More

    ಮೇ ಅಂತ್ಯದ ವೇಳೆಗೆ ಕರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯ

    ಚಿಕ್ಕಮಗಳೂರು: ಮೇ ಅಂತ್ಯದ ವೇಳೆಗೆ ಜಿಲ್ಲೆಯಲ್ಲೇ ಕರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯ ಪ್ರಾರಂಭವಾಗಲಿದ್ದು, ಇಲ್ಲಿನ ಕೊರತೆ ನೀಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.

    ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪ್ರೆಸ್​ಕ್ಲಬ್ ಶನಿವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಮತ್ತು ಜಿಲ್ಲೆಯ ಸಮಸ್ಯೆಗಳ ಕುರಿತ ಮಾಧ್ಯಮ ಸಂವಾದದಲ್ಲಿ, ಕರೊನಾ ಸೋಂಕು ದೃಢಪಡಿಸಲು ಹಾಸನ ಮತ್ತು ಶಿವಮೊಗ್ಗ ಪ್ರಯೋಗಾಲಯಗಳನ್ನೇ ಅವಲಂಬಿಸಬೇಕಿರುವ ಬಗ್ಗೆ ಪ್ರಸ್ತಾಪವಾದ ಸಂದರ್ಭ ಮಾಹಿತಿ ನೀಡಿದರು.

    ಕರೊನಾ ಸೋಂಕು ಕಾಣಿಸಿಕೊಂಡಾಗ ರಾಜ್ಯದಲ್ಲಿ ಕೇವಲ ಮೂರು ಪ್ರಯೋಗಾಲಯಗಳು ಮಾತ್ರವಿದ್ದು, ಅದೀಗ 29ಕ್ಕೇರಿದೆ ಎಂದರು. ಜಿಲ್ಲೆ ಹಸಿರು ವಲಯದಲ್ಲೇ ಇದೆ. ಹೀಗಾಗಿ ಇಲ್ಲಿರುವ ಒಂಬತ್ತು ವೆಂಟಿಲೇಟರ್​ಗಳು ಸಾಕಾಗಲಿದ್ದು, ಇಡೀ ದೇಶದಲ್ಲೇ ಸೋಂಕು ತಗಲಿರುವವರಲ್ಲಿ ಶೇ.3 ರಷ್ಟು ಮಂದಿ ಮಾತ್ರ ವೆಂಟಿಲೇಟರ್ ಬಳಸುತ್ತಿದ್ದಾರೆ. ಹಾಗಾಗಿ ಇರುವುದರಲ್ಲೇ ಸುಧಾರಣೆಯಾಗಲಿದೆ ಎಂದರು.

    ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಮಾನಸಿಕ ಸ್ಥೈರ್ಯ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ ಲಾಕ್​ಡೌನ್ ಸಡಿಲಿಕೆಯ ಬಳಿಕ ಜವಾಬ್ದಾರಿಯುತ ನಡವಳಿಕೆ ಬಗ್ಗೆ ಜನ ಅರ್ಥ ಮಾಡಿಕೊಂಡಿಲ್ಲ. ಇದರಿಂದಾಗುವ ಅಪಾಯ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಚಿವರು ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts