More

    ಸ್ವಾತಂತ್ರ್ಯ ಬಂದಾಗ ಈ ಜೋಡಿ ದೇಶದಲ್ಲಿ ಇದ್ದಿದ್ದರೆ ಪಾಕಿಸ್ತಾನ ಇರುತ್ತಿತ್ತಾ? ಪಾಕ್ ಬೇಕು ಎಂದವರಿಗೆ ಕಟ್​ ಮಾಡ್ತಿದ್ರು: ಸಿ.ಟಿ.ರವಿ

    ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೋಡಿಯನ್ನು ಸಾಮಾನ್ಯವಾಗಿ ಪಕ್ಷದ ಎಲ್ಲರೂ ಹೊಗಳುತ್ತಿರುತ್ತಾರೆ. ಭಲೇ ಜೋಡಿ ಎಂದು ಆಗಾಗ ಮೆಚ್ಚುಗೆ ಸೂಚಿಸುತ್ತಿರುತ್ತಾರೆ. ಅಂಥದ್ದೇ ಒಂದು ಮೆಚ್ಚುಗೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇದೀಗ ವ್ಯಕ್ತಪಡಿಸುವ ಜೊತೆಗೆ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

    ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಜನಸೇವಕ ಸಭೆಯಲ್ಲಿ ಮಾತನಾಡಿದ ಸಿ.ಟಿ. ರವಿ, ಸ್ವಾತಂತ್ರ್ಯ ಬಂದಾಗ ಈ ಜೋಡಿ ದೇಶದಲ್ಲಿ ಇದ್ದಿದ್ದರೆ ಪಾಕಿಸ್ತಾನ ಇರುತ್ತಿತ್ತಾ? ಪಾಕಿಸ್ತಾನ ಬೇಕು ಅಂದವರಿಗೆ ಕಟ್ ಮಾಡ್ತಿದ್ರು. ಅಂದೇ ಆ ಸಮಸ್ಯೆ ಬಗೆಹರಿಸುತ್ತಿದ್ರು. ಸುದೈವ 70 ವರ್ಷದ ಕಾಂಗ್ರೆಸ್ ಕಾಯಿಲೆಗೆ ಈ ಜೋಡಿ ಮದ್ದು ಕೊಡ್ತಿದೆ ಎಂದು ಮೋದಿ-ಷಾ ಜೋಡಿಯನ್ನು ಹೊಗಳುತ್ತ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ. ನಮ್ಮ ಪ್ರಧಾನಿ ಪ್ರಧಾನ ಸೇವಕ, ನಾವು ಜನ ಸೇವಕರು. ನಮ್ಮ ಹಳ್ಳಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು. ಜಾತಿ ವ್ಯವಸ್ಥೆ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂದು ಸಿ.ಟಿ. ರವಿ ಹೇಳಿದರು.

    ಜನಸೇವಕ ಸಭೆಯ ವೇದಿಕೆಗೆ ಆಗಮಿಸಿದ ಅಮಿತ್ ಶಾ ಆಗಮಿಸಿದ್ದು, ಸಿಎಂ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ನಳಿನ್​ ಕುಮಾರ್ ಕಟೀಲ್, ಬಸವರಾಜ ಬೊಮ್ಮಯಿ ಮತ್ತಿತರರು ಸಾಥ್ ನೀಡಿದರು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತರಿದ್ದು, ಬೆಳಗಾವಿಯ ಕಾರ್ಯಕರ್ತರು ಷಾಗೆ ಕೇಸರಿ ಪೇಟ ತೊಡಿಸಿ, ಆಧುನಿಕ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತ ಬಣ್ಣಿಸಿದರು. ಅಮಿತ್ ಶಾಗೆ ರಮೇಶ್ ಜಾರಕಿಹೊಳಿ ಹಾರ ಹಾಕಿದರೆ, ಲಕ್ಷ್ಮಣ ಸವದಿ ಗದೆ ನೀಡಿದರು.

    ಮತ್ತೆ ಲಾಕ್​ಡೌನ್​! ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಎಲ್ಲ ಬಂದ್​!

    ನಿಮ್ಮ ಪ್ರಶ್ನೆ ಓದಿ ನಗ್ಬೇಕೋ, ಅಳ್ಬೆಕೋ ಗೊತ್ತಾಗ್ತಿಲ್ವಲ್ಲಾ ಸ್ವಾಮಿ… ಯಾವ ಕಾಲದಲ್ಲಿದ್ದೀರಿ ನೀವು?

    ಕಾಂಡೋಮ್​ ಚಿತ್ರವನ್ನು ಟ್ವೀಟ್ ಮಾಡಿ ಹಿಂದು ಭಾವನೆಗೆ ಧಕ್ಕೆ ತಂದ ನಟಿ ವಿರುದ್ಧ ಭಾರೀ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts