More

    ಅಧಿಕಾರಿಗಳ ತಪ್ಪು ಮಾಹಿತಿಯಿಂದ ಬೆಳೆ ವಿಮೆ ತೊಂದರೆ

    ಕುಂದಗೋಳ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿದ ರೈತರಿಗೆ ಬೆಳೆ ವಿಮೆ ಅಧಿಕಾರಿಗಳು ಕೊಟ್ಟಿರುವ ತಪ್ಪು ವರದಿಯಿಂದ ತೊಂದರೆಯಾಗಿದೆ. ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಿದ್ದಾರೆ. ವಿನಾಕಾರಣ ಅವರ ಮೇಲೆ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷರು ಆರೋಪ ಮಾಡುವುದು ತಪ್ಪು ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಹೇಳಿದರು.
    ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಫಸಲ್ ಬಿಮಾ ಯೋಜನೆಯಡಿ 2019ರಲ್ಲಿ 1,65,904 ರೈತರು ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ 68,192 ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿದೆ. 2020ರಲ್ಲಿ 1,11,324 ರೈತರು ನೋಂದಣಿ ಮಾಡಿಸಿದ್ದು, ಅದರಲ್ಲಿ 35,049 ರೈತರಿಗೆ ಪರಿಹಾರ ಸಿಕ್ಕಿದೆ. 2021ರಲ್ಲಿ 1,89,027 ರೈತರು ನೋಂದಣಿ ಮಾಡಿಸಿದ್ದು 61,983 ರೈತರಿಗೆ ಪರಿಹಾರ ಸಿಕ್ಕಿದೆ. 2022ರಲ್ಲಿ 1,87,893 ರೈತರು ನೋಂದಣಿ ಮಾಡಿಸಿದ್ದು, 63,609 ರೈತರಿಗೆ ಬೆಳೆ ವಿಮೆ ಪರಿಹಾರ ದೊರೆತಿದೆ ಎಂದರು.
    ಮಾಹಿತಿ ಸರಿ ಇದ್ದರೆ ಮಾತ್ರ ಮಾತನಾಡಬೇಕು. ಮಾಹಿತಿ ಇಲ್ಲದೆ ಏನೇನೋ ಮಾತನಾಡಬಾರದು. ವಿನಾಕಾರಣ ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
    ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಕಿಸಾನ್ ಘಟಕದಿಂದ ಸುದ್ದಿಗೋಷ್ಠಿ ಮಾಡಿ ಇದರಲ್ಲಿ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ರೈತರಿಗೆ ಸಾಲ ಕೊಡಲು ಹಿಂದೇಟು ಹಾಕುತ್ತಿವೆ ಹಾಗೂ ಬೆಳೆ ವಿಮೆ ಪರಿಹಾರ ಕುರಿತು ರೈತರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಕೇಂದ್ರ ಸಚಿವ, ಸಂಸದ ಪ್ರಲ್ಹಾದ ಜೋಶಿಯವರು ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ, ಸಂಸದರು ಈ ಕ್ಷೇತ್ರದಲ್ಲಿ ಯಾವ್ಯಾವ ಸಮಯದಲ್ಲಿ ರೈತರಿಗೆ ಅನ್ಯಾಯ ಹಾಗೂ ಸಮಸ್ಯೆಯಾಗಿದೆಯೋ ಆಗ ಅವರ ಬೆನ್ನೆಲುಬಾಗಿ ನಿಂತಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಿಸಾನ್ ಘಟಕ ಜಿಲ್ಲಾಧ್ಯಕ್ಷ ಮುತ್ತಣ್ಣ ಶಿವಳ್ಳಿಯವರು ಆರೋಪ ಸತ್ಯಕ್ಕೆ ದೂರವಾದ ಮಾತಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಭರಮಗೌಡ ದ್ಯಾವನಗೌಡ, ಫಕೀರೇಶ ಕೋರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts