More

    ಮಳೆಗೆ ಡೋಂಟ್​ಕೇರ್​,ಮುಳ್ಳಯ್ಯನ ಗಿರಿಯಲ್ಲಿ ಪ್ರವಾಸಿಗರ ದಂಡು: ಕಿಲೋಮೀಟರ್​ ಗಟ್ಟಲೆ ಟ್ರಾಫಿಕ್​ ಜಾಮ್​!

    ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿಗೆ ಪ್ರವಾಸಿಗರು ಆಗಮಿಸುವುದು ಹೊಸದೇನಲ್ಲವಾದರೂ, ಈ ಬಾರಿ ಸಾಗರೋಪಾದಿಯಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

    ಕಳೆದೆರಡು ವರ್ಷಗಳಿಂದ ಕರೊನಾ ಕಾರಣದಿಂದ ಅಷ್ಟಾಗಿ ಪ್ರವಾಸಿಗರು ಇಲ್ಲಿ ಭೇಟಿ ನೀಡಿರಲಿಲ್ಲ, ಈ ವರ್ಷದ ಆರಂಭದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದರೂ, ಕಳೆದೆರಡು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

    ಇನ್ನು ವೀಕೆಂಡ್​ ಭಾನುವಾರವಾದ ಇಂದೂ ಕೂಡ ಹೆಚ್ಚಿನ ಜನರು ಭೇಟಿ ನೀಡಿದ್ದು, ರಸ್ತೆಯಲ್ಲೇ ಕಿಲೋ ಮೀಟರ್​ಗಟ್ಟಲೆ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸಿರುವುದರಿಂದ ವಾಹನ ಸವಾರರು ಪರದಾಡುವಂತಾಯಿತು. ಮಳೆಯೂ ಲೆಕ್ಕಿಸಿದ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದರು. (ದಿಗ್ವಿಜಯ ನ್ಯೂಸ್​)

    ಸಣ್ಣ ವಯಸ್ಸಿಗೆ ಕ್ಯಾನ್ಸರ್​ಗೆ ಬಲಿಯಾದ ಖ್ಯಾತ ನಟ, ಫಲಕಾರಿಯಾಗಲಿಲ್ಲ ಚಿಕಿತ್ಸೆ: ಚೆನ್ನೈ ಆಸ್ಪತ್ರೆಯಲ್ಲಿ ಕೊನೆಯುಸಿರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts