More

    ಮುಳ್ಳಯ್ಯನಗಿರಿ ಸಂರಕ್ಷಣೆಗೆ ಪತ್ರ ಬರೆದದ್ದು ನಿಜ

    ಬಾಳೆಹೊನ್ನೂರು: ಜಿಲ್ಲೆಯ ಮುಳ್ಳಯ್ಯನಗಿರಿ ಅರಣ್ಯ ಪ್ರದೇಶವನ್ನು ಮೀಸಲು ಅರಣ್ಯವಾಗಿ ಘೊಷಿಸುವಂತೆ ನಾನು ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದದ್ದು ನಿಜ ಎಂದು ಶಾಸಕ ಟಿ.ಡಿ.ರಾಜೇಗೌಡ ಸ್ಪಷ್ಟಪಡಿಸಿದರು.

    ಮುಳ್ಳಯ್ಯನಗಿರಿ, ಬಾಬಾಬುಡನ್​ಗಿರಿಯ ಹುಲ್ಲುಗಾವಲನ್ನು ಕಂದಾಯ ಇಲಾಖೆ ಸರಿಯಾಗಿ ರಕ್ಷಿಸುತ್ತಿಲ್ಲ. ಪ್ರತಿ ವರ್ಷ ಈ ಪ್ರದೇಶದಲ್ಲಿ ಬೆಂಕಿ ಬಿದ್ದು ಅನಾಹುತ ಸಂಭವಿಸುತ್ತಿದೆ. ಅಲ್ಲದೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಈ ಕಾರಣಕ್ಕೆ ಪತ್ರ ಬರೆದಿದ್ದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಮುಳ್ಳಯ್ಯನಗಿರಿ ಅರಣ್ಯ ಪ್ರದೇಶದಲ್ಲಿ ಅನೇಕ ಗ್ರಾಮಗಳ ಗ್ರಾಮದೇವತೆಗಳ ಗಡಿ ಇದೆ. ರೈತರು ದೇವರಿಗಾಗಿ ಗೋವುಗಳನ್ನು ಹರಕೆ ಬಿಡುತ್ತಾರೆ. ಹಲವು ವನ್ಯಜೀವಿಗಳಿವೆ. ವೇದಾವತಿ, ಯಗಚಿ ಸೇರಿ ಸಣ್ಣಪುಟ್ಟ ನದಿಗಳ ಉಗಮ ಸ್ಥಾನ. ಭದ್ರಾ ನದಿಯ ಜಲಮೂಲ ಸಹ ಇಲ್ಲಿದೆ. ಈ ಪ್ರದೇಶದಲ್ಲಿ ಬೆಟ್ಟ ಇರುವ ಕಾರಣ ಪ್ರಕೃತಿ ವಿಕೋಪಗಳನ್ನು ತಡೆಯಲು, ಮಳೆ ಸುರಿಸಲು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಾನು ಸೇರಿದಂತೆ ಶಾಸಕ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ, ಧಮೇಗೌಡ ಮತ್ತಿತರರು ಸರ್ಕಾರಕ್ಕೆ ಪತ್ರ ನೀಡಿದ್ದೇವೆ ಎಂದರು.

    ಆ ಪ್ರದೇಶದ ಕೃಷಿ ಭೂಮಿ, 94ಸಿ ಜಾಗ, ಫಾಮ್ರ್ ನಂ.50, 53ರ ಜಾಗ ಹೊರತುಪಡಿಸಿ ಮೀಸಲು ಅರಣ್ಯವಾಗಿ ರಕ್ಷಣೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೃಷಿ ಭೂಮಿ ಹೊರತುಪಡಿಸಿ ಅರಣ್ಯ ಇಲಾಖೆ ತನ್ನ ಭೂಮಿ ರಕ್ಷಿಸಬೇಕಿದೆ. ಈ ಬಗ್ಗೆ ಗಿರಿ ಪ್ರದೇಶದ ನಿವಾಸಿಗಳೊಂದಿಗೂ ಚರ್ಚೆಯನ್ನೂ ಮಾಡಿದ್ದೇನೆ. ಆದರೆ ಇತರೆ ಪಕ್ಷಗಳು ಈ ಪತ್ರವನ್ನು ಹಿಡಿದುಕೊಂಡು ರಾಜಕೀಯ ಸ್ವಾರ್ಥಕ್ಕಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts