್ರೇಯ ದೇವರ ಹೆಸರಿನಲ್ಲಿದ್ದ 1860 ಎಕರೆ ಜಮೀನನ್ನು‌ ಅರ್ಜಿ ಹಾಕದೆ ಇದ್ದವರಿಗೂ ಅವತ್ತಿನ ಕಾಲದ ಮಂತ್ರಿಗಳ ಕುಟುಂಬದ ಹೆಸರಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ತನಿಖೆ ನಡೆಸಬೇಕು ಹಾಗೂ ಅಕ್ರಮ ಮಂಜೂರಾತಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

    ಕಾಂಗ್ರೆಸ್ ಪಕ್ಷವು ಮತೀಯ ರಾಜಕೀಯದ ಜೊತೆಗೆ ಆಸ್ತಿ ಹೊಡೆಯುವ ಸಂಚು ಇತ್ತು ಎಂಬುದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ಅಕ್ರಮ ಮಂಜೂರಾತಿ ರದ್ದುಗೊಳಿಸಿ ದತ್ತಾತ್ರೇಯ ದೇವರ ಹೆಸರಿನಲ್ಲಿ ಜಮೀನು ಕಾಯ್ದಿರಿಸಬೇಕು. ತನಿಖೆಗೆ ರಾಜ್ಯ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸಿ ಟಿ ರವಿ ಮನವಿ ಮಾಡಿದರು.

    ನಾನು ಯಾರ ಮೇಲೂ ದಬ್ಬಾಳಿಕೆ ಮಾಡಿರಲಿಲ್ಲ; ಆದರೂ ನನ್ನನ್ನು ರೌಡಿ ಶೀಟರ್​ ಪಟ್ಟಿಗೆ ಸೇರಿಲಾಗಿತ್ತು ಎಂದ ಸಿ.ಟಿ.ರವಿ

    ಚಿರತೆ ದಾಳಿ ತಡೆಗೆ ವಿಶೇಷ ತಂಡ ರಚನೆ; ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ

    ಕಿಲಾಡಿ ಲೇಡಿಯ ರಹಸ್ಯ ಆಧಾರ್​ ಕಾರ್ಡ್​ನಿಂದ ಬಯಲು​: ಅನಾಥೆ ಅಂತಾ ಅನುಕಂಪ ತೋರಿಸಿದ್ರೆ ಹೀಗ್​ ಮಾಡೋದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts